ಕಿಚ್ಚ ಸುದೀಪ್ ಸಲ್ಲಿಸಿದ್ದ ಮನವಿಯನ್ನ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. ಈ ಒಂದು ಸಂತಸದ ವಿಷವಯನ್ನ ತಿಳಿದಿರೋ ಸುದೀಪ್, ಅದನ್ನ ತಮ್ಮ ಟ್ವಿಟರ್ ಅಕೌಂಟ್​ ನಲ್ಲೂ ಬರೆದುಕೊಂಡಿದ್ದಾರೆ.

ಸಾಹಸ ಸಿಂಹ ವಿಷ್ಣುವರ್ಧನ್ ಪುಣ್ಯ ಭೂಮಿ ಇಲ್ಲಿಯೇ ಇರಬೇಕು.ಅಂತ್ಯಕ್ರಿಯೆ ಆಗಿರೋ ಅಭಿಮಾನ್ ಸ್ಟುಡಿಯೋದ ಒಂದು ಎಕರೆ ಜಾಗದಲ್ಲಿಯೇ ಅದು ಇರಬೇಕು. ಅದನ್ನ ಸ್ಥಳಾಂತರಿಸಲೇಬಾರದು. ಹಾಗಂತ ಆರಂಭದಿಂದಲೂ ವಿಷ್ಣು ಅಭಿಮಾನಿಗಳು ಪಟ್ಟು ಹಿಡಿದ್ದರು. ಅವರ ಆಸೆಗೆ ಕಿಚ್ಚ ಸುದೀಪ್ ಕೂಡ ನೀರೆದರು.

ಈ ಸಂಬಂಧ ಮೊನ್ನೆ ಸಿ.ಎಂ. ಸಿದ್ದರಾಮಯ್ಯನವರನ್ನೂ ಭೇಟಿ ಮಾಡಿದರು. ಈಗ ಆ ಭೇಟಿ ಫಲಿಸುತ್ತಿದೆ. ಸಿ.ಎಂ.ಆಪ್ತ ಕಾರ್ಯದರ್ಶಿ ಡಾ.ಸಿಂಧೆ ಭೀಮಸೇನ್ ರಾವ್ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಕಿಚ್ಚ ಸುದೀಪ್ ಸಲ್ಲಿಸಿದ್ದ ಮನವಿಯನ್ನ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. ಈ ಒಂದು ಸಂತಸದ ವಿಷವಯನ್ನ ತಿಳಿದಿರೋ ಸುದೀಪ್, ಅದನ್ನ ತಮ್ಮ ಟ್ವಿಟರ್ ಅಕೌಂಟ್​ ನಲ್ಲೂ ಬರೆದುಕೊಂಡಿದ್ದಾರೆ. ತಮ್ಮ ಮನವಿಗೆ ತಕ್ಷಣವೇ ಸ್ಪಂಧಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ಆಪ್ತ ಕಾರ್ಯದರ್ಶಿಗಳಿಗೆ ಧನ್ಯವಾದಗಳನ್ನೂ ತಿಳಿಸಿದ್ದಾರೆ.