‘ಆಡಿಯೋ ಬಿಡುಗಡೆಯಿಂದ ನಾನು ತುಂಬಾ ಎಕ್ಸೈಟ್‌ ಆಗಿದ್ದೇನೆ. ಪೈಲ್ವಾನ್‌ ತಂಡ ಚಿತ್ರದುರ್ಗಕ್ಕೆ ಆಗಮಿಸಲಿದೆ. ದೊಡ್ಡ ಮಟ್ಟದಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡುತ್ತಿರುವುದಕ್ಕೆ ಖುಷಿ ಇದೆ’ ಎಂದು ನಟ ಸುದೀಪ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಪೈಲ್ವಾನ್‌ 2 ನೇ ಸಾಂಗ್ ರಿಲೀಸ್; ಯುಟ್ಯೂಬ್‌ನಲ್ಲಿ ಜೋರಾಗಿದೆ ಹವಾ

ಕನ್ನಡ ಸೇರಿದಂತೆ ತೆಲುಗು, ತಮಿಳು, ಮಯಾಳಂ ಹಾಗೂ ಹಿಂದಿಯಲ್ಲಿ ಸೆ.12ರಂದು ದೊಡ್ಡ ಮಟ್ಟದಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಈಗಾಗಲೇ ಯೂಟ್ಯೂಬ್‌ನಲ್ಲಿ ಚಿತ್ರದ ಲಿರಿಕಲ್‌ ಆಡಿಯೋ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಕಾಂಕ್ಷ ಸಿಂಗ್‌ ಚಿತ್ರದ ನಾಯಕಿ. ಸುನೀಲ್‌ ಶೆಟ್ಟಿ, ಕಬೀರ್‌ ದುಹಾನ್‌ ಸಿಂಗ್‌ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.