Asianet Suvarna News Asianet Suvarna News

ಇಷ್ಟೊಂದು ಕೋಟಿ ಬೇಕಾಯ್ತಾ ಕೋಟಿಗೊಬ್ಬ 3 ಸೆಟ್‌ಗೆ ?

ಸುದೀಪ್‌ ನಟನೆಯ ‘ಕೋಟಿಗೊಬ್ಬ 3’ ಚಿತ್ರಕ್ಕಾಗಿ ಅದ್ದೂರಿಯಾಗಿ ಸೆಟ್‌ ನಿರ್ಮಿಸಲಾಗಿದೆ. ಈಗಾಗಲೇ ಶೂಟಿಂಗ್‌ ಆರಂಭವಾಗಿದ್ದು, ಬರೋಬ್ಬರಿ 10 ದಿನಗಳ ಕಾಲ ಈ ಸೆಟ್‌ನಲ್ಲಿ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಣ ಮಾಡಿಕೊಳ್ಳುವುದಕ್ಕೆ ನಿರ್ದೇಶಕ ಶಿವ ಕಾರ್ತಿಕ್‌ ನಿರ್ಧರಿಸಿದ್ದಾರೆ. ಖ್ಯಾತ ಸಾಹಸ ನಿರ್ದೇಶಕ ವಿಜಯ್‌ ಅವರ ಸಾರಥ್ಯದಲ್ಲಿ ದೊಡ್ಡ ತಂಡವೇ ಸಾಹಸ ದೃಶ್ಯಗಳಿಗಾಗಿ ಕೆಲಸ ಮಾಡುತ್ತಿದೆ.

Sudeep Kotigobba 3 starts shooting in Arun Sagar 2 crore creative  set
Author
Bangalore, First Published Jul 16, 2019, 9:44 AM IST

ಅರುಣ್‌ ಸಾಗರ್‌ ಕಲೆಗೆ ಸುದೀಪ್‌ ಮೆಚ್ಚುಗೆ

ಅಂದಹಾಗೆ ‘ಕೋಟಿಗೊಬ್ಬ 3’ ಚಿತ್ರಕ್ಕಾಗಿ ರಾಮೋಜಿ ಫಿಲಮ್‌ ಸಿಟಿಯಲ್ಲಿ ಹಾಕಿರುವ ಈ ಸೆಟ್‌ ಹಿಂದಿನ ಕಲಾ ನಿರ್ದೇಶಕ ಅರುಣ್‌ ಸಾಗರ್‌ ಅವರು. ಇದೊಂದು ಫುಡ್‌ ಕೋರ್ಟ್‌ ಸೆಟ್‌. ಸುಮಾರು 25 ದಿನಗಳ ಕಾಲ 70 ಮಂದಿಯ ಕೆಲಸಗಾರರಿಂದ ಈ ಫುಡ್‌ ಕೋರ್ಟ್‌ ನಿರ್ಮಾಣಗೊಂಡಿದ್ದು, ಸ್ವತಃ ನಟ ಸುದೀಪ್‌ ಅವರೇ ಸೆಟ್‌ ನೋಡಿ ಸೂಪರ್‌ ಎಂದಿದ್ದಾರೆ. ‘ಸೆಟ್‌ ತುಂಬಾ ಕಲರ್‌ಫುಲ್ಲಾಗಿ ಮಾಡಿದ್ದೀರಿ. ಸೂಪರ್‌. ನಿಮ್ಮ ಈ ಸೆಟ್‌ ನಿರ್ಮಾಣದ ಶ್ರಮ ಹಾಗೂ ಕಲೆ ತೆರೆ ಮೇಲೆ ಇಷ್ಟೇ ಅದ್ದೂರಿಯಾಗಿ ಕಾಣಲಿದೆ’ ಎಂದು ಸುದೀಪ್‌ ಅವರು ಮೆಚ್ಚುಗೆ ಸೂಚಿಸಿದ್ದಾರೆ.

ನಮ್ಮ ಚಿತ್ರದ ಸನ್ನಿವೇಶಗಳು ಶೇ.60 ಭಾಗ ಸೆಟ್‌ಗಳಲ್ಲೇ ಚಿತ್ರೀಕರಣಗೊಳ್ಳುತ್ತಿವೆ. ಒಂದು ಬ್ರೇಕ್‌ನ ನಂತರ ಈಗ ಫುಡ್‌ ಕೋರ್ಟ್‌ನಲ್ಲಿ ಶೂಟಿಂಗ್‌ ಮಾಡುತ್ತಿದ್ದೇವೆ. ನಿರ್ದೇಶಕರ ಕಲ್ಪನೆ, ಕಲಾ ನಿರ್ದೇಶಕ ಅರುಣ್‌ ಸಾಗರ್‌ ಅವರ ಶ್ರಮಕ್ಕೆ ತಕ್ಕಂತೆ ನಿರ್ಮಾಪಕನಾಗಿ ಅವರು ಕೇಳಿದ್ದೆಲ್ಲವನ್ನೂ ಕೊಟ್ಟಿದ್ದೇನೆ. ಕೇವಲ ಫೈಟ್‌ಗಾಗಿ 2 ಕೋಟಿ ವೆಚ್ಚದಲ್ಲಿ ಸೆಟ್‌ ಹಾಕಿರುವುದು ಹೆಗ್ಗಳಿಕೆ - ಸೂರಪ್ಪ ಬಾಬು, ನಿರ್ಮಾಪಕ

2 ಕೋಟಿ ವೆಚ್ಚದ ಸೆಟ್‌

ಹತ್ತಕ್ಕೂ ಹೆಚ್ಚು ಮುಖ್ಯ ಕಲಾವಿದರು, 150ಕ್ಕೂ ಹೆಚ್ಚು ಜ್ಯೂನಿಯರ್‌ ಕಲಾವಿದರ ನಟನೆಗೆ ಸಾಕ್ಷಿಯಾಗುತ್ತಿರುವ ಈ ಫುಡ್‌ ಕೋರ್ಟ್‌ ಸೆಟ್‌ಗೆ ನಿರ್ಮಾಪಕ ಸೂರಪ್ಪ ಬಾಬು 2 ಕೋಟಿ ವೆಚ್ಚ ಮಾಡಿದ್ದಾರೆ. ಮಾರ್ಡನ್‌ ಸಿಟಿಯಂತೆ ಕಾಣುವ ಈ ಸೆಟ್‌, ಚಿತ್ರದಲ್ಲಿ ಬರುವ ಸಾಹಸ ಸನ್ನಿವೇಶಗಳನ್ನು ಹೈಲೈಟ್‌ ಮಾಡಲಿದ್ದು, ಸೆಟ್‌ ನಿರ್ಮಾಣದಲ್ಲಿ ಯಾವುದೇ ರೀತಿಯ ಕೊರತೆ ಎದುರಾಗದಂತೆ ಅದ್ದೂರಿ ನಿರ್ಮಾಣಕ್ಕೆ ಸಾಥ್‌ ನೀಡಿದ್ದಾರೆ. ಹೀಗಾಗಿ ಫೈಟ್‌ ದೃಶ್ಯಗಳ ಚಿತ್ರೀಕರಣಕ್ಕಾಗಿಯೇ 2 ಕೋಟಿ ವೆಚ್ಚದಲ್ಲಿ ಸೆಟ್‌ ಹಾಕಿಸಿದ್ದಾರೆ.

ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಮುಖದ ಮೇಲೆ ಹೊಡೆದಂತೆ ಹೇಳುತ್ತಾರೆ ಕಿಚ್ಚನ ಪುತ್ರಿ!

ಕಲಾವಿದರ ದಂಡು

ಸುದೀಪ್‌, ಮಲಯಾಳಂನ ಮಾಡೋನ ಸೆಬಾಸ್ಟೀನ್‌, ಬಾಲಿವುಡ್‌ನ ಅಫ್ತಾಬ್‌ ಶಿವದಾಸಿನಿ, ತೆಲುಗಿನ ಶ್ರದ್ಧಾ ದಾಸ್‌ ಸೇರಿದಂತೆ ಬಹು ಭಾಷೆಯ ಕಲಾವಿದರು ಈ ಹತ್ತು ದಿನಗಳ ಕಾಲ ನಡೆಯಲಿರುವ ಚಿತ್ರೀಕರಣದಲ್ಲಿ ಪಾಲ್ಗೊಳುತ್ತಿದ್ದಾರೆ. ಹೀಗಾಗಿ ಸಾಹಸಗಳ ಜತೆಗೆ ಒಂದಿಷ್ಟುಮಾತಿನ ಭಾಗದ ದೃಶ್ಯಗಳ ಚಿತ್ರೀಕರಣ ಕೂಡ ನಡೆಯಲಿದೆ. ತಾಂತ್ರಿಕವಾಗಿ ಇಂಟರ್‌ನ್ಯಾಷನಲ್‌ ಕ್ವಾಲಿಟಿಯಲ್ಲಿ ಈ ಚಿತ್ರದ ಮೇಕಿಂಗ್‌ ಮಾಡುತ್ತಿದ್ದು, ಹಾಲಿವುಡ್‌ ಸಿನಿಮಾ ನೋಡಿದ ಅನುಭವ ಪ್ರೇಕ್ಷಕರದ್ದಾಗಲಿದೆಯಂತೆ.

Follow Us:
Download App:
  • android
  • ios