ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಎರಡನೇ ಚಿತ್ರ ‘ವಿಐಪಿ’ಯ ಹೆಸರಿನ ಬಗ್ಗೆ ಗೊಂದಲವಿದೆ. ಈ ಚಿತ್ರಕ್ಕೆ ‘ಸನ್ ಆಫ್ ರವಿಚಂದ್ರನ್’ ಎಂಬ ಹೆಸರಿಡಬೇಕು ಅನ್ನುವುದು ಚಿತ್ರತಂಡದ ಆಸೆ. ಆದರೆ ಅದಿನ್ನೂ ಅಧಿಕೃತವಾಗಿಲ್ಲ. ಎಲ್ಲವೂ ಅಂದುಕೊಂಡಂತೆ ಆದರೆ ಮನೋರಂಜನ್ ಎರಡನೆಯ ಸಿನಿಮಾದ ಹೆಸರು ‘ಸನ್ ಆಫ್ ರವಿಚಂದ್ರನ್’. ಅಂದಹಾಗೆ ಈ ಸಿನಿಮಾದ ನಾಯಕಿ ಮಿಶ್ಟಿ ಚಕ್ರವರ್ತಿ. ಟೈಟಲ್ ಪ್ರಕಾರ ಹೇಳುವುದಾದರೆ ರವಿಚಂದ್ರನ್ ಸೊಸೆ.

ಮನೋರಂಜನ್ ಜೋಡಿಯಾಗಿರುವ ಈ ಹುಡುಗಿ ಬೆಂಗಾಲಿ ಬೆಡಗಿ. ವಾರದ ಹಿಂದಷ್ಟೇ ಮೈಸೂರಿನಲ್ಲಿ ಮನು ಈಕೆಯ ಜೊತೆ ಡ್ಯುಯೆಟ್ ಹಾಡಿದ್ದಾರೆ. ಅರಮನೆ ಮುಂಭಾಗ ಹಾಡಿನ ಚಿತ್ರೀಕರಣ ನಡೆದಿತ್ತು. ಈ ಬಗ್ಗೆ ಮನೋರಂಜನ್ ಹತ್ತಿರ ಕೇಳಿದರೆ, ‘ಚಿತ್ರದ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ನೀಡುವಂತಿಲ್ಲ. ಹಾಗಂತ ನಿರ್ದೇಶಕರು ಹೇಳಿದ್ದಾರೆ. ಇನ್ನೇನು ವಾರ ಕಳೆದರೆ ಚಿತ್ರದಲ್ಲಿನ ನನ್ನ ಪಾತ್ರ ಹಾಗೂ ವಿಶೇಷತೆ ಕುರಿತು ವಿವರವಾಗಿ ಮಾತನಾಡುತ್ತೇನೆ’ ಎಂದರು.
ಇದೇ ಮೊದಲು ಕನ್ನಡಕ್ಕೆ ಬಂದ ಬೆಂಗಾಲಿ ಬೆಡಗಿ ಮಿಸ್ಟಿ ಚಕ್ರವರ್ತಿ ಜತೆಗಿನ ಅಭಿನಯದ ಅನುಭವ ಹೇಗಿತ್ತು ಎಂದಾಗ ಜೋರಾಗಿ ನಕ್ಕರು. ‘ಒಳ್ಳೆಯ ನಟಿ. ನಟನೆಯ ಬಗ್ಗೆ ತುಂಬಾ ವೃತ್ತಿಪರತೆ ಇದೆ. ‘ಭಾಷೆ ಗೊತ್ತಿಲ್ಲದಿದ್ದರೂ, ಹೇಳಿದ್ದನ್ನು ಸೂಕ್ಷ್ಮವಾಗಿ ಗ್ರಹಿಸುತ್ತಾರೆ. ಒಳ್ಳೆಯ ಕೋ ಆರ್ಟಿಸ್ಟ್ ಎಂದಷ್ಟೇ ಹೇಳಬಲ್ಲೆ’ ಎಂದರು. ಬೆಂಗಾಲಿ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಮಿಸ್ಟಿ ಚಕ್ರವರ್ತಿ ಸದ್ಯಕ್ಕೆ ತೆಲುಗು ಮತ್ತು ಹಿಂದಿಯಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲಿಂದ ಇದೀಗ ಕನ್ನಡಕ್ಕೂ ಎಂಟ್ರಿ ಆಗಿದ್ದಾರೆ.