ಏ ಲಡ್ಕಿ ಮೇರೆ ರೋಮ್ ರೋಮ್ ಮೇ ಹೈಧೂಳೆಬ್ಬಿಸುತ್ತಿದೆ ನವಾಜ್ ಇನ್‌ಸ್ಟಾಗ್ರಾಂ ಫೊಟೋನವಾಜ್ ಜೊತೆಗಿರುವ 'ಲಡ್ಕಿ' ಯಾರು ಗೊತ್ತಾ?ತರಣ್ ಆದರ್ಶ ಬಿಚ್ಚಿಟ್ಟಿದ್ದಾರೆ ಫೋಟೋ ರಹಸ್ಯ
ನವದೆಹಲಿ(ಜೂ.19): ಬಾಲಿವುಡ್ನಟ ನವಾಜುದ್ದೀನ್ ಸಿದ್ದಿಕಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವುದು ತುಂಬ ವಿರಳ. ಆದರೆ ಇತ್ತಿಚೀಗೆ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಫೋಟೋವೊಂದು ಹಲವರ ಹುಬ್ಬೇರುವಂತೆ ಮಾಡಿದೆ. ಇನ್‌ಸ್ಟಾಗ್ರಾಂನಲ್ಲಿ ಯುವತಿಯೊಬ್ಬಳ ಜೊತೆಗಿರುವ ಫೋಟೋ ಅಪ್ಲೋಡ್ ಮಾಡಿರುವ ಸಿದ್ದಿಕಿ, 'ಏ ಲಡ್ಕಿ ಮೇರೆ ರೋಮ್ ರೋಮ್ ಮೇ ಹೈ' ಅಂತಾ ಕ್ಯಾಪ್ಶನ್ ಕೂಡ ನೀಡಿದ್ದಾರೆ.
ಇದನ್ನು ನೋಡಿದ್ದೇ ತಡ ನಿದ್ದೆಯಿಂದ ಎದ್ದ ನವಾಜುದ್ದೀನ್ ಅಭಿಮಾನಿಗಳು, 'ಏ ಕ್ಯಾ ನಯಾ ಚಕ್ಕರ್ ಹೈ ಭಾಯೀ' ಅಂತಾ ಕೇಳ ತೊಡಗಿದ್ದಾರೆ. ನವಾಜುದ್ದೀನ್ ಜೊತೆಗಿರುವ ಯುವತಿ ಯಾರು?, ಅವಳು ನವಾಜುದ್ದೀನ್ ಗರ್ಲ್‌ಫ್ರೆಂಡಾ ಎಂಬಂತಹ ನೂರಾರು ಪ್ರಶ್ನೆಗಳು ಮೂಲೆ ಮೂಲೆಗಳಿಂದ ತೂರಿ ಬರುತ್ತಿವೆ.
ಈ ಎಲ್ಲಾ ಊಹಾಪೋಹಗಳಿಗೆ ವಾಣಿಜ್ಯ-ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ ತೆರೆ ಎಳೆದಿದ್ದು, ನವಾಜುದ್ದೀನ್ ಜೊತೆಗಿರುವ ಯುವತಿ ಯಾರು ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ. ನವಾಜುದ್ದೀನ್ ಜೊತೆಗಿರುವ ಯುವತಿ ಇಟಾಲಿಯನ್ ನಟಿ ವ್ಯಾಲೆಂಟೀನಾ ಕೋರ್ಟಿ ಎಂದು ತರಣ್ ಹೇಳಿದ್ದಾರೆ. ಸದ್ಯ ಇವರಿಬ್ಬರೂ ತನಿಷ್ಟಾ ಮುಖರ್ಜಿ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂದು ತರಣ್ ಟ್ವೀಟ್ ಮಾಡಿದ್ದಾರೆ.
ಈ ಸುದ್ದಿಗಳನ್ನೂ ಓದಿ-ಶಿವಸೇನೆ ಮುಖ್ಯಸ್ಥರಾದ ನವಾಜುದ್ದಿನ್ ಸಿದ್ದಿಕಿ
