ಸನ್ನಿ ಲಿಯೋನ್ ತನ್ನ ಪತಿ ಹಾಗೂ ಮಕ್ಕಳೊಂದಿಗೆ ಹೋಳಿ ಹಬ್ಬ ಆಚರಣೆ ಮಾಡುತ್ತಿರುವ ಫೋಟೋ ವೈರಲ್ ಆಗುತ್ತಿದೆ.

ಬಾಲಿವುಡ್ ಹಾಟ್ ಲಡ್ಕಿ ಸನ್ನಿ ಲಿಯೋನ್ ತನ್ನ ಪತಿ ಹಾಗೂ ಮೂರು ಮಕ್ಕಳೊಂದಿಗೆ ಹೋಳಿ ಹಬ್ಬ ಅಚರಣೆ ಮಾಡಿರುವ ಫೋಟೋವನ್ನು ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸನ್ನಿ ಸಾಮಾಜಿಕ ಜಾಲತಾಣದಲ್ಲಿ ಎಷ್ಟು ಫೇಮಸ್ಸೋ ಅಷ್ಟೇ ಅವರ ಮಕ್ಕಳು ನಿಶಾ, ಆಶೇರ್ ಹಾಗೂ ನೋಹಾ ಕೂಡಾ ಸಿಕ್ಕಾಪಟ್ಟೆ ಫೇಮಸ್. ಸನ್ನಿ ಹಾಕಿರುವ ಕ್ಯೂಟ್ ಫೋಟೋಗೆ ‘ಹ್ಯಾಪಿ ಹೋಳಿ ಫರ್ಮ್ ವೆಬ್ಬರ್ ’ ಎಂದು ಬರೆದುಕೊಂಡಿದ್ದಾರೆ.

View post on Instagram

2017 ರಲ್ಲಿ ಲಾತೂರಿನಲ್ಲಿ ತನ್ನ ಪುತ್ರಿ ನಿಶಾಳನ್ನು ದತ್ತು ಪಡೆದುಕೊಂಡಿದ್ದರು. ಕಳೆದ ವರ್ಷ ಸರೊಗೆಸಿ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದರು.