ದಕ್ಷಿಣ ಭಾರತದ ನಟಿ, ಬಿಗ್ ಬಾಸ್ ಸೀಸನ್ 5 ಸ್ಪರ್ಧಿ ಲಾಸ್ಯಾ ನಾಗರಾಜ್ ಬಾಲಿವುಡ್ ಗೆ ಹಾರಿದ್ದಾರೆ.  ಲೇಖಕ ಸಲ್ಮಾನ್ ರಶ್ದಿ ಅವರ ’ ಮಿಡ್ ನೈಟ್ ಚಿಲ್ಡ್ರನ್’ ಎಂಬ ಪ್ರಸಿದ್ಧ ಕಾದಂಬರಿ ತೆರೆ ಮೇಲೆ ಬರಲು ಸಿದ್ಧವಾಗಿದೆ. ಈ ವೆಬ್ ಸೀರೀಸ್ ನಲ್ಲಿ ಕನ್ನಡದ ಲಾಸ್ಯಾ ನಾಗರಾಜ್ ನಟಿಸುತ್ತಿದ್ದಾರೆ. 

ಬಾಲಿವುಡ್ ಪ್ರಬುದ್ಧ ನಟ ನವಾಜುದ್ದೀನ್ ಸಿದ್ಧಿಕಿ ಜೊತೆ ಲಾಸ್ಯಾ ಅಭಿನಯಿಸುತ್ತಿದ್ದಾರೆ. ಈ ವೆಬ್ ಸೀರೀಸ್ ನಲ್ಲಿ ಲಾಸ್ಯ ತಮಿಳುನಾಡು ಮೂಲದ ಪರಿ ಅಯ್ಯರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಲಾಸ್ಯಾ ನಾಗರಾಜ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ನವಾಜುದ್ಧೀನ್ ಸಿದ್ಧಿಕಿ ಹಾಗೂ ವಿಶಾಲ್ ಭಾರದ್ವಾಜ್ ಗೆ ಥ್ಯಾಂಕ್ಸ್ ಹೇಳಿದ್ದಾರೆ. 

 

ಬಿಬಿಸಿ  ಮಿಡ್ ನೈಟ್ ಚಿಲ್ಡ್ರನ್ ಗೆ ಬಂಡವಾಳ ಹಾಕುತ್ತಿದೆ. 2020 ಕ್ಕೆ ಬಿಡುಗಡೆಯಾಗಲಿದೆ.