ಶಿವಸೇನೆ ಮುಖ್ಯಸ್ಥರಾದ ನವಾಜುದ್ದಿನ್ ಸಿದ್ದಿಕಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 19, Jul 2018, 3:19 PM IST
Nawazuddin Siddiqui Act in Bal Thackeray biopic
Highlights

ಬಾಲಿವುಡ್ ನಟ ನವಾಜುದ್ದಿನ್ ಸಿದ್ದಿಕಿ ಈಗ ಶಿವಸೇನೆಯ ಮುಖ್ಯಸ್ಥರಾಗಿದ್ದಾರೆ. ಶಿವಸೇನೆಯ ಮುಖ್ಯಸ್ಥರಾಗಿದ್ದ ಬಾಳಾ ಸಾಹೇಬ್ ಠಾಕ್ರೆ ಜೀವನ ಚರಿತ್ರೆ ಆಧರಿಸಿದ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. 

ಬೆಂಗಳೂರು :  ಶಿವಸೇನೆಯ ಮುಖ್ಯಸ್ಥರಾಗಿದ್ದ ಬಾಳಾಸಾಹೇಬ್ ಠಾಕ್ರೆ ಅವರ ಜೀವನ ಚರಿತ್ರೆ ಸಿನಿಮಾ ಆಗಿ ಮೂಡಿ ಬರುತ್ತಿದೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಹೊಸ ವಿಷಯ ಬರುತ್ತಿತ್ತು. ಇದೀಗ ಚಿತ್ರದ ಫೋಟೋವೊಂದು ಸದ್ದು ಮಾಡುತ್ತಿದೆ. 

ಈ ಚಿತ್ರದಲ್ಲಿ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಠಾಕ್ರೆ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅವರ ಶೂಟಿಂಗ್ ಸೆಟ್ ನಲ್ಲಿ ಫೋಟೋವೊಂದನ್ನು ಸಿನಿಮಾ ವಿಮರ್ಶಕ ತರಣ್ ಆದರ್ಶ್ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ಆ ಫೋಟೋದಲ್ಲಿ ಸಿದ್ದಿಕಿ ಠಾಕ್ರೆಯಂತೆಯೇ ಕಾಣಿಸುತ್ತಿದ್ದಾರೆ. 

 ಸಂಜಯ್ ರಾವುತ್ ಚಿತ್ರಕಥೆ ಬರೆದಿದ್ದು, ಕಾರ್ನಿವಲ್ ಮೋಷನ್ ಪಿಕ್ಚರ್ಸ್ ಜೊತೆಗೂಡಿ ನಿರ್ಮಿಸಿದ್ದಾರೆ. ಅಭಿಜಿತ್ ಪಂಜ್ ನಿರ್ದೇಶನ ಮಾಡಲಿದ್ದಾರೆ.  ಈ ಚಿತ್ರ ಬಾಳ್ ಸಾಹೇಬ್ ಜಯಂತಿಯಂದು ಅಂದರೆ 2019 ರ ಜನವರಿ 23ಕ್ಕೆ ಬಿಡುಗಡೆಯಾಗಲಿದೆ.

loader