Asianet Suvarna News Asianet Suvarna News

‘ಸೈರಾ’ದಲ್ಲಿ ಅವುಕು ರಾಜನ ದರ್ಬಾರ್ ಜೋರು, ಕಿಚ್ಚನ ಆ್ಯಕ್ಟಿಂಗ್ ಗೆ ಫಿದಾ ಆಗದವರೇ ಇಲ್ಲ!

ಸೈರಾ ನರಸಿಂಹ ರೆಡ್ಡಿ ಗಾಂಧಿ ಜಯಂತಿ ಪ್ರಯುಕ್ತ ವಿಶ್ವದಾದ್ಯಂತ ತೆರೆಗೆ ಬಂದಿರೋ ಸಿನಿಮಾ. ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಿದ್ದು 4800 ಕ್ಕೂ ಹೆಚ್ಚು ಸ್ಕ್ರೀನ್ ನಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಬೆಳ್ಳಂಬೆಳ್ಳಿಗ್ಗೆ 3 ಗಂಟೆಯಿಂದಲೇ ರಾಜ್ಯದಲ್ಲಿ ಸೈರಾ ಸಿನಿಮಾ ರಿಲೀಸ್ ಆಗಿದ್ದು ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ ಅಭಿಮಾನಿಗಳು.

Sye Raa Narasimha Reddy film review
Author
Bengaluru, First Published Oct 2, 2019, 2:55 PM IST

‘ಸೈರಾ ನರಹಿಂಹ ರೆಡ್ಡಿ’ ಭಾರತೀಯ ಸಿನಿಮಾ ಪ್ರೇಕ್ಷಕರೆಲ್ಲರೂ ಎದುರು ನೋಡುತ್ತಿದ್ದ ಸಿನಿಮಾ. ಬಿಗ್ ಬಜೆಟ್, ಬಿಗ್ ಸ್ಟಾರ್ ಕಾಸ್ಟ್ ಹಾಗೂ ಸ್ವಾಂತತ್ರ್ಯ ಹೋರಾಟಗಾರನ ಜೀವನ ಚರಿತ್ರೆ. ಇವೆಲ್ಲವನ್ನೂ ಒಟ್ಟಿಗೆ ಸೇರಿ ಸಿನಿಮಾ ಮಾಡಿ ಇಂದು ಪ್ರೇಕ್ಷಕರ ಮುಂದೆ ಚಿತ್ರವನ್ನ ತಂದಿದ್ದಾರೆ ನಿರ್ದೇಶಕರು. ಸೈರಾ ಚಿತ್ರ ಬಿಗ್ ಓಪನಿಂಗ್ ಪಡೆದುಕೊಂಡಿದೆ.

ಸೈರಾ ನರಸಿಂಹ ರೆಡ್ಡಿ ಗಾಂಧಿ ಜಯಂತಿ ಪ್ರಯುಕ್ತ ವಿಶ್ವದಾದ್ಯಂತ ತೆರೆಗೆ ಬಂದಿರೋ ಸಿನಿಮಾ. ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಿದ್ದು 4800 ಕ್ಕೂ ಹೆಚ್ಚು ಸ್ಕ್ರೀನ್ ನಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಬೆಳ್ಳಂಬೆಳ್ಳಿಗ್ಗೆ 3 ಗಂಟೆಯಿಂದಲೇ ರಾಜ್ಯದಲ್ಲಿ ಸೈರಾ ಸಿನಿಮಾ ರಿಲೀಸ್ ಆಗಿದ್ದು ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ ಅಭಿಮಾನಿಗಳು.

ಬಾಹುಬಲಿಯನ್ನೇ ಮೀರಿಸಿದ ಸೈರಾ; ದಾಖಲೆ ಬರೆದ ಕನ್ನಡಿಗ!

ಮೆಗಾಸ್ಟಾರ್ ಸಿನಿಮಾಗಾಗಿ ಬೆಂಗಳೂರಿನ ಥಿಯೇಟರ್ ಗಳಿಗೆ ಬ್ಯಾನರ್ ಬಂಟಿಂಗ್ಸ್ ನಿಂದ ಸಿಂಗಾರಗೊಳಿಸಿದ ಮೆಗಾ ಫ್ಯಾನ್ಸ್ ಶ್ರೀನಿವಾಸ ಥಿಯೇಟರ್ ನಲ್ಲಿ ಅನ್ನದಾನ ಕೂಡ ಮಾಡಿದ್ರು. ಸೈರಾ ಸಿನಿಮಾದಲ್ಲಿ ಚಿರು ಮೊದಲ ಹೀರೋ ಆದ್ರೆ ಹೈಲೈಟಾಗೊ ಮತ್ತೊಬ್ಬ ಹೀರೋ ಕನ್ನಡದ ಕಿಚ್ಚ ಅನ್ನೋದು ಮತ್ತೊಂದು ವಿಶೇಷ. ಮೊದಲ ದಿನವೇ ವಿಶ್ವಾಧ್ಯಂತ ಅದ್ದೂರಿ ಓಪನಿಂಗ್ ಪಡೆದುಕೊಂಡಿದೆ ಸೈರಾ. ಬಾಕ್ಸಾಫೀಸ್ ಚಿಂದಿ ಉಡಾಯಿಸುತ್ತಿದೆ. 

ಆಂದ್ರದಲ್ಲಿ ಇತಿಹಾಸ ಸೃಷ್ಟಿ ಮಾಡಿದ ಕನ್ನಡ ಅಭಿಮಾನಿಗಳು 

ಚಿರಜೀವಿ ಅವ್ರಿಗೆ ಕರ್ನಾಟಕದಲ್ಲಿಯೂ ಸಾಕಷ್ಟು ಅಭಿಮಾನಿಗಳಿದ್ದಾರೆ...ಇಲ್ಲಿಯ ಮ್ಯೂವಿಲ್ಯಾಂಡ್ ಮುರುಗ ಅನ್ನೋ ಅಭಿಮಾನಿ ಹೈದ್ರಾಬಾದ್ ಗೆ ಲಾರಿ ಮೂಲಕ ಹೂ ಮಾಲೆಗಳನ್ನ ತೆಗೆದುಕೊಂಡು ಹೋಗಿ ಮೆಗಾಸ್ಟಾರ್ ಕಟೌಟ್ ಗೆ ಹಾಕಿ ಗಿನ್ನಿಸ್ ದಾಖಲೆ ಬರೆದಿದ್ದಾರೆ. ಹೀಗೆ ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ ಸೈರಾ ಸಿನಿಮಾ ಸೌಂಡ್ ಮಾಡುತ್ತಿದ್ದು ನಿನ್ನೆ ರಾತ್ರಿಯೇ ವಿದೇಶದಲ್ಲಿಯೂ ಸಿನಿಮಾ ನೋಡು ಎಂಜಾಯ್ ಮಾಡಿದ್ದಾರೆ ಅಭಿಮಾನಿಗಳು ಚಿತ್ರ ಐದು ಭಾಷೆಯಲ್ಲಿ ತೆರೆಗೆ ಬಂದಿದ್ದು. ಸ್ವಾತಂತ್ರ್ಯ ಹೋರಾಟಗಾರನ ಸಿನಿಮಾ ಆಗಿರೋ ಕಾರಣ ಪ್ರತಿಯೊಬ್ಬ ದೇಶಭಿಮಾನಿಯೂ ಸಿನಿಮಾ ನೋಡಬೇಕು ಅನ್ನೋದು ಅವ್ರ ಅಬಿಮಾನಿಗಳ ಮಾತು.

ರಾಜಕಾರಣಕ್ಕೆ ಸುದೀಪ್? ಚಿರಂಜೀವಿಯಿಂದ ಪೈಲ್ವಾನ್ ಕಲಿತ ಪಾಠ

ಸ್ವಾಂತತ್ರ್ಯ ಹೋರಾಟಗಾರನ ವೀರಗಾಥೆ ಸೈರಾ ನರಸಿಂಹರೆಡ್ಡಿ ಚಿತ್ರ 

ಸೈರಾ ನರಸಿಂಹರೆಡ್ಡಿ  ಸ್ವಾತಂತ್ರ್ಯಕ್ಕಾಗಿ ತನ್ನ ಇಡೀ ಜೀವನವನ್ನೆ ತ್ಯಾಗ ಮಾಡಿ ನಂತ್ರ ಪ್ರಾಣವನ್ನು ತ್ಯಾಗ ಮಾಡಿದ ಹೋರಾಟಗಾರ...ಸ್ವಾತಂತ್ರ್ಯಹೋರಾಟಗಾರನ ಕಥೆ ಅದ್ರ ಜೊತೆಯಲ್ಲಿ ವಲ್ , ಸೆಂಟಿಮೆಂಟ್ , ಆಕ್ಷನ್ ಎಲ್ಲವನ್ನು ಹದವಾಗಿ ಸೇರಿಸಿ ಪ್ರೇಕ್ಷಕರ ಮುಂದೆ ತರುವಲ್ಲಿ ಯಶಸ್ವಿ ಆಗಿದ್ದಾರೆ ನಿರ್ದೆಶಕ ಸುರೇಂದ್ರ ರೆಡ್ಡಿ . 

ಸೈರಾ ಪಾತ್ರದಲ್ಲಿ ಮಿಂಚಿದ ಮೆಗಾ ಸ್ಟಾರ್ 

ಸೈರಾ ನರಸಿಂಹ ರೆಡ್ಡಿ ಪಾತ್ರದಲ್ಲಿ ಮೆಗಾಸ್ಟಾರ್ ಅಭಿನಯ ಮಾಡಿದ್ದು..ಖೈದಿ 150 ನಂತ್ರ ಬೆಳ್ಳಿ ತೆರೆ ಮೇಲೆ ಚಿರಂಜೀವಿಯನ್ನ ನೋಡಿದ ಅಭಿಮಾನಿಗಳಿಗೆ ಇಂದು ಹಬ್ಬದ ಸಂಭ್ರಮ. ಆಕ್ಷನ್ ಸೀನ್ ಗಳಂತು ಮೆಗಾಸ್ಟಾರ್ ಔಟ್ ಆಫ್ ಔಟ್ ಮಾರ್ಕ್ಸ್ ಪಡೆದುಕೊಂಡಿದ್ದಾರೆ. ಕ್ಲೈಮ್ಯಾಕ್ಸ್ ಹಾಗೂ ಬ್ರಿಟಿಷರ ವಿರುದ್ದ ಹೋರಾಟದ ದೃಶ್ಯಗಳಲ್ಲಿ ಪರಕಾಯ ಪ್ರವೇಶ ಮಅಡಿದ್ದಾರೆ ಚಿರಂಜೀವಿ. ದೇಶಭಕ್ತಿ ಹುಟ್ಟಿಸೋ ಡೈಲಾಗ್ಸ್ ಹೇಳುವಾಗ ನೋಡುಗರ ಮೈ ಜುಮ್ಮೆನ್ನಿಸುತ್ತಾರೆ ಮೆಗಾಸ್ಟಾರ್. 

ಅವುಕು ರಾಜನ ದರ್ಬಾರ್ ಜೋರು, ಕಿಚ್ಚನ ಆಕ್ಟಿಂಗ್​ಗೆ ಫಿದಾ ಆಗದವರೇ ಇಲ್ಲ!

ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವುಕು ರಾಜನಾಗಿ ಅಭಿನಯ ಮಾಡಿರೋ ವಿಚಾರ ಎಲ್ಲರಿಗೂ ತಿಳಿದಿದೆ. ಇನ್ನು ಸಿನಿಮಾದ ಕೆಲ ಸೀನ್ ಗಳಲ್ಲಿ ಬಂದ್ರು ಕಿಚ್ಚನಿಗೆ ಸಖತ್ ಇಂಪಾರ್ಟೆನ್ಸ್ ನೀಡಲಾಗಿದೆ. ಈ ಹಿಂದಿನ ಎಲ್ಲಾ ಸಿನಿಮಾಗಳಿಗಿಂತೂ ಹೆಚ್ಚು ಆಕ್ಟಿಂಗ್ ನಲ್ಲಿ ಹೆಚ್ಚು ಸ್ಕೋರ್ ಮಾಡಿದ್ದಾರೆ ಸುದೀಪ್. ಆನ್ ಸ್ಕ್ರೀನ್ ಆಟಿಡ್ಯೂಡ್ ಹಾಗೂ ಯುಧ್ಧ ಭೂಮಿಯಲ್ಲಿ ಕಿಚ್ಚನ ಎಂಟ್ರಿಗೆ ಅಭಿಮಾನಿಗಳು ಫುಲ್ ಫಿದಾ ಆಗ್ತಾರೆ. ಅಭಿಯ ಚಕ್ರವರ್ತಿಯ ಅಭಿನಯಕ್ಕೆ ಫಿದಾ ಆಗದವರೇ ಇಲ್ಲ ಅನ್ನೋದನ್ನ ಸುದೀಪ್ ಸೈರಾದಲ್ಲಿ ಮತ್ತೆ ಪ್ರೂವ್ ಮಾಡ್ತಾರೆ. 

ಸಿನಿಮಾಗೆ ತಕ್ಕ ಕಾಸ್ಟಿಂಗ್ ಮಾಡಿರೋ ನಿರ್ದೇಶಕ 

ಸೈರಾ ಸಿನಿಮಾದಲ್ಲಿ ಮೆಗಾಸ್ಟಾರ್ , ಅಮಿತಾಬ್ ಬಚ್ಚನ್, ಸುದೀಪ್ , ಜಗಪತಿ ಬಾಬು, ವಿಜಯ್ ಸೇತುಪತಿ , ರವಿಕಿಶನ್, ನಯನತಾರ, ತಮ್ಮನ್ನ ಸೇರಿದಂತೆ ಅನೇಕರು ಅಭಿನಯ ಮಾಡಿದ್ದಾರೆ...ಪ್ರತಿಯೊಬ್ಬರನ್ನ ಪಾತ್ರಕ್ಕೆ ತಕ್ಕಂತೆ ಆಯ್ಕೆ ಮಾಡಿದ್ದು ಎಲ್ಲರ ಅಭಿನಯವೂ ಅದ್ಬಯತವಾಗಿ ಮೂಡಿ ಬಂದಿದೆ.

ಸೈರಾ ಸಿನಿಮಾದಲ್ಲಿ ಕನ್ನಡಿಗರ ದರ್ಬಾರ್ 

ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಕನ್ನಡಿಗರು ಅಭಿನಯಿಸಿರೋದು ಖುಷಿಯ ವಿಚಾರ...ಕಿಚ್ಚ ಸುದೀಪ್ ಸೇರಿದಂತೆ..ಪವಿತ್ರ ಲೋಕೇಶ್, ತ್ರಿವೇಣಿ, ಲಕ್ಷ್ಮೀ ಗೋಪಾಲ ಸ್ವಾಮಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ...ಇದೇ ಕಾರಣದಿಂದ ಸೈರಾ ಸಿನಿಮಾ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗುತ್ತೆ. 

ಟೆಕ್ನಿಕಲಿ ಸ್ಟ್ರಾಂಗ್ ಆಗಿರೋ ಸೈರಾ ನರಸಿಂಹರೆಡ್ಡಿ 

ಸೈರಾ ನರಸಿಂಹ ರೆಡ್ಡಿ ಸಿನಿಮಾ 100ಕ್ಕೂ ಹೆಚ್ಚು ವರ್ಷದ ಹಿಂದೆ ನಡೆದಿರೋ ಕಥೆ ಆಗಿರೋ ಕಾರಣ ಸಿನಿಮಾದಲ್ಲಿ ಹೆಚ್ಚು ಗ್ರಾಫಿಕ್ಸ್ ಮತ್ತು ಸಿಜಿಯನ್ನು ಬಳಸಿಕೊಳ್ಳಲಾಗಿದೆ..270 ಕೋಟಿ ಬಂಡವಾಳ ಆನ್ ಸ್ಕ್ರೀನ್ ನಲ್ಲಿ ಚಿತ್ರವನ್ನ ಅಂದವಾಗಿ ಕಾಣುವಂತೆ ಮಾಡಿದೆ. ಟೆಕ್ನಿಕಲಿ ಆಗಿ ಚಿತ್ರದಲ್ಲಿ ಯಾವುದೇ ನ್ಯೂನತೆಗಳನ್ನ ಕಂಡುಹಿಡಿಯಲು ಸಾಧ್ಯವಾಗದಂತೆ ಚಿತ್ರದ ಪ್ರೊಡಕ್ಷನ್ ಮಾಡಿದ್ದಾರೆ ರಾಮ್ ಚರಣ್. 

ಅಪ್ಪನಿಗೆ ತಕ್ಕ ಮಗ ಎನಿಸಿಕೊಂಡ ರಾಮ್ ಚರಣ್ 
ಸೈರಾ ನರಸಿಂಹ ರೆಡ್ಡಿ ಸಿನಿಮಾ ಮೆಗಾಸ್ಟಾರ್ ಅವ್ರ ಹೋಂ ಬ್ಯಾನರ್ ನಲ್ಲಿ ನಿರ್ಮಾಣ ಆಗಿರೋ ಚಿತ್ರ....ರಾಮ್ ಚರಣ್ ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನು ಹೊಂದಿದ್ದರು..ಅದಕ್ಕೆ ತಕ್ಕಂತೆ ಚಿತ್ರ ನಿರ್ಮಾಣ ಮಾಡಿದ್ದು ಅಪ್ಪನಿಗೆ ಒಂದು ಕ್ವಾಲಿಟಿ ಹಾಗೂ ಜನರು ಮೆಚ್ಚುವ ಸಿನಿಮಾ ಕೊಟ್ಟು ತಂದೆಗೆ ತಕ್ಕ ಮಗ ಎನಿಸಿಕೊಂಡಿದ್ದಾರೆ.

ಪವಿತ್ರ, ಬಿ, ಸುವರ್ಣ ನ್ಯೂಸ್ 
 

Follow Us:
Download App:
  • android
  • ios