ಕೆಲವು ತಿಂಗಳ ಹಿಂದೆ ಫೋನ್ ಅಂಗಡಿಯೊಂದನ್ನು ಉದ್ಘಾಟಿಸಲು ಕೇರಳಕ್ಕೆ ತೆರಳಿದಾಗ, ರಸ್ತೆಗಳ ಇಕ್ಕೆಲಗಳಲ್ಲಿ ಸೇರಿದ ಜನ ಸಾಗರವನ್ನು ನೋಡಿದ ಸನ್ನಿ ಫುಲ್ ಫಿದಾ ಆಗಿದ್ದರು. ಈ ಬಾಲಿವುಡ್ ಬ್ಯೂಟಿಯನ್ನು ನೋಡಲು ಸೇರಿದ ಜನರನ್ನು ನಿಯಂತ್ರಿಸಲು ಟ್ರಾಫಿಕ್ ಪೊಲೀಸ್ ಹರಸಾಹಸ ಪಡಬೇಕಾಯಿತು. ಆದರೆ, ಈ ಕೇರಳಿಗರ ಪ್ರೀತಿಗೆ ತಲೆ ಬಾಗಿದ ನಟಿ, ಇದೀಗ ಮಾಲಿವುಡ್‌ಗೆ ಎಂಟ್ರಿ ನೀಡಲು ಮುಂದಾಗುತ್ತಿದ್ದಾರೆ.

'ದಿ ಒನ್ ನೈಟ್ ಸ್ಟ್ಯಾಂಡ್' ನಟಿ ಎಂದೇ ಫೇಮ್ ಆದ ಸನ್ನಿ ತನ್ನ ಟ್ವಿಟರ್‌ನಲ್ಲಿ 'ರಂಗೀಲಾ' ಚಿತ್ರದ ಮೂಲಕ ಮಾಲಿವುಡ್‌ಗೆ ಎಂಟ್ರಿ ಕೊಡುವ ಎಕ್ಸ್‌ಕ್ಲೂಸಿವ್ ಸುದ್ದಿಯನ್ನು ಬಹಿರಂಗಗೊಳಿಸಿದ್ದಾರೆ.

ಸನ್ನಿ ಬ್ಯಾಗ್‌ ಸೀಕ್ರೇಟ್ ಬಹಿರಂಗ! ಅಷ್ಟಕ್ಕೂ ಅದರಲ್ಲಿ ಏನಿರುತ್ತೆ?

'ನಾನು ರಂಗೀಲಾ ಚಿತ್ರ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಡುತ್ತಿದ್ದೇನೆ. ಫೆಬ್ರವರಿಯಿಂದ ಚಿತ್ರೀಕರಣ ಶುರುವಾಗಲಿದೆ. ಬ್ಯಾಕ್‌ವಾಟರ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಬರುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರಾಗಿ ಸಂತೋಷ ನಾಯರ್ ಹಾಗೂ ನಿರ್ಮಾಪಕರಾಗಿ ಜಯಮಹಲ್ ಮೆನನ್ ಕಾರ್ಯನಿರ್ವಹಿಸಲಿದ್ದಾರೆ.

ಸನ್ನಿಯನ್ನು ನೋಡಲು ಸೇರಿದ್ದ ಜನಸಾಗರ, ಈ ಚಿತ್ರವನ್ನು ನೋಡಲು ಸೇರುತ್ತಾರಾ ಎಂಬುದನ್ನು ಕಾದು ನೋಡಬೇಕು.