ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ ಈ ಚಿತ್ರದಲ್ಲಿ ತ್ರಿವೇಣಿ ರಾವ್‌ ತನಿಖಾಧಿಕಾರಿ ಆಗಿ ಅಭಿನಯಿಸುತ್ತಿದ್ದಾರೆ. ಸದ್ಯಕ್ಕೆ ಅವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

ಚಿತ್ರೀಕರಣದ ವೇಳೆ ಕುಸಿದು ಬಿದ್ದ ನಟಿ ಕೊಟ್ಟ ಕಾರಣವಿದು!

‘ಇದೊಂದು ಸೂಪರ್‌ ಅವಕಾಶ. ತೆರೆ ಮೇಲೆ ಪುನೀತ್‌ ರಾಜ್‌ಕುಮಾರ್‌ ಜತೆಗೆ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಅವರ ಜೊತೆಗೊಂದು ಫೈಟ್‌ ಕೂಡ ಇದೆ. ಸದ್ಯಕ್ಕೆ ನಿರ್ದೇಶಕರು ಇದಿಷ್ಟುಮಾತ್ರ ಹೇಳಿದ್ದಾರೆ.

‘ಯುವರತ್ನ’ಚಿತ್ರದಲ್ಲಿ ಬಾಲಿವುಡ್ ಬೊಮನ್ ಇರಾನಿ?

ಪಾತ್ರದ ಇನ್ನು ಡಿಟೈಲ್ಸ್‌ ಗೊತ್ತಿಲ್ಲ. ಆದರೆ ಒಳ್ಳೆಯ ಅವಕಾಶ ಎನ್ನುವುದ ನಂಗಂತೂ ಖುಷಿ ಕೊಟ್ಟಿದೆ’ ಎನ್ನುತ್ತಾರೆ ಕಾನ್‌ಸ್ಟೇಬಲ್‌ ಸರೋಜ ಅಲಿಯಾಸ್‌ ತ್ರಿವೇಣಿ ರಾವ್‌. ವಿಶೇಷ ಅಂದ್ರೆ ಟಗರು ಚಿತ್ರದ ಡಾಲಿ ಖ್ಯಾತಿಯ ನಟ ಧನಂಜಯ್‌ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲೇ ಅಭಿನಯಿಸುತ್ತಿದ್ದಾರೆ. ಈ ಮಧ್ಯೆ ಡಾಲಿ ಡಾರ್ಲಿಂಗ್‌ ಕೂಡ ಎಂಟ್ರಿ ಆಗಿದ್ದಾರೆ.