ಮುರಿದು ಬಿದ್ದ ಮದುವೆ, ಮೌನ ಮುರಿದ ರಕ್ಷಿತ್ ಶೆಟ್ಟಿ
ಕಳೆದ ಎರಡು ದಿನಗಳಿಂದ ಹರಿದಾಡುತ್ತಿರುವ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಬ್ರೇಕ್ ಅಪ್ ವಿಚಾರಕ್ಕೆ ಸ್ವತಃ ರಕ್ಷಿತ್ ಶೆಟ್ಟಿ ಅವರೇ ಸ್ಪಷ್ಟನೇ ನೀಡಿದ್ದಾರೆ. ತಾವು ಯಾವ ಕಾರಣಕಕ್ಕೆ ಸೋಶಿಯಲ್ ಮೀಡಿಯಾದಿಂದ ಹೊರ ಹೋಗಿದ್ದೆ ಎಂಬುನ್ನು ಹೇಳಿದ್ದಾರೆ. ಹಾಗಾದರೆ ಇದೀಗ ರಕ್ಷಿತ್ ಕೊಟ್ಟ ಬ್ರೇಕಿಂಗ್ ನ್ಯೂಸ್ ಏನು?

ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಬ್ರೇಕ್ಅಪ್ ಸುದ್ದಿ ಸದ್ಯದ ಸ್ಯಾಂಡಲ್ ವುಡ್ ಹಾಟ್ ಟಾಪಿಕ್. ಕಿರಿಕ್ ಪಾರ್ಟಿ ನಂತರ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಕ್ಷಿತ್, ರಶ್ಮಿಕಾ ಈಗ ಬೇರೆಬೇರೆಯಾಗಿರುವುದನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಾಧ್ಯಮಗಳು ಮತ್ತು ಸೋಶಿಯಲ್ ಮೀಡಿಯಾ ಇಬ್ಬರು ಸೆಲೆಬ್ರಿಟಿಗಳ ಹಿಂದೆ ಬಿದ್ದಿದ್ದವು.
ಆದರೆ ಇದೆಲ್ಲದಕ್ಕೆ ರಕ್ಷಿತ್ ಶೆಟ್ಟಿ ಅವರೇ ಉತ್ತರ ನೀಡಿದ್ದಾರೆ. ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ವಿವರಗಳನ್ನು ದಾಖಲಿಸಿರುವ ರಕ್ಷಿತ್‘ ದಯವಿಟ್ಟು ರಶ್ಮಿಕಾ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ನಿಲ್ಲಿಸ, ನಿಮಗಿಂತ ಹೆಚ್ಚಿಗೆ ನಾನು ಆಕೆಯನ್ನು ಬಲ್ಲೆ, ಕಳೆದ ಎರಡು ವರ್ಷಗಳಿಂದ ಗೊತ್ತು.. ಸಮಯ ಬಂದಾಗ ಎಲ್ಲದಕ್ಕೂ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ.
ರಕ್ಷಿತ್ ಶೆಟ್ಟಿ- ರಶ್ಮಿಕಾ ಮಂದಣ್ಣ ಲವ್ ಬ್ರೇಕ್ ಅಪ್?
ಸೋಷಿಯಲ್ ಮೀಡಿಯಾದಿಂದ ರಕ್ಷಿತ್ ಶೆಟ್ಟಿ ಔಟ್; ರಶ್ಮಿಕಾ ಕಾರಣಾನಾ?
ರಶ್ಮಿಕಾ - ರಕ್ಷಿತ್ ಬ್ರೇಕ್ ಅಪ್: ಹೌದು ಎಂದ ಕುಟುಂಬ!
ಬ್ರೇಕ್ಅಪ್‌ಗೆ ಕಾರಣಗಳು ಏಳು, ರಶ್ಮಿಕಾಗೆ ಟ್ರೋಲಿಗರ ಗೋಳು!