ಕಲರ್ಸ್‌ ತಂಡವೀಗ ರೂಪಿಸಿರುವ ಪ್ಲ್ಯಾನ್‌ ಪ್ರಕಾರ ಕನ್ನಡದ ಅತಿ ದೊಡ್ಡ ಡಾನ್ಸ್‌ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆ ಅದಕ್ಕಿದೆ. ಸಿನಿಮಾ ಮತ್ತು ಟೆಲಿವಿಷನ್‌ ಕ್ಷೇತ್ರದಲ್ಲಿ ಸಾಕಷ್ಟುಹೆಸರು ಮಾಡಿದ 14 ಸೆಲಿಬ್ರಿಟಿಗಳ ಜತೆಗೆ ಇದೇ ಮೊದಲು ಅಷ್ಟೇ ಸಂಖ್ಯೆಯ ಸಾಮಾನ್ಯ ಸ್ಪರ್ಧಿಗಳು ಡಾನ್ಸ್‌ ಮೂಲಕ ವೇದಿಕೆ ಹಂಚಿಕೊಳ್ಳುತ್ತಿರುವುದು ಅದರ ವಿಶೇಷಗಳಲ್ಲಿ ಒಂದು. ಇದು ಕನ್ನಡದ ಅತೀ ದೊಡ್ಡ ಡಾನ್ಸ್‌ ರಿಯಾಲಿಟಿ ಶೋ ಎನ್ನುತ್ತಿದೆ ಕಲರ್ಸ್‌ ಕನ್ನಡದ ತಂಡ.

ರವಿಚಂದ್ರನ್‌ ಹಾಗೂ ನಿರೂಪಕ ಅಕುಲ್‌ ಬಾಲಾಜಿ ಕಿರುತೆರೆ ಹಿಟ್‌ ಜೋಡಿ. ಒನ್ಸ್‌ ಅಗೇನ್‌ ಮತ್ತೆ ಇದೇ ಜೋಡಿ ‘ತಕಧಿಮಿತ’ ವೇದಿಕೆಯಲ್ಲಿ ಮೋಡಿ ಮಾಡಲು ಬರುತ್ತಿದೆ. ಕ್ರೇಜಿಸ್ಟಾರ್‌ ರವಿಚಂದ್ರನ್‌ ಈ ಶೋನ ಪ್ರಧಾನ ತೀರ್ಪುಗಾರರು. ಅವರೊಂದಿಗೆ ಸುಮನ್‌ ರಂಗನಾಥ್‌ ಮತ್ತು ಹೆಸರಾಂತ ಭರತನಾಟ್ಯ ನೃತ್ಯಗಾತಿ ಅನುರಾಧ ವಿಕ್ರಾಂತ್‌ ತೀರ್ಪುಗಾರರಾಗಿದ್ದಾರೆ.

‘ವ್ಯಕ್ತಿ ಎನ್ನುವುದಕ್ಕಿಂತ ಡಾನ್ಸ್‌ ಶೋ ಅಗತ್ಯಕ್ಕೆ ತಕ್ಕಂತೆ ತೀರ್ಪುಗಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸುಮನ್‌ ಮತ್ತು ಅನುರಾಧ ಇಬ್ಬರಿಗೂ ನೃತ್ಯದ ತಿಳಿವಳಿಕೆಯಿದೆ. ಪ್ರಿಯಾಮಣಿ ಮತ್ತು ಮಯೂರಿ ಇಬ್ಬರು ಅವರದ್ದೇ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ’ ಎನ್ನುತ್ತಾರೆ ಕಲರ್ಸ್‌ ಕನ್ನಡದ ಬಿಸಿನೆಸ್‌ ಹೆಡ್‌ ಪರಮೇಶ್ವರ್‌ ಗುಂಡ್ಕಲ್‌.

ರಮಣ ಲೈಫ್ ರಿಯಲ್ ರಾಧಾ ಮಿಸ್! ಬಿಚ್ಚಿಟ್ಟರು ಲವ್ ಸ್ಟೋರಿ

ಭರತನಾಟ್ಯ ನೃತ್ಯದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಅನುರಾಧ ವಿಕ್ರಾಂತ್‌ ಮೂಲತಃ ಬೆಂಗಳೂರಿನವರು. ನೂರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲಿಸಿದ ಗುರು. ಇದೇ ಮೊದಲ ಬಾರಿಗೆ ಕಿರುತೆರೆ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಮನ್‌ ರಂಗನಾಥ್‌ ಹತ್ತು ವರ್ಷಗಳ ನಂತರ ಕಿರುತೆರೆ ರಿಯಾಲಿಟಿ ಶೋಗೆ ಬಂದಿದ್ದಾರೆ.

ರವಿಚಂದ್ರನ್‌ ತಕಧಿಮಿತ ಸವಾಲಿನ ಶೋ ಎಂದರು. ಕಾರಣ ಅದರ ಸ್ಪರ್ಧಿಗಳು. ‘ಈ ಶೋ ನನ್ನ ಪಾಲಿಗೆ ಹಲವು ವಿಶೇಷತೆ ಹೊಂದಿದೆ. ಅದರಲ್ಲಿ ತೀರ್ಪುಗಾರನಾಗಿ ನನಗೆ ಸವಾಲು ಎನಿಸಿದ್ದು ನ್ಯಾಯ ಸ್ಥಾನದಲ್ಲಿ ಕುಳಿತು ತೀರ್ಪು ನೀಡುವುದು. ಯಾಕೆಂದ್ರೆ ಈ ಬಾರಿ ವೇದಿಕೆ ಬರುವವರೆಲ್ಲರೂ ಅನುಭವಿ ಡಾನ್ಸರ್‌ಗಳು. ಅವರನ್ನು ಜಡ್ಜ್‌ ಮಾಡುವುದು ನಮಗೆ ಸವಾಲು’ ಎಂದರು.

ಸ್ಪರ್ಧಿಗಳು

14 ಮಂದಿಯ ಹೆಸರು ಅಂತಿಮಗೊಂಡಿದೆ. ಶ್ರುತಿ ಪ್ರಕಾಶ್‌, ಕಾರುಣ್ಯ ರಾಮ್‌, ಲಾಸ್ಯ ನಾಗರಾಜ್‌, ನೇಹಾ ಗೌಡ, ನಮ್ರತಾ ಗೌಡ, ಅರ್ಚನಾ ಜೋಯಿಶ್‌, ದಿವ್ಯಾ ಉರುಡುಗ, ರಕ್ಷಿತ್‌, ದಿಲೀಪ್‌ ಆರ್‌ ಶೆಟ್ಟಿ, ಸುನೀಲ್‌, ರಾಜೇಶ್‌ ಧ್ರುವ , ಬಿಗ್‌ಬಾಸ್‌ ಖ್ಯಾತಿಯ ಆ್ಯಡಂ ಪಾಶ ಇದ್ದಾರೆ. ಅವರೊಂದಿಗೆ ವೇದಿಕೆ ಮೇಲೆ ಬರಲಿರುವ ಕಾಮನ್‌ ಕಂಟೆಸ್ಟೆಂಟ್‌ ಹೆಸರು ಶನಿವಾರದ ಮೊದಲ ಕಂತಿನಲ್ಲಿ ಬಹಿರಂಗವಾಗಲಿದೆ.