ಆನಂದಣ್ಣನಿಗೆ ಈಗ 32ರ ಹರೆಯ

First Published 20, Feb 2018, 8:58 PM IST
This is Kannada Movie anand Special
Highlights

21  ವರ್ಷಗಳಾಯಿತು. ಅಂದರೆ 19 ಫೆಬ್ರವರಿ 1986ರಂದು ಶಿವಣ್ಣ ನಟನೆ ಮೊದಲ ಸಿನಿಮಾ ಆನಂದ್ಸೆಟ್ಟೇರಿದ ದಿನ. ಇಷ್ಟು ವರ್ಷಗಳ ಸುದೀರ್ಘ ಪ್ರಯಾಣದಲ್ಲಿ 118 ಸಿನಿಮಾಗಳಲ್ಲಿ ನಟಿಸಿದ್ದಾರೆ

ಓ... ಮೂವತ್ತೆರಡು ವರ್ಷ ಆಯಿತಾ!? ನೋಡಿ ಗೊತ್ತೇ ಆಗಲಿಲ್ಲ. ಇಷ್ಟು ವರ್ಷ ಗಳ ಪ್ರಯಾಣಕ್ಕೆ ಏನು ಹೇಳೋದು....!?

- ಹೀಗೆ ಪ್ರತಿಕ್ರಿಯಿಸಿದ್ದು ನಟ ಶಿವರಾಜ್‌ಕುಮಾರ್. ಅಂದಹಾಗೆ ಅವರ ಮೊದಲ ಸಿನಿಮಾ ‘ಆನಂದ್’ ಮುಹೂರ್ತದ ಮೊದಲ ದೃಶ್ಯಕ್ಕೆ ಚಿತ್ರೀಕರಣ ಆಗಿದ್ದು ಇದೇ ಫೆ.19ರಂದು.

21  ವರ್ಷಗಳಾಯಿತು. ಅಂದರೆ 19 ಫೆಬ್ರವರಿ 1986ರಂದು ಶಿವಣ್ಣ ನಟನೆ ಮೊದಲ ಸಿನಿಮಾ ‘ಆನಂದ್’ ಸೆಟ್ಟೇರಿದ ದಿನ. ಇಷ್ಟು ವರ್ಷಗಳ ಸುದೀರ್ಘ ಪ್ರಯಾಣದಲ್ಲಿ 118 ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರರಂಗಕ್ಕೆ ಬಂದು 32 ವರ್ಷಗಳಾಯಿತು. ಏನನಿಸುತ್ತಿದೆ ಎಂದರೆ ‘ನನಗೆ ಇಷ್ಟು ವರ್ಷ ಆಗಿದ್ದೇ ಗೊತ್ತಾಗಲಿಲ್ಲ. ಇದು ನನ್ನ ಒಬ್ಬನ ಸಾಧನೆಯ ಪ್ರಯಾಣ ಅಲ್ಲ. ಚಿತ್ರದ ನಿರ್ದೇಶಕರು, ನನ್ನ ಸಹ ನಟ, ನಟಿಯರು, ತಂತ್ರಜ್ಞರು, ಅಭಿಮಾನಿಗಳು, ಮಾಧ್ಯಮ, ನನ್ನ ತಂದೆ ತಾಯಿ ಹೀಗೆ ಪ್ರತಿಯೊಬ್ಬರ ಪ್ರೀತಿ, ಮಾರ್ಗದರ್ಶನ, ಸಲಹೆ, ಶ್ರಮ ಎಲ್ಲವೂ ಇದೆ. ಆ ಎಲ್ಲವೂ ನನ್ನ ಇಲ್ಲಿವರೆಗೂ ಕರೆದುಕೊಂಡು ಬಂದಿದೆ. ಈ ಕಾರಣಕ್ಕೆ ನಾನು ಚಿತ್ರರಂಗಕ್ಕೆ ಋಣಿಯಾಗಿರುವೆ. ನಿಜ ಹೇಳಬೇಕು ಅಂದರೆ ಇದು ನನ್ನ ಜವಾಬ್ದಾರಿ ಹೆಚ್ಚಿಸುವ ಸಂಭ್ರಮ. ಇನ್ನಷ್ಟು ಸಿನಿಮಾಗಳನ್ನು ಮಾಡಬೇಕು. ಅಭಿಮಾನಿಗಳಿಗೆ ಖುಷಿ ಕೊಡಬೇಕು ಎನ್ನುವ ಆಸೆ ಮತ್ತು ಕನಸು ಮತ್ತಷ್ಟು ಜಾಸ್ತಿ ಆಗುತ್ತಿದೆ’ ಎನ್ನುತ್ತಾರೆ ನಟ ಶಿವರಾಜ್‌ಕುಮಾರ್.?

 

loader