ಸದ್ಯ ಬಿಡುಗಡೆಯಾಗಿರುವ ಗ್ಲಿಂಪ್ಸ್ ವೀಡಿಯೊ ಯಾವುದೇ 'ಎಐ' (AI) ತಂತ್ರಜ್ಞಾನ ಬಳಸದೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಚಾರ್ಮಿನಾರ್ ಹಿನ್ನೆಲೆಯಲ್ಲಿ ತೇಜ ಸಜ್ಜಾ ಕಾರಿನ ಮೇಲೆ ನಿಂತು ಬ್ಯಾಟ್ ಹಿಡಿದು ಜಾಂಬಿಗಳ ವಿರುದ್ಧ ಹೋರಾಡುವ ಆಕ್ಷನ್ ಸನ್ನಿವೇಶಗಳು ಗಮನಸೆಳೆಯುತ್ತವೆ.
Prashanth Varma Cinematic Universe and Teja Sajja New Movie starrer Zombie Reddy Sequel Zombie Reddy 2 NXT LVL movie Title Glimpse Launch- ತೇಜ ಸಜ್ಜಾ-ಪ್ರಶಾಂತ್ ವರ್ಮಾ ಕಾಂಬಿನೇಷನ್ ಹೊಸ ಚಿತ್ರ 'ಜಾಂಬಿ ರೆಡ್ಡಿ 2 NXT LVL'ದ ಟೈಟಲ್ ಗ್ಲಿಂಪ್ಸ್ ಬಿಡುಗಡೆ!
ನಟ ತೇಜ ಸಜ್ಜಾ ಹೆಸರು ಕೇಳದ ಭಾರತೀಯರು ಕಡಿಮೆ. 'ಹನು-ಮಾನ್' ಮತ್ತು 'ಮಿರಾಯ್' ಚಿತ್ರಗಳ ಮೂಲಕ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ 'ಯಂಗ್ ಸೂಪರ್ ಹೀರೋ' ನಟ ತೇಜ ಸಜ್ಜಾ ಇದೀಗ ಮತ್ತೊಂದು ಮೆಗಾ ಇಂಟರೆಸ್ಟಿಂಗ್ ಸಬ್ಜೆಕ್ಟ್ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ತೇಜ ಸಜ್ಜಾ ಅಭಿನಯದ, 'ಜಾಂಬಿ ರೆಡ್ಡಿ' ಸೀಕ್ವೆಲ್‌ನ ಅಧಿಕೃತ ಶೀರ್ಷಿಕೆ ಬಿಡುಗಡೆಯಾಗಿದೆ. ನಟ ತೇಜ ಸಜ್ಜಾ ಅವರ ಜನ್ಮದಿನದ ಅಂಗವಾಗಿ 'ಜಾಂಬಿ ರೆಡ್ಡಿ 2 NXT LVL- ಡೆಡ್ ಆರ್ ಅಲೈವ್' ಶೀರ್ಷಿಕೆಯನ್ನು ಅನಾವರಣ ಮಾಡಲಾಗಿದೆ.
ತೆಲುಗು ಚಿತ್ರರಂಗಕ್ಕೆ ಜಾಂಬಿ ಶೈಲಿಯನ್ನು ಪರಿಚಯಿಸಿದ ನಿರ್ದೇಶಕ ಪ್ರಶಾಂತ್ ವರ್ಮಾ
ತೆಲುಗು ಚಿತ್ರರಂಗಕ್ಕೆ ಜಾಂಬಿ ಶೈಲಿಯನ್ನು ಪರಿಚಯಿಸಿದ ನಿರ್ದೇಶಕ ಪ್ರಶಾಂತ್ ವರ್ಮಾ ಈ ಬಾರಿ ನಿರ್ದೇಶನದಿಂದ ಹೊರಗಿದ್ದು, ಕೇವಲ 'ಕ್ರಿಯೇಟರ್' ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ದಿ ಫ್ಯಾಮಿಲಿ ಮ್ಯಾನ್ 2' ಹಾಗೂ 'ರಾಬರ್ಟ್' ನಂತಹ ಒಟಿಟಿ ಹಿಟ್‌ಗಳನ್ನು ನೀಡಿದ ಖ್ಯಾತ ನಿರ್ದೇಶಕ ಸುಪರ್ಣ್ ಎಸ್ ವರ್ಮಾ ಅವರು ತೇಜ ಸಜ್ಜಾರ ಈ ಮುಂಬರುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಪೀಪಲ್ ಮೀಡಿಯಾ ಫ್ಯಾಕ್ಟರಿ' ಬ್ಯಾನರ್‌ನಡಿಯಲ್ಲಿ ಟಿ.ಜಿ. ವಿಶ್ವ ಪ್ರಸಾದ್ ಮತ್ತು ಕೃತಿ ಪ್ರಸಾದ್ ಈ 'ಜಾಂಬಿ ರೆಡ್ಡಿ 2 NXT LVL' ಚಿತ್ರವನ್ನು ಅದ್ಧೂರಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ.
ಈ ಚಿತ್ರದಲ್ಲಿ ಕನ್ನಡದ 'ರಿಯಲ್ ಸ್ಟಾರ್' ಉಪೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಬಾಲಿವುಡ್ ನಟಿ ಶನಾಯಾ ಕಪೂರ್ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾ, ಜಗತ್ತಿನಾದ್ಯಂತ ಬಿಡುಗಡೆಯಾಗುವ ಪ್ಲಾನ್ ರೂಪಿಸಿದೆ ಎನ್ನಲಾಗಿದೆ.
ಗ್ಲಿಂಪ್ಸ್ ವೀಡಿಯೊ ಯಾವುದೇ 'ಎಐ' (AI) ತಂತ್ರಜ್ಞಾನ ಬಳಸದೆ ಮಾಡಲಾಗಿದೆ
ಸದ್ಯ ಬಿಡುಗಡೆಯಾಗಿರುವ ಗ್ಲಿಂಪ್ಸ್ ವೀಡಿಯೊ ಯಾವುದೇ 'ಎಐ' (AI) ತಂತ್ರಜ್ಞಾನ ಬಳಸದೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಚಾರ್ಮಿನಾರ್ ಹಿನ್ನೆಲೆಯಲ್ಲಿ ತೇಜ ಸಜ್ಜಾ ಕಾರಿನ ಮೇಲೆ ನಿಂತು ಬ್ಯಾಟ್ ಹಿಡಿದು ಜಾಂಬಿಗಳ ವಿರುದ್ಧ ಹೋರಾಡುವ ಆಕ್ಷನ್ ಸನ್ನಿವೇಶಗಳು ಗಮನಸೆಳೆಯುತ್ತವೆ. ವೀಡಿಯೋ ಗೇಮ್ ಶೈಲಿಯ ಜೋಯ್‌ಸ್ಟಿಕ್ ರೂಪದ ಶೀರ್ಷಿಕೆ ಲೋಗೋ ಚಿತ್ರದ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ. ತೇಜ ಸಜ್ಜಾ ಫ್ಯಾನ್ಸ್ ಈ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಗೌರ ಹರಿ ಸಂಗೀತ, ಅಭಿನಂದನ್ ರಾಮಾನುಜಮ್ ಛಾಯಾಗ್ರಹಣ ಹೊಂದಿರುವ ಈ ಚಿತ್ರಕ್ಕೆ ಹುಸೇನ್ ದಲಾಲ್, ಅಬ್ಬಾಸ್ ದಲಾಲ್, ಪ್ರಶಾಂತ್ ವರ್ಮಾ ಹಾಗೂ ನಿರ್ದೇಶಕ ಸುಪರ್ಣ್ ಎಸ್ ವರ್ಮಾ ಚಿತ್ರಕಥೆ ಬರೆದಿದ್ದಾರೆ. ವಿಜಯ್ ವೇಲುಕುಟ್ಟಿ ಅವರ ಸಂಕಲನ ಈ ಚಿತ್ರಕ್ಕಿರಲಿದೆ. ಈ ಚಿತ್ರವು 2027 ರಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ನೇಪಾಳಿ ಹಾಗೂ ಜಪಾನೀಸ್ ಭಾಷೆಗಳಲ್ಲಿ ವಿಶ್ವಾದ್ಯಂತ ತೆರೆಕಾಣಲಿದೆ. ಈ ಸುದ್ದಿಯಿಂದ ತೇಜಾ ಸಜ್ಜಾ ಅಭಿಮಾನಿಗಳು ಅಕ್ಷರಶಃ ಖುಷಿಯಾಗಿದ್ದು, ಕ್ಯಾಲೆಂಡರ್ ಕೈನಲ್ಲಿ ಹಿಡಿದುಕೊಂಡು 2027 ಇಸ್ವಿಯ ಆಗಮನವನ್ನೇ ಕಾಯುತ್ತಿದ್ದಾರೆ.


