Asianet Suvarna News Asianet Suvarna News

ಬಂತು ಬಂದಿಲ್ಲ ಉಪ್ಪಿಯ 'UI' ಫಸ್ಟ್ ಟೀಸರ್: ತಲೆಗೆ ಹುಳ ಬಿಡೋದ್ರಲ್ಲಿ ಏನ್ ಒನ್ ಬುದ್ದಿವಂತ

ರಿಯಲ್ ಸ್ಟಾರ್ ಉಪ್ಪಿಯ ಮತ್ತೊಂದು ಡ್ರೀಮ್ ಪ್ರಾಜೆಕ್ಟ್. ಯುಐ ಟೀಸರ್ಗಾಗಿ ಫ್ಯಾನ್ಸ್ ಪ್ರೊಟೆಸ್ಟ್ ಮಾಡಿದ್ರು. ಈ ಪ್ರೊಟೆಸ್ಟ್ ಫಲ ಉಪ್ಪಿ ಹುಟ್ಟುಹಬ್ಬಕ್ಕೆ ಯುಐ ಟೀಸರ್ ಕೊಟ್ರು. ಆದ್ರೆ ಈ ಟೀಸರ್ ಕಿಕ್ ಹೆಂಗಿದೆ ಗೊತ್ತಾ.? ಬಂತು ಬಂದಿಲ್ಲ 'UI' ಟೀಸರ್. 

UI teaser Upendra leaves it to your imagination gvd
Author
First Published Sep 20, 2023, 12:43 PM IST

ರಿಯಲ್ ಸ್ಟಾರ್ ಉಪ್ಪಿಯ ಮತ್ತೊಂದು ಡ್ರೀಮ್ ಪ್ರಾಜೆಕ್ಟ್. ಯುಐ ಟೀಸರ್ಗಾಗಿ ಫ್ಯಾನ್ಸ್ ಪ್ರೊಟೆಸ್ಟ್ ಮಾಡಿದ್ರು. ಈ ಪ್ರೊಟೆಸ್ಟ್ ಫಲ ಉಪ್ಪಿ ಹುಟ್ಟುಹಬ್ಬಕ್ಕೆ ಯುಐ ಟೀಸರ್ ಕೊಟ್ರು. ಆದ್ರೆ ಈ ಟೀಸರ್ ಕಿಕ್ ಹೆಂಗಿದೆ ಗೊತ್ತಾ.? ಬಂತು ಬಂದಿಲ್ಲ 'UI' ಟೀಸರ್. ನೋಡಿದ್ವಿ ನೋಡ್ಲಿಲ್ಲ ರಿಯಲ್ ಸ್ಟಾರ್ ದರ್ಬಾರ್ ಅನ್ನೋ ಹಾಗಾಗಿದೆ. ಇದೇನಿದು ಯುಐ ಟೀಸರ್ ಬರೀ ಬ್ಲಾಕ್ ಬ್ಲಾಕ್ ಬ್ಲಾಕ್. ಟೀಸರ್ ತೋರ್ಸಿ ಅಂದ್ರೆ ಕೇಳಿಸ್ತಿದ್ದಾರಲ್ಲ ಅಂತ ಅನ್ಕೊಬೇಡಿ. ಇದು ನವ್ ಮಾಡಿದ್ದಲ್ಲ. ಇದು ಉಪ್ಪಿ ಸ್ಟೈಲು. ಉಪೇಂದ್ರ ಅಂದ್ರೇನೆ ಡಿಫ್ರೆಂಟು. ಪ್ರೇಕ್ಷಕರ ತಲೆಗೆ ಹುಳ ಬಿಡೋದೇ ಅವರ ಟ್ಯಾಲೆಂಟು. 

ಯು ಐ ಟೀಸರ್ ಕೂಡ ಅದೇ ಮಾಡಿದೆ. ಈ ಟೀಸರ್ ನೋಡಿದವರಿಗೆ ನೋಡಿದ್ವಿ ಅನ್ನೋ ಹಾಗಿಲ್ಲ. ನೋಡಿಲ್ಲ ಅನ್ನಂಗು ಇಲ್ಲ. ಟೋಟಲಿ ಏನ್ ಹೇಳ್ಬೇಕು ಗೊತ್ತಿಲ್ಲ. ಬ್ಲಾಕ್ ಆಗಿರೋ ಟೀಸರ್ನಲ್ಲಿ ನಮ್ಮ ಕಲ್ಪನೆಗೆ ತಕ್ಕಂತೆ ಏನ್ ಬೇಕಾದ್ರು ತುಂಬಿಕೊಳ್ಳಬಹದು. ಉಪ್ಪಿ ಸಿನಿಮಾಗಳು ಅಂದ್ರೆ ಹಂಗೆ ತಲೆಗೆ ಹುಳ ಬಿಟ್ಟು ಕೆದಕಿ ಹುಣ್ಣ ಮಾಡಿ ಆ ಮೇಲೆ ಫುಲ್ ಮಿಲ್ಸ್ ಎಂಟರ್ಟೈನ್ಮೆಂಟ್ ಕೊಡೋ ಡೈರೆಕ್ಟರ್ ಉಪೇಂದ್ರ. ಉಪ್ಪಿ ಈಗಿಂದ ಹಿಂಗಲ್ಲ. ಆಕ್ಷನ್ ಕಟ್ ಹೇಳೋಕೆ ಶುರು ಮಾಡಿದಾಗ್ಲಿಂದು ಹಿಂಗೆ.

ಇದಕ್ಕೆ ಫಸ್ಟ್ ಎಕ್ಸಾಂಪಲ್ಲೇ ತರ್ಲೆ ನನ್ ಮಗ ಸಿನಿಮಾದ ಈ ಸೀನ್. ಉಪೇಂದ್ರ ಎಂಥಾ ಟ್ಯಾಲೆಂಟ್ ಡೈರೆಕ್ಟರ್ ಅಂದ್ರೆ ಏ ಸಿನಿಮಾದ ಓಪನಿಂಗ್ ಸೀನ್ನಲ್ಲೇ ಕ್ಲೈಮ್ಯಾಕ್ಸ್ ತೋರಿಸಿದ್ರು. ಇದನ್ನ ಯಾರಿಂದಾದ್ರು ಮರೆಯೋಕೆ ಸಾಧ್ಯನಾ. ಉಪೇಂದ್ರ ಬುದ್ದಿವಂತರ ಬುದ್ದಿಗೆ ಸವಾಲ್ ಹಾಕೋ ಸಿನಿಮಾ ಮಾಡಿದ್ದಾರೆ. ಅದಕ್ಕೆ ಸಾಕ್ಷಿ ಉಪೇಂದ್ರ ಸಿನಿಮಾ. ಈ ಸಿನಿಮಾದಲ್ಲಿ ನಾನು ಅಂದ್ರೆ ಯಾರು ಅಂತ ಹೇಳಿದ್ರು. ಉಪ್ಪಿ2 ಸಿನಿಮಾದ ಓಪನಿಂಗ್ ಸೀನ್ನಲ್ಲಿ ಒಂದು ನಿಮಿಷ ಬರೀ ವೈಟ್ ಸ್ಕ್ರೀನ್ ತೋರಿಸ್ರು ಉಪೇಂದ್ರ. ತಲೆ ಕೆಳಗಾಗಿ ನಿಂತ್ಕೊಂಡು ಅಘೋರಿಯಾಗಿದ್ರು. 

ನನ್ನ ಜೀವನದಲ್ಲಿ ನೀನು ಫೇವರಿಟ್​ ಡೈರೆಕ್ಟರ್: ಉಪೇಂದ್ರ ಬಗ್ಗೆ ಮನಸಾರೆ ಮಾತನಾಡಿದ ಶಿವಣ್ಣ

ಅಷ್ಟೆ ಯಾಕೆ ಉಪ್ಪಿ ಟ್ಯಾಲೆಂಟ್ ಒಂದೇ ಎರಡೇ.. ಶ್.. A.. ಓಂ ಹೀಗೆ ಒಂದಕ್ಷರದಲ್ಲಿ ಸಿನಿಮಾದ ಟೈಟಲ್ ಇಟ್ಟು ಗೆದ್ದ ಬಿದ್ದಿವಂತ ಉಪೇಂದ್ರ. ಪೇಮ, ದಾಮಿನಿ ರವೀನಾ ಟಂಡನಾರನ್ನ ಸೇರಿಸಿ ನಾಯಕಿಯರ ರಿಯಲ್ ಹೆಸರನ್ನೇ ಟೈಟಲ್ ಮಾಡಿ ಉಪೇಂದ್ರ ಸಿನಿಮಾದವರು ನಮ್ ಉಪ್ಪಿ. ಎಲ್ಲಾ ಸಿನಿ ಮೇಕರ್ಸ್ಗಳ ಸಿನಿಮಾ ಫಾರ್ಮುಲಾ ಒಂದಾದ್ರೆ ಆ ಫಾರ್ಮುಲಾವನ್ನೇ ಉಲ್ಟಾ ಮಾಡೋ ದಮ್ ಇರೋ ಡೈರೆಕ್ಟರ್ ಉಪೇಂದ್ರ. ಈಗ ಉಪ್ಪಿ ಟ್ಯಾಲೆಂಟ್ನಲ್ಲಿ ಯು ಐ ಬರ್ತಾ ಇದೆ. ಈ ಸಿನಿಮಾದ ಟೀಸರ್ನಲ್ಲೂ ನಿಮ್ಮ ತಲೆಗೆ ಹುಳ ಬಿಟ್ಟಿದ್ದಾರೆ ರಿಯಲ್ ಸ್ಟಾರ್.

Follow Us:
Download App:
  • android
  • ios