ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ರಕ್ಷಿತ್-ರಶ್ಮಿಕಾ ಬ್ರೇಕ್ ಅಪ್ ಸ್ಟೋರಿ ರಕ್ಷಿತ್ ಸ್ಪಸ್ಟನೆ ನೀಡಿದ ಮೇಲೆ ಒಂದು ಹಂತಕ್ಕೆ ಅಂತ್ಯವಾದಂತೆ ಕಾಣುತ್ತಿದೆ. ರಕ್ಷಿತ್ ಶೆಟ್ಟಿ ಅವರಿಗೆ ಕಿಚ್ಚ ಸುದೀಪ್ ಸಹ ಬೆಂಬಲವಾಗಿ ಮಾತನಾಡಿದ್ದಾರೆ. ಹಾಗಾದರೆ ಕಿಚ್ಚ ಏನು ಹೇಳಿದರು?
ರಕ್ಷಿತ್ ನೀವು ಘನತೆ ಹಾಗೂ ಪ್ರಬುದ್ಧವಾಗಿಯೇ ಮಾತನಾಡಿದ್ದೀರಿ. ಖುಷಿಯಾಗಿರಿ ನನ್ನ ಗೆಳೆಯ. ಸೆಲೆಬ್ರಿಟಿಗಳು ಅಂತ ತಕ್ಷಣ ತಮ್ಮೆಲ್ಲಾ ಭಾವನಾತ್ಮಕ ವಿಚಾರಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಬೇಕೆಂದಿಲ್ಲ. ಅದು ಸಾಧ್ಯವೂ ಇಲ್ಲ. ಇಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಬದುಕಿದೆ. ಎಲ್ಲದಕ್ಕೂ ಸಮಯ ಬರಬೇಕು ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡುವ ಮುಖೇನ ರಕ್ಷಿತ್ ಬೆಂಬಲಕ್ಕೆ ನಿಂತಿದ್ದಾರೆ.
ಮಾಧ್ಯಮಗಳು ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಬ್ರೇಕ್ ಅಪ್ ಸುದ್ದಿ ದೊಡ್ಡದಾಗಿ ಹರಿದಾಡುತ್ತಿದ್ದರಿಂದ ಸೋಶಿಯಲ್ ಮೀಡಿಯಾಕ್ಕೆ ಬಂದಿದ್ದ ರಕ್ಷಿತ್ , ರಶ್ಮಿಕಾ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ನಿಲ್ಲಿಸಿ, ನಿಮಗಿಂತ ಹೆಚ್ಚಿಗೆ ನಾನು ಆಕೆಯನ್ನು ಬಲ್ಲೆ, ಕಳೆದ ಎರಡು ವರ್ಷಗಳಿಂದ ಗೊತ್ತು.. ಸಮಯ ಬಂದಾಗ ಎಲ್ಲದಕ್ಕೂ ಉತ್ತರ ನೀಡುತ್ತೇನೆ ಎಂದು ಹೇಳಿದ್ದರು.
ಮುರಿದು ಬಿದ್ದ ಮದುವೆ, ಮೌನ ಮುರಿದ ರಕ್ಷಿತ್ ಶೆಟ್ಟಿ
ಬ್ರೇಕ್ಅಪ್‌ಗೆ ಕಾರಣಗಳು ಏಳು, ರಶ್ಮಿಕಾಗೆ ಟ್ರೋಲಿಗರ ಗೋಳು!
