ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್  ಈ ಬಾರಿಯೂ ಕೂಡ ತಮ್ಮ ಜನ್ಮ ದಿನವನ್ನು ಆಚರಣೆ ಮಾಡಿಕೊಳ್ಳಲಿಲ್ಲ. ತಮ್ಮ ಅಭಿಮಾನಿಗಳಿಗೂ ಕೂಡ ಜನ್ಮ ದಿನ ಆಚರಣೆ ಮಾಡದಂತೆ ಹೇಳಿದ್ದರು.

ಚೆನ್ನೈ (ಡಿ.12): ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಈ ಬಾರಿಯೂ ಕೂಡ ತಮ್ಮ ಜನ್ಮ ದಿನವನ್ನು ಆಚರಣೆ ಮಾಡಿಕೊಳ್ಳಲಿಲ್ಲ. ತಮ್ಮ ಅಭಿಮಾನಿಗಳಿಗೂ ಕೂಡ ಜನ್ಮ ದಿನ ಆಚರಣೆ ಮಾಡದಂತೆ ಹೇಳಿದ್ದರು.

ಕಳೆದ ಮೂರು ವರ್ಷಗಳಿಂದಲೂ ಕೂಡ ರಜನಿಕಾಂತ್ ಅವರು ತಮ್ಮ ಜನ್ಮ ದಿನದ ಆಚರಣೆಯಿಂದ ದೂರ ಉಳಿದಿದ್ದಾರೆ. ಅದಕ್ಕೆ ಕಾರಣಗಳು ಕೂಡ ಇದೆ.

2015ರಲ್ಲಿ ಜನ್ಮ ದಿನವನ್ನು ಆಚರಣೆ ಮಾಡದಿರುವುದಕ್ಕೆ ಕಾರಣ ಏನೆಂದರೆ ಚೆನ್ನೈನಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಅತ್ಯಧಿಕ ಪ್ರಮಾಣದಲ್ಲಿ ಸಾವು ನೋವು ಸಂಭವಿಸಿದ್ದವು.

ಕಳೆದ ವರ್ಷ ಮುಖ್ಯಮಂತ್ರಿ ಜಯಲಲಿತಾ ನಿಧನರಾಗಿದ್ದರು. ಈ ವರ್ಷ ಓಖಿ ಚಂಡಮಾರುತದ ಕಾರಣದಿಂದ ಅವರು ಜನ್ಮ ದಿನವನ್ನು ಆಚರಣೆ ಮಾಡಿಕೊಂಡಿಲ್ಲ.