ಎಲ್ಲರೂ ತಮ್ಮ ದಿನನಿತ್ಯದ ಚಟುವಟಿಕೆಗೆ ಚಿಲ್ಲರೆ ಹಣ ಹೊಂದಿಸುವುದು  ಹೇಗೆ ಎಂಬ ಗುಂಗಿನಲ್ಲಿರುವ ಕಾರಣ ಚಿತ್ರಮಂದಿರಗಳತ್ತ ಕಾಲಿಡುತ್ತಲ್ಲ. ಅಲ್ಲದೆ  ಬಹುತೇಕ ಸಿನಿಮಾ ಮಂದಿರಗಳ ವ್ಯವಹಾರ   ಹಣಕಾಸಿನಿಂದ ನಡೆಯುವ ಕಾರಣ ಚಿಲ್ಲರೆ ಸಮಸ್ಯೆ ಅಲ್ಲೂ ಕಾಡುತ್ತದೆ. ಆದ ಕಾರಣ ಸಿನಿಪ್ರಿಯರು ಅತ್ತಕಡೆ ಸುಳಿಯುತ್ತಿಲ್ಲ.     

ಪ್ರಧಾನಿ ಮೋದಿಯವರ ನೋಟ್ ಬ್ಯಾನ್ ಎಫೆಕ್ಟ್'ನಿಂದಾಗಿ ದೊಡ್ಡವರಿಂದ ಸಣ್ಣವರು ಕೂಡ ಬ್ಯಾಂಕ್ ಮುಂದೆ ಕ್ಯೂನಲ್ಲಿ ನಿಲ್ಲುವ ಪರಿಸ್ಥಿತಿಯುಂಟಾಗಿ ಚಿಲ್ಲರೆಗಾಗಿ ಪರಿಪಾಟಲು ಪಡುವಂತಾಗಿದೆ. ಇದರ ಪರಿಣಾಮ ಎಲ್ಲ ರಂಗಗಳ ಜೊತೆ ಸಿನಿಮಾ ರಂಗವೂ ಸಂಕಷ್ಟಕ್ಕೊಳಗಾಗಿದೆ. ಬಾಲಿವುಡ್ ಹಾಗೂ ಕನ್ನಡ ಚಿತ್ರಗಳು ಇದಕ್ಕೆ ಹೊರತಾಗದೆ ಜನರಿಲ್ಲದೆ ಬಣಗುಡುತ್ತಿವೆ.

ಎಲ್ಲರೂ ತಮ್ಮ ದಿನನಿತ್ಯದ ಚಟುವಟಿಕೆಗೆ ಚಿಲ್ಲರೆ ಹಣ ಹೊಂದಿಸುವುದು ಹೇಗೆ ಎಂಬ ಗುಂಗಿನಲ್ಲಿರುವ ಕಾರಣ ಚಿತ್ರಮಂದಿರಗಳತ್ತ ಕಾಲಿಡುತ್ತಲ್ಲ. ಅಲ್ಲದೆ ಬಹುತೇಕ ಸಿನಿಮಾ ಮಂದಿರಗಳ ವ್ಯವಹಾರ ಹಣಕಾಸಿನಿಂದ ನಡೆಯುವ ಕಾರಣ ಚಿಲ್ಲರೆ ಸಮಸ್ಯೆ ಅಲ್ಲೂ ಕಾಡುತ್ತದೆ. ಆದ ಕಾರಣ ಸಿನಿಪ್ರಿಯರು ಅತ್ತಕಡೆ ಸುಳಿಯುತ್ತಿಲ್ಲ.

ಬಾಲಿವುಡ್‌ ಅಂಗಳದಲ್ಲಿ ಯಾವುದಾದರೂ ಬಹುನಿರೀಕ್ಷಿತ ಚಿತ್ರ ರಿಲೀಸ್‌ ಆದ್ರೆ ಮೊದಲ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ 15 ಕೋಟಿಯ ಮೇಲೆ ಇರುತ್ತೆ. ಆದರೆ ಫರಾನ್‌ ಅಖ್ತರ್‌ ಮತ್ತು ಶ್ರದ್ಧಾ ಕಪೂರ್‌ ಅಭಿನಯದ ರಾಕ್‌ ಆನ್‌ 2 ಚಿತ್ರಕ್ಕೆ ಮೋದಿ ಎಫೆಕ್ಟ್ ಆಗಿದೆ. ಕೇಂದ್ರ ಸರ್ಕಾರದ ನೋಟು ರದ್ದು ನಿರ್ಧಾರದಿಂದಾಗಿ ಈ ಚಿತ್ರಕ್ಕೆ ಬಾರಿ ಹೊಡೆತ ಬಿದ್ದಿದೆ. ಜನರು ಬ್ಯಾಂಕ್‌ಗಳತ್ತ ಮುಖ ಮಾಡಿರೋದ್ರಿಂದ ಚಿತ್ರಮಂದಿರಗಳು ಅಷ್ಟಾಗಿ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿಲ್ಲ. ಮೂಲಗಳ ಪ್ರಕಾರ 'ರಾಕ್‌ ಆನ್‌ 2' ಚಿತ್ರದ ಮೊದಲ ದಿನದ ಕಲೆಕ್ಷನ್‌ ಸುಮಾರು 1.75 ಕೋಟಿಯಿಂದ 2 ಕೋಟಿಯವರೆಗಷ್ಟೇ ಎಂದು ಹೇಳಲಾಗ್ತಿದೆ. ಅಲ್ಲದೆ ಕಲೆಕ್ಷನ್ ಹಣದ ಬಹುಭಾಗವೂ ಅನ್'ಲೈನ್'ನಲ್ಲಿ ಬಂದ ಹಣವಾಗಿದೆ. ಹಳೆಯ ನೋಟುಗಳನ್ನ ವಿನಿಮಯ ಮಾಡಿಕೊಳ್ಳೋದ್ರಲ್ಲಿ ಬ್ಯುಸಿಯಾಗಿರೋ ಜನರು ಚಿತ್ರಮಂದಿರದತ್ತ ಅಷ್ಟಾಗಿ ಸುಳಿಯುತ್ತಿಲ್ಲ ಅಂತೀದೆ ಬಾಲಿವುಡ್ .

ಇತ್ತ ಸ್ಯಾಂಡಲ್'ವುಡ್'ಗೂ ನೋಟ್ ರದ್ದಿನ ಬಿಸಿ ತಟ್ಟಿದೆ. ಬಿಡುಗಡೆಯಾಗಿರುವ ಬಹುತೇಕ ಚಿತ್ರಗಳು ನಿರೀಕ್ಷೆಯ ಗುರಿ ತಲುಪುತಿಲ್ಲ. ಉತ್ತಮ ಚಿತ್ರಗಳು ಜನರನ್ನು ಸೆಳೆಯುತ್ತಿಲ್ಲ. ಬೆಂಗಳೂರು ಸೇರಿದಂತೆ ಬಹುತೇಕ ಚಿತ್ರಮಂದಿರಗಳು ಖಾಲಿಯೊಡೆಯುತ್ತಿವೆ. ಕೆಲವೊಂದು ಚಿತ್ರಮಂದಿರಗಳಲ್ಲಿ 10ಕ್ಕೂ ಹೆಚ್ಚು ಜನರು ಕಾಲಿಡುತ್ತಿಲ್ಲ. ಅಂತೂ ಇನ್ನು ಒಂದು ತಿಂಗಳು ನೋಟ್ ಬ್ಯಾನ್ ಬಿಸಿಯನ್ನು ಚಿತ್ರಮಂದಿರಗಳು ಅನುಭವಿಸಬೇಕು.