ಸನ್ನಿ ಲಿಯೋನ್ ಸೌಂದರ್ಯಕ್ಕೆ ಮರುಳಾಗದವರು ಯಾರಿದ್ದಾರೆ? ಬಾಲಿವುಡ್ ನಲ್ಲಿ ಮಿಂಚುತ್ತಿರುವ ಬೆಡಗಿಯ ಮೇಣದ ಪ್ರತಿಮೆ ಸಹ ಅನಾವರಣವಾಗಿದೆ. ಎಲ್ಲಿ ಅಂತೀರಾ? ಈ ಸುದ್ದಿ ಓದಿ..

ನವದೆಹಲಿ[ಸೆ. 18]  ಮಾಜಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಮೇಣದ ಪ್ರತಿಮೆ ದೆಹಲಿಯ ಮೇಡಮ್ ಟುಸಾಡ್ಸ್ ಮ್ಯೂಸಿಯಂನಲ್ಲಿ ಅನಾವರಣಗೊಂಡಿದೆ. ಮೇಡಮ್ ಟುಸಾಡ್ಸ್ ಮ್ಯೂಸಿಯಂನಲ್ಲಿ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಶಾರೂಕ್ ಖಾನ್ ವರೆಗೂ ಕೆಲ ಬಾಲಿವುಡ್ ತಾರೆಯರ ಪ್ರತಿಮೆಗಳನ್ನು ಕಾಣಬಹುದಾಗಿದೆ. ಈಗ ಈ ಸಾಲಿನಲ್ಲಿ ಸನ್ನಿ ಲಿಯೋನ್ ಸಹ ಸ್ಥಾನ ಪಡೆದುಕೊಂಡಿರುವುದು ವಿಶೇಷ.

ದೇಶದಲ್ಲಿ ಇದು ಮೊದಲ ಪರಿಮಳಯುಕ್ತ ಮೇಣದ ಪ್ರತಿಮೆಯಾಗಿದ್ದು, ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸನ್ನಿ ಲಿಯೋನ್ ಪಾಲ್ಗೊಂಡಿದ್ದರು. ತಮ್ಮ ಮೇಣದ ಪ್ರತಿಮೆ ಅನಾವರಣದಿಂದ ತುಂಬಾ ಸಂತೋಷವಾಗಿರುತ್ತಿರುವುದಾಗಿ ಸನ್ನಿ ಲಿಯೋನ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

Scroll to load tweet…