-ಸಂಗೀತ ನಿರ್ದೇಶಕ ಸದ್ಗುಣ ಮೂರ್ತಿ ಕನ್ನಡದ ಮೇಲಿನ ಪ್ರೀತಿಯನ್ನು ಹೀಗೆ ಬಹಿರಂಗಪಡಿಸಿದರು. ಇಷ್ಟಕ್ಕೂ ಯಾರಿವರು? ಹೊಸ ತಲೆಮಾರಿನ ಸಿನಿರಸಿಕರಿಗೆ ಸದ್ಗುಣ ಮೂರ್ತಿ ಅಷ್ಟಾಗಿ ಪರಿಚಯ ಇಲ್ಲ. ಬೆಂಗಳೂರಿನ ಶ್ರೀರಾಂಪುರದಂಥ ತಮಿಳು ಭಾಷಿಕರ ಪ್ರದೇಶದಲ್ಲಿ ಹುಟ್ಟಿದರೂ, ಕನ್ನಡ ಸಿನಿಮಾದ ಪ್ರಭಾವಕ್ಕೆ ಸಿಲುಕಿ, 30ಕ್ಕೂ ಹೆಚ್ಚು ವರ್ಷಗಳ ಕಾಲ ನೂರಾರು ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ ಖ್ಯಾತಿ ಇವರಿಗಿದೆ. ಸಂಗೀತದ ಜತೆಗೆ ಗೀತೆ ರಚನೆ ಮಾಡಿದ್ದಾರೆ. ಅಷ್ಟುವರ್ಷಗಳ ನಂಟಿನೊಂದಿಗೀಗ ಪುತ್ರನನ್ನು ಕನ್ನಡದ ಬೆಳ್ಳಿತೆರೆಗೆ ಹೀರೋ ಆಗಿ ಪರಿಚಯಿಸುತ್ತಿದ್ದಾರೆ.

ನಾನೊಬ್ಬ ತಮಿಳು ಕನ್ನಡಿಗ, ಕನ್ನಡವೇ ನನ್ನ ಉಸಿರು!

ತಂದೆಯಂತೆ ಆತನೂ ಸಂಗೀತ ನಿರ್ದೇಶಕ ಹೀರೋ ಆಗಬೇಕೆನ್ನುವ ಕನಸನ್ನು ‘ಡಮ್ಕಿ ಡಮಾರ್‌' ಹೆಸರಿನ ಚಿತ್ರದ ಮೂಲಕ ನನಸಾಗಿಸಿಕೊಂಡಿದ್ದಾರೆ. ಈ ಚಿತ್ರದ ಆಡಿಯೋ ಲಾಂಚ್‌ ಸಮಾರಂಭದಲ್ಲಿ ಪುತ್ರ ಹೀರೋ ಆಗುತ್ತಿರುವ ಕ್ಷಣಗಳನ್ನು ನೆನೆಪಿಸಿಕೊಳ್ಳುತ್ತಾ, ಕನ್ನಡದೊಂದಿಗಿನ ತಮ್ಮ ಬೆಸುಗೆಯನ್ನು ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ' ಎನ್ನುವ ಸಾಲುಗಳ ಮೂಲಕ ಸ್ಮರಿಸಿಕೊಂಡರು. ‘ಸಂಗೀತ ನಿರ್ದೇಶಕನಾಗಿ ಸಾಕಷ್ಟುವರ್ಷಗಳ ಕಾಲ ಇಲ್ಲಿ ದುಡಿದಿದ್ದೇನೆ. ಕನ್ನಡಾಂಬೆ ನನಗೆ ಅನ್ನ ಕೊಟ್ಟಿದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವ ಹಾಗೆ ಅಲ್ಲಿ ದುಡಿದ ದುಡಿಮೆಯ ಫಲವನ್ನು ಮತ್ತೆ ಅದೇ ಜಾಗದಲ್ಲಿ ಸುರಿಯುತ್ತಿದ್ದೇನೆ. ಮಗ ಹೀರೋ ಆಗುವ ಕನಸು ನನಸಾಗುತ್ತಿದೆ. ನನಗೆ ಸಿಕ್ಕ ಪ್ರೋತ್ಸಾಹ, ಬೆಂಬಲ ಆತನಿಗೆ ಕೊಡಿ 'ಅಂತ ವಿನಂತಿಸಿಕೊಂಡರು.

ಎಸ್‌.ಕೆ. ಶ್ರೀನಿವಾಸ್‌ ನಿರ್ದೇಶಿಸಿ ತೆರೆಗೆ ತರುತ್ತಿರುವ ಈ ಚಿತ್ರಕ್ಕೆ ಚೈತ್ರಾ ಶೆಟ್ಟಿ ಹಾಗೂ ಅನುಷ್ಕಾ ಸೇಥಿ ನಾಯಕಿಯರು. ಜಗದೀಶ್‌ ವೆಂಕಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ. ಎಸ್‌ ಪ್ರದೀಪ್‌ ವರ್ಮಾ ಸಂಗೀತ, ವೆಲಸ್‌ ಛಾಯಾಗ್ರಹಣ ಈ ಚಿತ್ರಕ್ಕಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಈ ಚಿತ್ರದ ಆಡಿಯೋ ಸೀಡಿ ಬಿಡುಗಡೆಗೊಂಡಿತು.ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು, ನಿರ್ದೇಶಕ ವಾಸು ಅತಿಥಿಗಳಾಗಿ ಆಗಮಿಸಿದ್ದರು. ರಾವ್‌ ಬಹದ್ದೂರ್‌ ಸೇರಿದಂತೆ ಹಲವರು ಅತಿಥಿಗಳಾಗಿದ್ದರು.

ಸತ್ಯರಾಜ್‌ ಎಂಬ ಮೂರ್ಖ:

ತಮಿಳು ನಟನೊಬ್ಬ ಕನ್ನಡಿಗರನ್ನು ಟೀಕಿಸುತ್ತಿರುವುದನ್ನು ಪ್ರಸ್ತಾಪಿಸಿದ ಸಾ ರಾ ಗೋವಿಂದು, ಸತ್ಯರಾಜ್‌ ಒಬ್ಬ ಮೂರ್ಖ. ಅವನು ಅಭಿನಯಿಸಿರುವ ‘ ಬಾಹುಬಲಿ 2' ತೆರೆ ಕಾಣುವುದಕ್ಕೆ ಇಲ್ಲಿ ಅವಕಾಶ ಇಲ್ಲ ಎಂದರು. ರಾವ್‌ ಬಹದ್ದೂರ್‌, ಸೂಪರ್‌ ಸ್ಟಾರ್‌ ರಜನಿಕಾಂತ್‌ ಸ್ಟಾರ್‌ ಬೆಳೆದ ದಿನಗಳನ್ನು ಸ್ಮರಿಸಿದರು. ನವ ನಟ ಪ್ರದೀಪ್‌ ಕೂಡ ಸ್ಟಾರ್‌ ಆಗಲಿ ಎಂದು ಹಾರೈಸಿದರು.ಅಷ್ಟಕ್ಕೂ ಅಲ್ಲಿ ಕಾಡಿದ್ದು ಡಮ್ಕಿ ಡಮಾರ್‌ ಅಂದ್ರೇನು ಎನ್ನುವ ಪ್ರಶ್ನೆ. ನಾಯಕ ನಟನಾಗಿ ಮಾತಿಗೆ ನಿಂತ ಪ್ರದೀಪ್‌, ಸಂಗೀತ ಮೂಲಕ ಬೆಳೆದ ಚಿತ್ರರಂಗದ ನಂಟೇ ತಾವು ಹೀರೋ ಆಗುವುದಕ್ಕೆ ಕಾರಣ ಆಯಿತು ಎಂದರು. ಶ್ರೀನಿವಾಸ್‌, ತಾವು ಒಮ್ಮೆ ಸೇರಿದಾಗ ಹುಟ್ಟಿಕೊಂಡ ಕತೆ ಸಿನಿಮಾ ಆಯ್ತು ಎನ್ನುವುದನ್ನು ಹೇಳಿಕೊಂಡರು. ಸಾಮಾನ್ಯವಾಗಿ ಬೆಂಗಳೂರಿಗರಿಗೆ ವಿಕೆಂಡ್‌ ಬಂದ್ರೆ ಹೊರಗಡೆ ಜರ್ನಿ ಹೋಗುವುದು ಹವ್ಯಾಸ. ಹಾಗೆ, ಜರ್ನಿ ಹೊರಟವರ ಬದುಕಲ್ಲಿ ಏನೆಲ್ಲ ಆಗುತ್ತೆ ಎನ್ನುವುದೇ ಕತೆ. ಜರ್ನಿಯ ಪಾರ್ಟಿಯಲ್ಲಿ ಕೊನೆಗೆ ಏನಾಗುತ್ತೆ ಅನುವುದಕ್ಕೆ ಡಮ್ಕಿ ಡಮಾರ್‌ ಎನ್ನುತ್ತಾರೆ ' ಎಂದರು. ನಿರ್ದೇಶಕ ಶ್ರೀನಿವಾಸ್‌, ಕತೆಗೆ ತಕ್ಕಂತೆ ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿದೆ. ನಿರ್ಮಾಪಕರು ಪ್ರತಿಯೊಂದನ್ನು ಅಳತೆ ಮಾಡಿ ನಿರ್ಮಿಸಿದ್ದಾರೆ. ನೋಡುಗರಿಗೆ ಮನರಂಜನೆ ಜತೆಗೆ ಸಂದೇಶ ನೀಡುವ ಪ್ರಯತ್ನ ಇಲ್ಲಿದೆ ಎಂದರು. ನಾಯಕಿಯರಾದ ಚೈತ್ರಾ ಶೆಟ್ಟಿ, ಅನುಷ್ಕಾ ಸೇಥಿ ಚಿತ್ರೀಕರಣದ ಅನುಭವ ಹೇಳಿಕೊಂಡರು