’ಪ್ರೀತಿಯ ರಾಯಭಾರಿ’ ಚಿತ್ರದ ನಾಯಕಿ ಸುಕೃತ ದೇಶಪಾಂಡೆ ತಮ್ಮ ಚಿತ್ರದ ಬಗ್ಗೆ ಹೇಳುವುದು ಹೀಗೆ

First Published 28, Feb 2018, 12:14 PM IST
Sukrutha Deshapande interview with Kannada Prabha
Highlights

ನಂದಿಬೆಟ್ಟದಲ್ಲಿ ನಡೆದ ನೈಜ ಕತೆ  ಆಧರಿಸಿದ ‘ಪ್ರೀತಿಯ ರಾಯಭಾರಿ’ ಚಿತ್ರದ ನಾಯಕಿ ’ಸುಕೃತಾ ದೇಶಪಾಂಡೆ’ ಜೊತೆ ಮಾತುಕತೆ 

ಬೆಂಗಳೂರು (ಫೆ. 28):  ನಂದಿಬೆಟ್ಟದಲ್ಲಿ ನಡೆದ ನೈಜ ಕತೆ  ಆಧರಿಸಿದ ‘ಪ್ರೀತಿಯ ರಾಯಭಾರಿ’ ಚಿತ್ರದ ನಾಯಕಿ ’ಸುಕೃತಾ ದೇಶಪಾಂಡೆ’ ಜೊತೆ ಮಾತುಕತೆ 
 

ಪ್ರೀತಿಯ ರಾಯಬಾರಿಯದ್ದು ನೈಜ ಕತೆ ಎನ್ನುತ್ತಿದ್ದೀರಿ. ಏನದು?

ಈ ಕತೆ ಎಲ್ಲರಿಗೂ ಗೊತ್ತು. ಆದರೆ, ಈಗ ಮರೆತಿರಬಹುದು. ರಾಜ್ಯದಲ್ಲೇ ಸಂಚಲನ ಉಂಟು ಮಾಡಿದ ಘಟನೆ ಅದು.
 

ಈ ಚಿತ್ರದ ಕತೆಯಲ್ಲಿ ಆಗಿದ್ದು ಏನು?
ಒಂದು ನೈಜ ಕತೆಯನ್ನು ಹೀಗೂ ಸಿನಿಮಾ ಮಾಡಕ್ಕೆ ಸಾಧ್ಯವೇ ಎನ್ನುವಂತಹ ಚಿತ್ರವಿದು. ಇಲ್ಲಿವರೆಗೂ ನಾನು ನಟಿಸಿರುವ ಚಿತ್ರಗಳಲ್ಲಿ ಒಂದಿಷ್ಟು ಗ್ಲಾಮರ್ ಆಗಿ ಕಾಣಿಸಿಕೊಂಡಿರುವೆ. ಆದರೆ, ಇಲ್ಲಿ ನಟನೆಗೆ ಮಹತ್ವ ಇರುವ ಪಾತ್ರ ಮಾಡಿದ್ದೇನೆ.
 

ಚಿತ್ರೀಕರಣದ ಅನುಭವ ಹೇಗಿತ್ತು?
ಹಿರಿಯೂರು ಬಳಿ ಚಿತ್ರೀಕರಣ ಮಾಡಿದ್ದು. ಇಲ್ಲೊಂದು ವಿಶೇಷವಾದ ಊರಿದೆ. ಅದರ ಹೆಸರು ಕತ್ತೆಹೊಳೆ. ಇದನ್ನು ನೀವು ಗೂಗಲ್ ಮ್ಯಾಪ್‌ನಲ್ಲಿ ಹುಡುಕಿದರೂ ಸಿಗಲ್ಲ. ಆದರೂ ಎಲ್ಲ ರೀತಿಯ  ಸೌಲಭ್ಯಗಳನ್ನು ಒಳಗೊಂಡ ಹಳ್ಳಿ. ೪೦ರಿಂದ ೫೦ ಮನೆಯಗಳನ್ನು ಒಳಗೊಂಡ ಈ ಹಳ್ಳಿಯಲ್ಲಿ  ಜನರೇ ಎಲ್ಲ ರೀತಿಯ ಸೌಲಭ್ಯಗಳನ್ನು ಮಾಡಿಕೊಂಡಿದ್ದಾರೆ. ಸೋಲಾರ್ ಇದೆ. ವೈಫೈ  ಕನೆಕ್ಷನ್ ಇದೆ. ಇಂಥ ಊರಿನಲ್ಲಿ ನಾನು ಎರಡು ದಿನ ಕಳೆದ ಮೇಲೆ ಪಾತ್ರ ಮಾಡಿದ್ದು. ನನಗೆ ಹಳ್ಳಿ ಜೀವನ ಗೊತ್ತಿಲ್ಲ. ಹಳ್ಳಿಗಳಲ್ಲಿ ಹೆಣ್ಣು ಮಕ್ಕಳು ಹೇಗಿರುತ್ತಾರೆಂಬುದನ್ನೂ ನೋಡಿಲ್ಲ. ಹೀಗಾಗಿ  ಎರಡು ದಿನ ಹಳ್ಳಿಯಲ್ಲಿ ಕಳೆದು ಆ ಮೇಲೆ ನಾನು ಪಾತ್ರ ಮಾಡಿದೆ.
 

ಈ ಚಿತ್ರದ ನಂತರ ನಿಮ್ಮ ನಟನೆಯ ಯಾವ ಸಿನಿಮಾ ಬರಲಿದೆ?
ನಿರ್ದೇಶಕ ಹರ್ಷ ಅವರ ‘ಕಪಿಚೇಷ್ಟೆ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವೆ. ಈ ಚಿತ್ರದ ನಾಯಕ ಮೋಹನ್.

ನಿಮ್ಮ ನಟನೆಯ ಹಿಂದಿನ ಚಿತ್ರಗಳ ಬಗ್ಗೆ ಹೇಳುವುದಾದರೆ?
ನಾನು ತೆಲುಗು ಚಿತ್ರದ ಮೂಲಕ ನಟನೆಗೆ ಬಂದೆ. ‘ನೇನು ನಾ ಫ್ರೆಂಡ್ಸ್’ ನನ್ನ ಮೊದಲ ಚಿತ್ರ. ಆ ನಂತರ ಜಗ್ಗೇಶ್ ಅವರ ಮಗನ ಜತೆಗೆ ‘ತರ್ಲೆ ನನ್ಮ್‌ಕ್ಳು’ ಚಿತ್ರದಲ್ಲಿ ನಟಿಸಿದೆ.  

-ಸಂದರ್ಶನ; ಕೇಶವಮೂರ್ತಿ 

loader