ರಾಜಶೇಖರ್‌ ನಿರ್ದೇಶಿಸಿರುವ ಚಿತ್ರವಿದು. ಡಿ.28ರಂದು ತೆರೆಗೆ ಬರುತ್ತಿರುವ ಈ ಚಿತ್ರದ ಹೈಲೈಟ್ಸ್‌ಗಳೇನು? ಸಿನಿಮಾ ಬಿಡುಗಡೆಯ ಹೊತ್ತಿನಲ್ಲಿ ನಟ ವಿಜಯ್‌ ರಾಘವೇಂದ್ರ ಅವರೇ ಹೇಳಿಕೊಂಡಿರುವ ವಿಶೇಷತೆಗಳು ಇಲ್ಲಿವೆ.

1. ಭಿನ್ನ ಕತೆಯ ಮೂಲಕ ನಿರ್ದೇಶಕ ರಾಜಶೇಖರ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪರದೇಸಿ ಅಂದರೆ ದೇಶಿ ಅಂತಲೂ ಆಗಬಹುದು ಮತ್ತು ದಿಕ್ಕು ದೆಸೆ ಇಲ್ಲದವನು ಅಂತಲೂ ಆಗಬಹುದು. ಎರಡು ಅರ್ಥವೂ ನಮ್ಮ ಕಥೆಗೆ ಹೊಂದುವಂತೆ ಇದ್ದುದ್ದರಿಂದ ಟೈಟಲ್‌ ಸೂಕ್ತವಾಗಿದೆ.

2. ಆದರೂ ಟೈಟಲ್‌ಗೂ ಕಥೆಗೂ ಯಾವ ರೀತಿಯ ಸಂಬಂಧ ಎಂದು ಗೊತ್ತಾಗಬೇಕಾದರೆ ಸಿನಿಮಾ ನೋಡಲೇಬೇಕು. ಪರದೇಸಿ ಹಾಗೂ ಲಂಡನ್‌ಗೆ ಚಿತ್ರದೊಳಗೊಂದು ಅರ್ಥವಿದೆ. ಆ ಮೂಲಕ ಚಿತ್ರದ ಕಥೆಗೊಂದು ತಿರುವು ಕೊಡುವುದೇ ಈ ಲಂಡನ್‌.

3. ಇದೊಂದು ದೊಡ್ಡ ತಾರಾಬಳಗ ಇರುವ ಸಿನಿಮಾ. ಚಿತ್ರದ ನಾಯಕಿಯಾಗಿ ರಾಶಿ ಇದ್ದಾರೆ. ಉಳಿದಂತೆ ತಬಲನಾಣಿ, ಪೆಟ್ರೋಲ್‌ ಪ್ರಸನ್ನ, ಡ್ಯಾನಿ ಕುಟ್ಟಪ್ಪ, ಯತಿರಾಜ್‌ ನಟಿಸಿದ್ದಾರೆ. ಚಿತ್ರದ ಪ್ರತಿ ಪಾತ್ರವನ್ನೂ ನಿರ್ದೇಶಕರು ಅಚ್ಚುಕಟ್ಟಾಗಿ ರೂಪಿಸಿದ್ದಾರೆ.

4. ತಾಂತ್ರಿಕವಾಗಿ ಸಿನಿಮಾ ತುಂಬಾ ಚೆನ್ನಾಗಿದೆ. ಚಿತ್ರಕ್ಕೆ ವೀರ್‌ ಸಮಥ್‌ರ್‍ ಸಂಗೀತ ನೀಡಿದ್ದು, ಡಾ ವಿ.ನಾಗೇಂದ್ರ ಪ್ರಸಾದ್‌, ಕವಿರಾಜ್‌, ಯೋಗರಾಜ ಭಟ್‌, ಶಿವು ಬೆರಗಿ ಸಾಹಿತ್ಯ ರಚಿಸಿದ್ದಾರೆ. ಹೀಗಾಗಿ ಹಾಡುಗಳು ಕೂಡ ಕೇಳುವಂತಿವೆ. ಈಗಾಗಲೇ ಚಿತ್ರದ ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಹಿಟ್‌ ಆಗಿದೆ.

5. ಬಳ್ಳಾರಿ ಮೂಲದ ಬದರಿನಾರಾಯಣ ಅವರು ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಇದೊಂದು ಕೌಟುಂಬಿಕ ಹಾಸ್ಯ ಚಿತ್ರವಾಗಿರುವ ಕಾರಣ ನಿರ್ಮಾಪಕರು ಪ್ರೀತಿಯಿಂದಲೇ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಬೆಂಗಳೂರು, ಸಿರಗುಪ್ಪ, ಮೈಸೂರು ಹಾಗೂ ಮಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದು, ಈ ಚಿತ್ರಕ್ಕೆ ಪತ್ರಕರ್ತ ವಿಜಯ್‌ ಭರಮಸಾಗರ ಸಂಭಾಷಣೆ ಬರೆದಿದ್ದು, ಚಿದಾನಂದ ಛಾಯಾಗ್ರಹಣ ಮಾಡಿದ್ದಾರೆ.