ಇದೊಂದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಆಗಿದ್ದು ಹೊಸೂರು ರಸ್ತೆ ಬಳಿಯ ಮಣಿಪಾಲ್ ಕೌಂಟಿ ರೆಸಾರ್ಟ್‌‌ನಲ್ಲಿ ವಿವಾಹವಾಗಲಿದ್ದಾರೆ.

ಚಿಂಗಾರಿ, ಆಟೋ ರಾಜ, ಜಗ್ಗುದಾದಾ ಮುಂತಾದ ಚಿತ್ರಗಳ ನಾಯಕಿ ದೀಪಿಕಾ ಕಾಮಯ್ಯ ನಾಳೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.ಇದೊಂದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಆಗಿದ್ದು ಹೊಸೂರು ರಸ್ತೆ ಬಳಿಯ ಮಣಿಪಾಲ್ ಕೌಂಟಿ ರೆಸಾರ್ಟ್‌‌ನಲ್ಲಿ ಸುಮಂತ್ ಗೋಪಿಯನ್ನು ವಿವಾಹವಾಗಲಿದ್ದಾರೆ. ಮನೆಯವರೇ ನೋಡಿದ ಹುಡುಗ ಸುಮಂತ್ ಆಸ್ಟ್ರೇಲಿಯಾದ ಪ್ರತಿಷ್ಠಿತ ಬ್ಯಾಂಕೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.ನಾಳೆ ಬೆಳಗ್ಗೆ 8 ಗಂಟೆಗೆ ಮದುವೆ ಮುಹೂರ್ತವಿದ್ದು 11 ಗಂಟೆಗೆ ಅಲ್ಲೇ ರಿಸೆಪ್ಶನ್ ಇರಲಿದೆ. ಕುಟುಂಬಸ್ಥರು, ಆಪ್ತರು ಮತ್ತು ಕೆಲವು ಗೆಳೆಯರು ಈ ಮದುವೆಯಲ್ಲಿ ಭಾಗವಹಿಸಲಿದ್ದಾರೆ. ಪಕ್ಕಾ ದಕ್ಷಿಣ ಭಾರತೀಯ ಶೈಲಿಯಲ್ಲಿ ದೀಪಿಕಾ ಕಾಮಯ್ಯ ಸುಮಂತ್ ಮದುವೆಯಾಗುತ್ತಿದ್ದಾರೆ.ಡಿಸೆಂಬರ್ ಮೂರನೇ ವಾರದ ದೀಪಿಕಾ ಆಸ್ಟ್ರೇಲಿಯಾಕ್ಕೆ ಹಾರಲಿದ್ದಾರೆ.

Add Asianetnews Kannada as a Preferred SourcegooglePreferred