Asianet Suvarna News Asianet Suvarna News

ಶಿವಣ್ಣ ಬಿಟ್ಟರೆ ಸದ್ಯಕ್ಕೆ ಇವರೇ ಬ್ಯುಸಿ ಸ್ಟಾರ್!

ತಿಥಿ ಗಡ್ಡಪ್ಪ ಅಭಿನಯಿಸಿದ ಮತ್ತೊಂದು ಸಿನಿಮಾ ಅದರ ಹೆಸರು ಮತ್ತು ಟ್ರೇಲರ್‌ಗಳ ಮೂಲಕ ಕುತೂಹಲ ಮೂಡಿಸುತ್ತಿದೆ. ಚಿತ್ರದ ಹೆಸರು ‘ಕಮರೊಟ್ಟು ಚೆಕ್ ಪೋಸ್ಟ್’. ಈ ಹಿಂದೆ ‘ಮಾಮೂ ಟೀ ಅಂಗಡಿ’ ಚಿತ್ರವನ್ನು ನಿರ್ದೇಶಿಸಿದ್ದ ಪರಮೇಶ್ ಅವರ ನಿರ್ದೇಶನದ ಎರಡನೇ ಚಿತ್ರವಿದು.

Thithi Gaddappa busy with Kamarottu film
Author
Bengaluru, First Published Sep 20, 2018, 12:12 PM IST
  • Facebook
  • Twitter
  • Whatsapp

ಬೆಂಗಳೂರು (ಸೆ. 20):  ಗಡ್ಡಪ್ಪ ಮತ್ತು ಸೆಂಚುರಿ ಗೌಡ ಜೋಡಿಯ ಸಿನಿಮಾಗಳು ಎಷ್ಟಿವೆ? ಯಾವೆಲ್ಲ ಶೂಟಿಂಗ್ ನಡೆಯುತ್ತಿವೆ, ಯಾವೆಲ್ಲ ಬಿಡುಗಡೆಗೆ ಸಿದ್ದವಾಗಿವೆ ಎಂದು ಕೇಳಿದರೆ ತಕ್ಷಣಕ್ಕೆ ಹೇಳುವುದು ಕಷ್ಟ.

ಯಾಕೆಂದರೆ ಕನ್ನಡದಲ್ಲಿ ಸದ್ಯಕ್ಕೆ ಶಿವರಾಜ್‌ಕುಮಾರ್ ಹೊರತುಪಡಿಸಿದರೆ ಅತ್ಯಂತ ಬ್ಯುಸಿ ಸ್ಟಾರ್‌ಗಳು ಈ ‘ತಿಥಿ’ ಜೋಡಿ! ಇವರ ನಡೆಯಲ್ಲಿ ಸದ್ದಿಲ್ಲದೆ ಸಿನಿಮಾ ಸೆಟ್ಟೇರುತ್ತಲೇ ಇವೆ. ಅವರು ಅಭಿನಯಿಸಿದ ಮತ್ತೊಂದು ಸಿನಿಮಾ ಅದರ ಹೆಸರು ಮತ್ತು ಟ್ರೇಲರ್‌ಗಳ ಮೂಲಕ ಕುತೂಹಲ ಮೂಡಿಸುತ್ತಿದೆ.

ಚಿತ್ರದ ಹೆಸರು ‘ಕಮರೊಟ್ಟು ಚೆಕ್ ಪೋಸ್ಟ್’. ಈ ಹಿಂದೆ ‘ಮಾಮೂ ಟೀ ಅಂಗಡಿ’ ಚಿತ್ರವನ್ನು ನಿರ್ದೇಶಿಸಿದ್ದ ಪರಮೇಶ್ ಅವರ ನಿರ್ದೇಶನದ ಎರಡನೇ ಚಿತ್ರವಿದು. ‘ಕಮರೊಟ್ಟು ಚೆಕ್‌ಪೋಸ್ಟ್’ನಲ್ಲಿ ಗಡ್ಡಪ್ಪ ಒಬ್ಬರೇ ಇರೋದು. ಅವರ ಸೀನಿಯರ್ ಹೀರೋ ಸೆಂಚುರಿ ಗೌಡ ಇರಲ್ಲ ಎಂಬುದು ನಿಮ್ಮ ಗಮನಕ್ಕಿರಲಿ.

ಸದ್ಯ ಈ ಚಿತ್ರದಲ್ಲಿ ಪೋಸ್ಟರ್‌ಗಳಲ್ಲಿ ಗಡ್ಡಪ್ಪ ಬ್ಯಾಟರಿ ಹಿಡಿದು ಏನನ್ನೋ ಹುಡುಕುತ್ತಿರುವಂತೆ, ಕಾಯುತ್ತಿರುವಂತೆ ಕಾಣುತ್ತಿದ್ದು, ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಮಾಯಾಲೋಕ, ಕರ್ವಾಲೋ ಜಗತ್ತಿನಿಂದ ಸೀದಾ ಎದ್ದು ಬಂದ ಪಾತ್ರದಂತೆ ಕಾಣುತ್ತಿದ್ದಾರೆ.

ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ನಟ ರಾಘವೇಂದ್ರ ರಾಜ್‌ಕುಮಾರ್ ಬಿಡುಗಡೆ ಮಾಡಿದರು. ನಿರ್ದೇಶಕ ಪರಮೇಶ್ ಮತ್ತು ಚಿತ್ರತಂಡ ಅಪ್ಪಟ ಡಾ ರಾಜ್‌ಕುಮಾರ್ ಅಭಿಮಾನಿಗಳು. ಹೀಗಾಗಿ ರಾಘಣ್ಣ ಅವರಿಂದಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿಸಲಾಗಿದೆ.

ಡಾ ರಾಜ್‌ಕುಮಾರ್ ಹಾಗೂ ವರದಪ್ಪ ಅವರ ಭಾವಚಿತ್ರದೊಂದಿಗೆ ಟ್ರೇಲರ್ ಬಿಡುಗಡೆ ಮಾಡಿರುವುದು ರಾಘಣ್ಣ ಖುಷಿ ಕಾರಣವಾಗಿದೆ. ಈ ಚಿತ್ರಕ್ಕೆ ಸನತ್ ಮತ್ತು ಉತ್ಪಲ್ ನಾಯಕರಾದರೆ, ಸ್ವಾತಿ ಕೊಂಡೆ ಹಾಗೂ ಅಹಲ್ಯಾ ನಾಯಕಿಯರು. ಕನ್ನಡ ಚಿತ್ರವೊಂದರಲ್ಲಿ ಇದೇ ಮೊದಲ ಬಾರಿಗೆ ಊಸರವಳ್ಳಿಯೊಂದು ಮುಖ್ಯ ಪಾತ್ರವಾಗಿ ಕಾಣಿಸಿಕೊಂಡಿದ್ದು, ಇದನ್ನು ಆ್ಯನಿಮೇಷನ್ ಮೂಲಕ ತೆರೆ ಮೇಲೆ ಕ್ರಿಯೇಟ್ ಮಾಡಿದ್ದಾರಂತೆ.  

Follow Us:
Download App:
  • android
  • ios