ದುಷ್ಯಂತ್ ನಿರ್ಮಿಸಿರುವ ಹಾಗೂ ಮಿಲನ ಪ್ರಕಾಶ್ ನಿರ್ದೇಶಿಸಿರುವ "ತಾರಕ್" ಸಿನಿಮಾ ಈ ವರ್ಷದ ಮೆಗಾ ಸಿನಿಮಾಗಳಲ್ಲೊಂದು. ಅರ್ಜುನ್ ಜನ್ಯಾ ಕಂಪೋಸ್ ಮಾಡಿರುವ ಎಲ್ಲಾ 6 ಹಾಡುಗಳೂ ಜನಪ್ರಿಯವಾಗಿವೆ. ವ್ಯಾಸರಾಜ್ ಸೋಸಲೆ ಹಾಡಿರುವ "ಬಾ ಬಾರೋ ಗೆಳೆಯ" ಹಾಡಂತೂ ಬಹಳಷ್ಟು ಅಭಿಮಾನಿಗಳ ಮನಸೂರೆಗೊಂಡಿದೆ.

ನಿನ್ನೆಯಷ್ಟೆ ಬಿಡುಗಡೆಯಾದ ಚಾಲೆಂಜಿಗ್ ಸ್ಟಾರ್ ಅಭಿನಯದ ತಾರಕ್ ಸಿನಿಮಾ ಟೀಸರ್ ಯೂಟ್ಯೂಬಿನಲ್ಲಿ ಧೂಳೆಬ್ಬಿಸಿದೆ. ಕೇವಲ ಒಂದೇ ದಿನದಲ್ಲಿ 4 ಲಕ್ಷಕ್ಕೂ ಹೆಚ್ಚು ಮಂದಿ ಟೀಸರ್'ಅನ್ನು ವೀಕ್ಷಿಸಿದ್ದಾರೆ. ಯುಟ್ಯೂಬಿನಲ್ಲಿ ಕನ್ನಡ ಸಿನಿಮಾದ ಟೀಸರ್'ಅನ್ನು ಒಂದೇ ದಿನದಲ್ಲಿ ಇಷ್ಟು ಮಂದಿ ವೀಕ್ಷಿಸಿರುವುದು ದಾಖಲೆ ಎಂದು ಹೇಳಬಹುದು.

ದುಷ್ಯಂತ್ ನಿರ್ಮಿಸಿರುವ ಹಾಗೂ ಮಿಲನ ಪ್ರಕಾಶ್ ನಿರ್ದೇಶಿಸಿರುವ "ತಾರಕ್" ಸಿನಿಮಾ ಈ ವರ್ಷದ ಮೆಗಾ ಸಿನಿಮಾಗಳಲ್ಲೊಂದು. ಅರ್ಜುನ್ ಜನ್ಯಾ ಕಂಪೋಸ್ ಮಾಡಿರುವ ಎಲ್ಲಾ 6 ಹಾಡುಗಳೂ ಜನಪ್ರಿಯವಾಗಿವೆ. ವ್ಯಾಸರಾಜ್ ಸೋಸಲೆ ಹಾಡಿರುವ "ಬಾ ಬಾರೋ ಗೆಳೆಯ" ಹಾಡಂತೂ ಬಹಳಷ್ಟು ಅಭಿಮಾನಿಗಳ ಮನಸೂರೆಗೊಂಡಿದೆ.

ದಾಸ ದರ್ಶನ್'ಗೆ ಜೋಡಿಯಾಗಿ ಶೃತಿ ಹರಿಹರನ್ ಮತ್ತು ಕಿರಿಕ್ ಹುಡುಗಿ ಶಾನ್ವಿ ಶ್ರೀವಾಸ್ತವ ನಟಿಸಿದ್ದಾರೆ. ದರ್ಶನ್ ಅವರ 49ನೇ ಸಿನಿಮಾವಾಗಿರುವ "ತಾರಕ್" ಇದೇ ಸೆಪ್ಟೆಂಬರ್ 29ರಂದು ಥಿಯೇಟರ್'ಗಳಲ್ಲಿ ರಿಲೀಸ್ ಆಗುತ್ತಿದೆ.

ಮೈಸೂರಿನಲ್ಲಿ ತಾರಕೋತ್ಸವ:
ಇಂದು ಮೈಸೂರಿನಲ್ಲಿ "ತಾರಕೋತ್ಸವ" ಕಾರ್ಯಕ್ರಮ ನಡೆಯುತ್ತಿದೆ. ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ ಸಂಜೆ 6ಗಂಟೆಯಿಂದ ತಾರಕೋತ್ಸವ ನಡೆಯಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ನಾಯಕಿರಾದ ಶ್ರುತಿ ಹರಿಹರನ್ ಮತ್ತು ಶಾನ್ವಿ ಶ್ರೀವಾಸ್ತವ ಸೇರಿದಂತೆ ಚಿತ್ರತಂಡದವರೆಲ್ಲರೂ ಈ ಭರ್ಜರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.