ಬೆಂಗಳೂರು(ಸೆ.18): ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಿಯಲ್ ಸ್ಟಾರ್ ಉಪೇಂದ್ರಗೆ ಮುಕುಂದ ಮುರಾರಿ ಚಿತ್ರ ಭರ್ಜರಿ ಗಿಫ್ಟ್ ನೀಡಿದ್ದು, ಚಿತ್ರದಲ್ಲಿ ಉಪೇಂದ್ರ ಹಾಡಿರುವ ಹಾಡಿನ ಟೀಸರ್ ಬಿಡುಗಡೆ ಮಾಡಿದೆ.
ಈ ಹಾಡಿನಲ್ಲಿ ಉಪೇಂದ್ರ ತಮ್ಮ ಹಳೇ ಸ್ಟೈಲಿನಲ್ಲಿ ತತ್ವ ಹೇಳಿದ್ದು, ಕೋಪಿಷ್ಠ, ಪಾಪಿಷ್ಠ, ಅನಿಷ್ಠ ಏನೀಗಾ, ನಾನು ದೇವರ ಹೆಸರಿನಲ್ಲಿ ಹೆದರಿಸುವ ಟೆರರಿಷ್ಟ್ ಅಲ್ಲ ಎಂದು ಹೇಳಿದ್ದಾರೆ.
ಹಾಡನ್ನು ಸ್ವತ್ಃ ಉಪೇಂದ್ರ ಅವರೇ ಹಾಡಿದ್ದು, ಈ ಹಾಡು ಖಂಡಿತ ಉಪ್ಪಿ ಅಭಿಮಾನಿಗಳಿಗೆ ಇಷ್ಟವಾಗಲಿದೆ ಎನ್ನವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಹಾಡಿನಲ್ಲೂ ಉಪ್ಪಿ ಫಿಲ್ಟರ್ ಇಲ್ಲದೇ ದೇವರಿಗೆ ಅವಾಜ್ ಹಾಕಿದ್ದಾರೆ.
