Asianet Suvarna News Asianet Suvarna News

ಕೆಂಪೇಗೌಡ 2ನಲ್ಲಿ ಸುದೀಪ್ ಇರುತ್ತಾರಾ?

ನಟ ಸುದೀಪ್‌ ಕೆರಿಯರ್‌ನಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್‌ ಕೊಟ್ಟಸಿನಿಮಾ ‘ಕೆಂಪೇಗೌಡ'. ಈ ಚಿತ್ರದ ಮುಂದುವರಿದ ಭಾಗ ಬರುತ್ತದೆಂದು ಕೆಲವು ದಿನಗಳ ಹಿಂದೆ ಸುದ್ದಿ ಆಗಿತ್ತು. ಆದರೆ ಯಾವಾಗ ಸೆಟ್ಟೇರುತ್ತದೆಂಬ ಬಗ್ಗೆ ಮಾಹಿತಿ ಇರಲಿಲ್ಲ. ಈಗಷ್ಟೆಅಧಿಕೃತವಾಗಿ ಬಂದಿರುವ ಮಾಹಿತಿಯಂತೆ ಇದೇ ಶುಕ್ರವಾರ ಅದ್ಧೂರಿಯಾಗಿ ‘ಕೆಂಪೇಗೌಡ-2' ಸಿನಿಮಾ ಲಾಂಚ್‌ ಆಗುತ್ತಿದೆ. ಅಂದು ಚಿತ್ರದ ಹೆಸರಿನ ಜತೆಗೆ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಲು ನಿರ್ಮಾಪಕ ಶಂಕರೇಗೌಡ ನಿರ್ಧರಿಸಿದ್ದಾರೆ.

sudeep in kempegowda 2

ಇದೆಲ್ಲ ಓಕೆ, ‘ಕೆಂಪೇಗೌಡ-2' ಚಿತ್ರದ ಹೀರೋ ಯಾರು? ಎನ್ನುವ ಪ್ರಶ್ನೆ ಆಗಲೇ ಶುರುವಾಗಿದೆ. ‘ಕೆಂಪೇಗೌಡ' ಹೆಸರು ಕೇಳಿ ಈ ಚಿತ್ರಕ್ಕೆ ಸುದೀಪ್‌ ಹೀರೋ ಆಗುತ್ತಾರೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಯಾಕೆಂದರೆ ‘ಕೆಂಪೇಗೌಡ' ಅಂದ ತಕ್ಷಣ ಅವರ ಮೀಸೆ, ಆರ್ಭಟ, ಖಾಕಿ ಖದರ್‌ ಎಲ್ಲಾ ಜೊತೆಗೇ ಬರುತ್ತದೆ.

‘ಕೆಂಪೇಗೌಡ-2' ಚಿತ್ರಕ್ಕೆ ‘ಪಕ್ಕಾ ವರಿಜಿನಲ್‌' ಎನ್ನುವ ಟ್ಯಾಗ್‌'ಲೈನ್‌ ಇದೆ. ಹೀಗಾಗಿ ‘ಪಕ್ಕಾ ವರಿಜಿನಲ್‌' ಎಂದ ಮೇಲೆ ‘ಕೆಂಪೇಗೌಡ'ನ ಮುಂದುವರಿದ ಭಾಗವಲ್ಲ, ಇದೇ ಬೇರೆ ಅಂತಾಯಿತು. ಅಷ್ಟೇ ಅಲ್ಲ, ಸುದೀಪ್‌ ಅವರೇ ಆ ದಿನ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡುತ್ತಿದ್ದಾರೆ. ಹಾಗಿದ್ದರೆ ‘ಕೆಂಪೇಗೌಡ-2'ಗೆ ಸುದೀಪ್‌ ಹೀರೋ ಅಲ್ವಾ ಎನ್ನುವ ಪ್ರಶ್ನೆ ಹುಟ್ಟುವುದು ಸಹಜವಾಗಿ ಹುಟ್ಟುವ ಪ್ರಶ್ನೆ. ಆದರೆ ಈ ಬಗ್ಗೆ ಶಂಕರೇಗೌಡ ಯಾವುದೇ ಗುಟ್ಟು ಬಿಟ್ಟು ಕೊಡುತ್ತಿಲ್ಲ. ‘ಹೀರೋ ಯಾರು, ನಾಯಕಿ ಯಾರು ಎಂಬುದನ್ನು ಶುಕ್ರವಾರದ ತನಕ ಕಾಯಿರಿ' ಎನ್ನುತ್ತಾರೆ ಅವರು. ಎಲ್ಲಿಗೆ ಈ ಚಿತ್ರದ ಮೂಲಕ ಹೊಸಬರನ್ನು ಚಿತ್ರರಂಗಕ್ಕೆ ಪರಿಚಯಿಸು­ತ್ತಾರೆಯೇ? ಅಥವಾ ಸುದೀಪ್‌ ಅವರನ್ನೇ ಖಾಯಂ ಮಾಡಿಕೊಳ್ಳುತ್ತಾರೆಯೇ? ಇದಕ್ಕೆ ಉತ್ತರ ಸಿನಿಮಾ ಲಾಂಚ್‌ ಆದ ದಿನವೇ ಸಿಗಲಿದೆ.

ವರದಿ: ಕನ್ನಡಪ್ರಭ

Follow Us:
Download App:
  • android
  • ios