ಸ್ಯಾಂಡಲ್​ವುಡ್​ ಖ್ಯಾತ ನಟ ರಾಕಿಂಗ್ ಸ್ಟಾರ್​ ಯಶ್​ಗೆ ತಮಿಳು ನಟ ಕ್ಷಮೆ ಜೈ ಆಕಾಶ್ ಕೇಳಿದ್ದಾರೆ. ಈ ಹಿಂದೆ ಸುದ್ದಿಗೋಷ್ಠಿಯೊಂದರಲ್ಲಿ ನಟ ಯಶ್ ಸಿನಿಮಾ ಜರ್ನಿ ಬಗ್ಗೆ ತಮಿಳು ನಟ ಜೈ ಆಕಾಶ್ ಹಗುರವಾಗಿ ಮಾತನಾಡಿದ್ದರು. ಯಶ್ ತನಗೆ ಸಿನಿಮಾ ಅವಕಾಶ ಇಲ್ಲವೆಂದು ನನ್ನ ಬಳಿ ಕಣ್ಣೀರಿಟ್ಟಿದ್ದರು.

ಸ್ಯಾಂಡಲ್​ವುಡ್​ ಖ್ಯಾತ ನಟ ರಾಕಿಂಗ್ ಸ್ಟಾರ್​ ಯಶ್​ಗೆ ತಮಿಳು ನಟ ಕ್ಷಮೆ ಜೈ ಆಕಾಶ್ ಕೇಳಿದ್ದಾರೆ. ಈ ಹಿಂದೆ ಸುದ್ದಿಗೋಷ್ಠಿಯೊಂದರಲ್ಲಿ ನಟ ಯಶ್ ಸಿನಿಮಾ ಜರ್ನಿ ಬಗ್ಗೆ ತಮಿಳು ನಟ ಜೈ ಆಕಾಶ್ ಹಗುರವಾಗಿ ಮಾತನಾಡಿದ್ದರು. ಯಶ್ ತನಗೆ ಸಿನಿಮಾ ಅವಕಾಶ ಇಲ್ಲವೆಂದು ನನ್ನ ಬಳಿ ಕಣ್ಣೀರಿಟ್ಟಿದ್ದರು. ನಾನು ಯಶ್​ಗೆ ಊಟ ಹಾಕಿ ಕಳಿಸಿದ್ದೆ ಎಂದು ಹೇಳಿಕೆ ನೀಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿತ್ತು.

ನಟನ ಈ ಹೇಳಿಕೆಯ ಬೆನ್ನಲ್ಲೇ ಯಶ್​ ಅಭಿಮಾನಿಗಳು ಆಕ್ರೋಶ ಹೊರಹಾಕುವ ಮೂಲಕ ತಿರುಗಿ ಬಿದ್ದಿದ್ದರು. ಇದೀಗ ನಟ ಜೈ ಆಕಾಶ್ ವಿಡಿಯೋ ಮಾಡುವ ಮೂಲಕ ರಾಕಿಂಗ್​ ಸ್ಟಾರ್​ ಯಶ್ ಹಾಗೂ ಅವರ ಅಭಿಮಾನಿಗಳಿಗೆ ಕ್ಷಮೆ ಕೋರಿದ್ದಾರೆ. ನಾನು ಯಶ್ ಜಂಬದ ಹುಡುಗಿ ಅನ್ನೋ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೇವು. 

ಅವಕಾಶಕ್ಕಾಗಿ ಯಶ್​ ಕಣ್ಣೀರು ಹಾಕಿದ್ದ, ನಾನೇ ಊಟ ಕೊಟ್ಟಿದ್ದೆ: ತಮಿಳು ನಟನ ವಿಡಿಯೋ ವೈರಲ್​

ನನ್ನ ತಮ್ಮನಾಗಿ ಯಶ್ ಸಿನಿಮಾದಲ್ಲಿ ನಟಿಸಿದ್ದರು. ಪತ್ರಕರ್ತರ ಪ್ರಶ್ನೆಗಳಿಗೆ ಮಾತನಾಡಿದ ವಿಡಿಯೋವನ್ನು ಹೀಗೆ ಕಟ್ ಮಾಡಿ ವೈರಲ್ ಮಾಡಿದ್ದಾರೆ. ಯಶ್ ನನಗೆ ತಮ್ಮ ಇದ್ದಂತೆ. ನಾನು ಯಶ್ ಬಗ್ಗೆ ಆ ರೀತಿ ಮಾತನಾಡಿದ್ದು ತಪ್ಪು. ಹೀಗಾಗಿ ನಾನು ಯಶ್ ಹಾಗೂ ಅವರ ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತೇನೆ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.

View post on Instagram