ದರ್ಶನ್ ಅಭಿನಯದ 'ದಿ ಡೆವಿಲ್' ಚಿತ್ರಮಂದಿರಗಳಲ್ಲಿ 100 ದಿನ ಪೂರೈಸಿದೆ. ಆದರೆ, ಚಿತ್ರದ ಓಟಿಟಿ ಮತ್ತು ಟಿವಿ ಹಕ್ಕುಗಳು ಇನ್ನೂ ಮಾರಾಟವಾಗದ ಕಾರಣ, ಸಿನಿಮಾ ಇನ್ನೂ ಓಟಿಟಿಗೆ ಬಂದಿಲ್ಲ. ದರ್ಶನ್ ಅವರನ್ನು ಕನಿಷ್ಠ ಕಿರುತೆರೆಯಲ್ಲಾದರೂ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಬೆಂಗಳೂರು: ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ತೆರೆಕಂಡು 100 ದಿನಗಳು ಕಂಪ್ಲೀಟ್ ಆದವು. ಆದ್ರೆ ಇಲ್ಲಿತನಕ ಸಿನಿಮಾ ಓಟಿಟಿಗೆ ಬಂದಿಲ್ಲ. ಹಾಗಾದ್ರೆ ಡೆವಿಲ್ ಓಟಿಟಿ ಎಂಟ್ರಿ ಯಾವಾಗ? ದಾಸನ ಕೊನೆ ಭೇಟಿ ಯಾವಾಗ ಅಂತ ಫ್ಯಾನ್ಸ್ ಕೇಳ್ತಾ ಇದ್ದಾರೆ. ಆ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
100 ದಿನವಾಯ್ತು, ಯಾವಾಗ ಡೆವಿಲ್ OTT ಎಂಟ್ರಿ..?
ಯೆಸ್ ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ರಿಲೀಸ್ ಆಗಿ ನೂರು ದಿನಗಳು ಕಂಪ್ಲೀಟ್ ಆಯ್ತ. ಕಳೆದ ಡಿಸೆಂಬರ್ 11ರಂದು ರಿಲೀಸ್ ಆಗಿದ್ದ ಈ ಸಿನಿಮಾ ಮೊದಲ ದಿನವೇ 13.5 ಕೋಟಿ ಗಳಿಕೆ ಮಾಡಿ ಹೊಸ ದಾಖಲೆ ಬರೆದಿತ್ತು. ಡೆವಿಲ್ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಬರೀ ಕನ್ನಡದಲ್ಲಿ ತೆರೆಕಂಡ ಈ ಚಿತ್ರ ಇಷ್ಟು ದೊಡ್ಡ ಗಳಿಕೆ ಮಾಡಿ ಎಲ್ಲರನ್ನೂ ಅಚ್ಚರಿಗೆ ದೂಡಿತ್ತು. ದರ್ಶನ್ ಜೈಲಿನಲ್ಲಿದ್ದಾಗಲೇ ಬಂದ ಚಿತ್ರ ಮೆಗಾ ಓಪನಿಂಗ್ ಪಡೆದುಕೊಂಡಿತ್ತು.
ಓಪನಿಂಗ್ ಅದ್ಧೂರಿ ಆದ್ರೂ ಆ ಬಳಿಕ ಡೆವಿಲ್ ಕೊಂಚ ಡಲ್ ಆಗಿತ್ತು. ಎನಿವೇ ಇಲ್ಲಿತನಕ ಸಿನಿಮಾ 50ಕೋಟಿ ಯಷ್ಟು ಗಳಿಕೆ ಮಾಡಿಕೊಟ್ಟಿದೆ. ಇದು ಸಣ್ಣ ಸಾಧನೆ ಅಂತೂ ಅಲ್ಲ.
ಇನ್ನೂ ಸಿನಿಮಾ ಬಂದು ನೂರು ದಿನವಾದ್ರೂ ಇಲ್ಲಿತನಕ ಓಟಿಟಿಗೆ ಡೆವಿಲ್ ಎಂಟ್ರಿಯಾಗಿಲ್ಲ. ಇತ್ತೀಚಿಗೆ ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಚಿತ್ರಗಳೇ 50 ದಿನಗಳ ಒಳಗೆ ಓಟಿಟಿಗೆ ಬಂದು ಬಿಡುತ್ವೆ. ಆದ್ರೆ ಡೆವಿಲ್ ಯಾಕೆ ಬರ್ತಿಲ್ಲ ಅಂತ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ಅಸಲಿಗೆ ದಿ ಡೆವಿಲ್ ಪ್ರದರ್ಶನವಾಗೋ ಓಟಿಟಿ ಪ್ಲಾಟ್ಫಾರ್ಮ್ ಯಾವುದು ಅನ್ನೋದೇ ಇನ್ನೂ ಫೈನಲ್ ಆಗಿಲ್ಲ. ಸಿನಿಮಾದ ಬಿಡುಗಡೆಗೂ ಮುನ್ನ ಟಿವಿ ರೈಟ್ಸ್ ಮತ್ತು ಓಟಿಟಿ ರೈಟ್ಸ್‌ನ ನಿರ್ಮಾಣ ಸಂಸ್ಥೆ ಕೊಟ್ಟಿರಲಿಲ್ಲ. ಚಿತ್ರದ ರಿಲೀಸ್ ಬಳಿಕ ದೊಡ್ಡ ಮೊತ್ತದ ಆಫರ್ ಬರೋ ನಿರೀಕ್ಷೆಯಲ್ಲಿದ್ದ ನಿರ್ಮಾಪಕರು ಇಲ್ಲಿತನಕ ಚಿತ್ರದ ಟಿವಿ ಮತ್ತು ಓಟಿಟಿ ರೈಟ್ಸ್ ಸೇಲ್ ಮಾಡಿಲ್ಲ.
ಆದ್ರೆ ಚಿತ್ರ ನೂರು ದಿನ ಕಂಡ ಬಳಿಕ ಇನ್ನೇನು ಮಾತುಕತೆ ಫೈನಲ್ ಆಗಿ ಸದ್ಯದಲ್ಲೇ ಚಿತ್ರ ಟಿವಿ ಮತ್ತು ಓಟಿಟಿಯಲ್ಲಿ ಬರೋ ನಿರೀಕ್ಷೆ ಇದೆ. ಸದ್ಯಕ್ಕೆ ದರ್ಶನ್ನ ನೇರವಾಗಿ ನೋಡೋದಕ್ಕೆ ಸಾಧ್ಯ ಇಲ್ಲ. ಅವರ ಹೊಸ ಸಿನಿಮಾ ಬರೋದ್ಯಾವಾಗ ಗೊತ್ತಿಲ್ಲ. ಕೊನೆ ಪಕ್ಷ ಕಿರುತೆರೆಯಲ್ಲಾದ್ರೂ ದಾಸನನ್ನ ನೋಡೋದು ಯಾವಾಗ ಅಂತ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ಸದ್ಯಕ್ಕಂತೂ ಈ ಪ್ರಶ್ನೆಗೆ ಉತ್ತರವಿಲ್ಲ. ಆದ್ರೆ ಸದ್ಯದಲ್ಲೇ ಸಿಕ್ಕೋ ನಿರೀಕ್ಷೆಯಂತೂ ಇದೆ.
ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.


