ಕುಂಕುಮ ಭಾಗ್ಯ ಧಾರಾವಾಹಿ ಬಹುತೇಕ ಮಹಿಳೆಯರ ಫೇವರೇಟ್ ಧಾರಾವಾಹಿ. ಸೀರಿಯಲ್ ಲೋಕದಲ್ಲಿ ಇದೊಂದು ಫೇಮಸ್. ನಟಿ ಸನ್ನಿ ಲಿಯೋನ್ ಕೂಡಾ ಈ ಧಾರಾವಾಹಿಯನ್ನು ನೋಡುತ್ತಾರೆ. ಅಲ್ಲಿ ಶೃತಿ ಜಾ, ಶಬೀರ್ ಅಹ್ಲುವಾಲಿಯಾ ಹೇಳುವ ಡೈಲಾಗನ್ನು ಇವರೂ ಹೇಳುತ್ತಾರೆ. 

ಕುಂಕುಮ ಭಾಗ್ಯ ನೋಡುತ್ತಾ, ಆ ಡೈಲಾಗನ್ನು ತಾವೂ ಹೇಳುತ್ತಿರುವ ವಿಡಿಯೋವನ್ನು ಸನ್ನಿ ಲಿಯೋನ್ ಶೇರ್ ಮಾಡಿದ್ದಾರೆ. 

 

ನನ್ನ ಬಿಡುವಿನ ಟೈಮಲ್ಲಿ ಕುಂಕುಮ ಭಾಗ್ಯ ನೋಡುತ್ತಾ ನಟನೆ ಕಲಿತ್ತಿದ್ದೇನೆ. ಕುಂಕುಮ ಭಾಗ್ಯ ತಂಡಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. 

ಸನ್ನಿ ಶೇರ್ ಮಾಡಿಕೊಂಡಿರುವ ಈ ವಿಡಿಯೋಗೆ  8 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳು ಬಂದಿವೆ. 

ಇತ್ತೀಚಿಗೆ ಪತಿ ಡೇನಿಯಲ್ ವೆಬರ್ ಜೊತೆ ಸೇರಿ ಚಿಕ್ಕ ಮಕ್ಕಳಿಗಾಗಿ ಶಾಲೆಯೊಂದನ್ನು ಆರಂಭಿಸಿದ್ದಾರೆ. ಇದು ಸಾರ್ವಜನಿಕ ಮೆಚ್ಚುಗೆಗೆ ಕಾರಣವಾಗಿದೆ.