ಕಿಚ್ಚ ಸುದೀಪ್ ಬಹುನಿರಿಕ್ಷಿತ 'ಪೈಲ್ವಾನ್' ಸಿನಿಮಾದ ಎರಡನೇ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. 

ಸಾಂಗ್ ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಭೇಷ್ ಸುದೀಪ್ ಸರ್ ಎಂದು ಹೇಳುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಈ ಹಾಡನ್ನು ರಿಲೀಸ್ ಮಾಡಲಾಗಿದೆ. 

‘ಬಾರೋ ಪೈಲ್ವಾನ’ ಸಾಹಿತ್ಯ ಕೇಳುವುದಕ್ಕೆ ಚೆನ್ನಾಗಿದೆ. ಸುದೀಪ್ ಹಾಗೂ ಸುನೀಲ್ ಶೆಟ್ಟಿ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ಲುಕ್ ಇಷ್ಟವಾಗುವಂತಿದೆ. ವಿಜಯ್ ಪ್ರಕಾಶ್, ಕೈಲಾಶ್ ಕೇರ್, ಚಂದನ್ ಶೆಟ್ಟಿ ಹಾಡಿದ್ದಾರೆ. ವಿ ನಾಗೇಂದ್ರ ಪ್ರಸಾದ್, ಅರ್ಜುನ್ ಜನ್ಯ ಸಂಗೀತ ಕೇಳುಗರಿಗೆ ಮೋಡಿ ಮಾಡುವುದರಲ್ಲಿ ಸಂಶಯವೇ ಇಲ್ಲ. 

 

ಪೈಲ್ವಾನ್ ನಿರ್ದೇಶಕ ಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸುದೀಪ್, ಸುನೀಲ್ ಶೆಟ್ಟಿ, ಆಕಾಂಕ್ಷಾ ಸಿಂಗ್, ಕಬೀರ್ ದುಹಾನ್, ಶರತ್ ಲೋಹಿತಾಶ್ವ ತಾರಾಗಣವಿದೆ. ಈಗಾಗಲೇ ಕಣ್ಣ ಮಣಿಯೇ,,,ಕಣ್ಣು ಹೊಡಿಯೇ ಎಂಬ ಸಾಂಗೊಂದು ರಿಲೀಸ್ ಆಗಿದೆ.