ಟಾಲಿವುಡ್ ಸ್ಟಾರ್ ನಟರುಗಳಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಪ್ರಭಾಸ್ ಅಭಿಮಾನಿಗಳಿಗೆ ಹುಟ್ಟುಹಬ್ಬ ದಂದು ಸಿಹಿ ಸುದ್ದಿ ಕೋಡಲಿದ್ದಾರೆ.
ಹೌದು! ಕಳೆದ ವರ್ಷ ಹುಟ್ಟುಹಬ್ಬದ ದಿನ ಬಾಹುಬಲಿ ಚಿತ್ರದ ಪೊಸ್ಟರ್ ಬಿಡುಗಡೆ ಮಾಡಿದ್ದು, ಬಹಳ ಯಶಸ್ವಿಯಾಗಿತ್ತು! ಅದೇ ತರಹ ಈ ವರ್ಷವು ‘ಸಂತಿಂಗ್ ಸ್ಪೇಷಲ್’ ಸುದ್ದಿಯೊಂದನ್ನು ತಮ್ಮ ಅಭಿಮಾನಿಗಳಿಗೆ ನೀಡಲು ಸಜ್ಜಾಗಿದ್ದಾರೆ. ಸದ್ಯ ಸುದ್ದಿಯಾಗ್ತಿರೋದು ಅವರ ಮದುವೆ ವಿಚಾರ. ಅವರ ಮದುವೆ ಹೆಚ್ಚು ಕೂತುಹಲ ಮೂಡಿಸಿದ್ದು ಅವರ ಆಪ್ತ ಮೂಲಗಳು ಹೇಳುವ ಪ್ರಕಾರ ಪ್ರಭಾಸ್ ಕೈ ಹಿಡಿಯಲಿರುವುದು ಯಾರೆಂದು ಬರ್ತ್ ಡೇಯಂದು ಹೇಳಲಿದ್ದಾರೆ ಎನ್ನಲಾಗುತ್ತಿದೆ.
ಆದ್ದರಿಂದ ಎಲ್ಲಾ ಫ್ಯಾನ್ಸ್ ಅಕ್ಟೋಬರ್ 23ಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
ಅವರು ಎಲ್ಲೆಡೆ ಅನುಷ್ಕಾ ಶೆಟ್ಟಿ ಜೊತೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಆನ್ ಸ್ಕ್ರೀನ್ ನಲ್ಲಿಯೂ ಕೂಡ ಈ ಜೋಡಿ ಹಿಟ್ ಜೋಡಿಯಾಗಿದೆ. ಆದರೆ ಅನುಷ್ಕಾ ಹಾಗೂ ಮದುವೆ ಬಗ್ಗೆ ಹೇಳಬಹುದಾ ಎನ್ನುವುದು ಕುತೂಹಲವಾಗಿದೆ.ಆದರೆ ಈ ಎಲ್ಲಾ ಕುತೂಹಲಗಳಿಗೆ ತೆರೆ ಬೀಳಬೇಕು ಎಂದರೆ ಅಕ್ಟೋಬರ್ 23ರವರೆಗೂ ಕೂಡ ಕಾಯುವುದು ಅನಿವಾರ್ಯ.
