Asianet Suvarna News Asianet Suvarna News

ಅಗ್ನಿಸಾಕ್ಷಿ ಧಾರಾವಾಹಿಯ ಯಶಸ್ಸಿಗೆ ಕಾರಣವೇನು? ನಿರ್ದೇಶಕ ಮಂಜು ಏನಂತಾರೆ?

success secret of agnisakshi serial

ಕನ್ನಡದ ಸಿರಿಯಲ್ ಮಟ್ಟಿಗೆ ಕನಸಲ್ಲೂ ಕಾಣುವ ಹೆಸರು ‘ಅಗ್ನಿಸಾಕ್ಷಿ’. ಸಿದ್ದಾರ್ಥ್ ಹಾಗೂ ಸನ್ನಿಧಿ ಎನ್ನುವ ಕ್ಯೂಟ್ ಆದ ಯುವ ಜೋಡಿಯ ನವಿರಾದ ಕತೆಯ ಮೂಲಕ ಇದು ಮನೆ ಮಾತಾದ ಪರಿ ಅದ್ಭುತ. ಕಳೆದ ಎರಡೂವರೆ ವರ್ಷದಿಂದ ಬಾರ್ಕ್ ರೇಟಿಂಗ್‌'ನಲ್ಲೂ ಇದರದ್ದೇ ನಂಬರ್ ಸ್ಥಾನ. ಇತ್ತೀಚೆಗಷ್ಟೇ ಕಲರ್ಸ್ ಕನ್ನಡದ ‘ಅನುಬಂಧ’ ಅವಾರ್ಡ್ಸ್‌ನಲ್ಲೂ ಇದಕ್ಕೆ ಅತ್ಯುತ್ತಮ ಧಾರಾವಾಹಿ ಎನ್ನುವ ಮತ್ತೊಂದು ಗರಿ ಮೂಡಿದೆ. ಆ ಮಟ್ಟಿಗೆ ವೀಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆದಿರುವ ಈ ಸಿರಿಯಲ್‌ನ ಹಿಂದಿನ ರೂವಾರಿಯೇ ನಿರ್ದೇಶಕ ಮೈಸೂರು ಮಂಜು. ಸತತ ಎರಡೂವರೆ ವರ್ಷದಿಂದ ಇದನ್ನು ನಂಬರ್ ಒನ್ ಸ್ಥಾನದಲ್ಲಿಸಿರುವ ಖ್ಯಾತಿಗೆ ಪಾತ್ರವಾದ ಹೆಮ್ಮೆ ಅವರದ್ದು. ಅದರ ಸಕ್ಸಸ್‌ನ ಹಿಂದಿನ ಸೂತ್ರಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ ಮಂಜು.

‘ಅಗ್ನಿಸಾಕ್ಷಿ’ಗೆ ಈ ಮಟ್ಟದ ಸಕ್ಸಸ್ ಸಿಕ್ಕಿದ್ದು ಹೇಗೆ?
ನಿಜಕ್ಕೂ ಇಲ್ಲಿ ಸಿಕ್ರೇಟ್ ಅಂತ ಏನು ಇಲ್ಲ. ಅದಕ್ಕೆ ಕಾರಣವಾದದ್ದು ಮೊದಲು ಕತೆ. ಆನಂತರ ಇದರ ಮೇಕಿಂಗ್‌ನಲ್ಲಿ ಅಳವಡಿಸಿಕೊಂಡ ಹೊಸತನ. ಎಲ್ಲವೂ ಸೇರಿ ಅದರ ಸಕ್ಸಸ್‌ಗೆ ಕಾರಣವಾದವು ಎನ್ನುವುದು ನನ್ನ ಭಾವನೆ.

ಹಾಗಾದ್ರೆ, ಮೇಕಿಂಗ್‌ನಲ್ಲಿ ವಿಶೇಷತೆ ಅಂಥ ಇದಿದ್ದು ಏನು?
ಮೊದಲ ಬಾರಿಗೆ ಹೊಸ ರೀತಿಯ ಕತೆಯನ್ನು ಆಯ್ಡುಕೊಂಡಿದ್ದೇ ಅದರ ಸಕ್ಸಸ್‌ಗೆ ಸಿಕ್ಕ ರಹದಾರಿ. ಆನಂತರ ಮೇಕಿಂಗ್. ಸಾಮಾನ್ಯವಾಗಿ ಧಾರಾವಾಹಿ ಅಂದಾಕ್ಷಣ, ಪ್ರತಿ ಎಪಿಸೋಡ್‌ಗೆ ೫ ರಿಂದ ೬ ಸೀನ್‌ಗಳನ್ನು ಶೂಟ್ ಮಾಡುವುದು ಸಹಜ. ಇದನ್ನು ಮೊದಲು ಬ್ರೇಕ್ ಮಾಡಿದ್ದು ನಾವು. ಪ್ರತಿ ಎಪಿಸೋಡ್‌ನಲ್ಲಿ ೧೦ ರಿಂದ ೧೨ ಸೀನ್‌ಗಳನ್ನು ತೆರೆಗೆ ತಂದೆವು. ಆ ಮಟ್ಟಿಗೆ ಕತೆ ಸಿನಿಮಾದಷ್ಟೇ ಸ್ಪೀಡ್‌ನಲ್ಲಿ ಸಾಗುತ್ತಾ ಬಂತು. ಹಾಗೆಯೇ ಕಲಾವಿದರು, ಲೋಕೆಷನ್ ಮತ್ತು ಕಾಸ್ಟೋಮ್ ವಿಶೇಷ ಎನಿಸಿದವು.

ನಿರ್ದೇಶಕನಾಗಿ ಕಿರುತೆರೆಯಲ್ಲಿ ಇಷ್ಟು ದೊಡ್ಡ ಸಕ್ಸಸ್ ಸಿಗುವ ನಿರೀಕ್ಷೆ ಇತ್ತಾ?
ಖಂಟಿತವಾಗಿಯೂ ಅಂತಹ ಯಾವುದೇ ನಿರೀಕ್ಷೆ ಇರಲಿಲ್ಲ. ಆದರೂ ಫ್ರೆಂಡ್ಸ್ ಹತ್ತಿರ ನಾನು ಇದನ್ನು ಹೇಳಿದ್ದೆ. ಸಿರಿಯಲ್ ಅಂಥ ಹೋದ್ರೆ ಇಡೀ ಉದ್ಯಮವೇ ಒಮ್ಮೆ ಹಿಂತಿರುಗಿ ನೋಡುವ ಹಾಗೆ ಮಾಡುವೆ, ನೋಡ್ತಾ ಇರಿ ಅಂತ ಆಶ್ವಾಸನೆ ಕೊಟ್ಟಿದ್ದೆ. ಅದೃಷ್ಟ ಚೆನ್ನಾಗಿತ್ತು, ದೊಡ್ಡ ಬ್ಯಾನರ್‌ನ ಸಿರಿಯಲ್‌ಗೆ ನಿರ್ದೇಶಕನಾದೆ. ಜತೆಗೆ ಈ ಕಾಲಕ್ಕೆ ತಕ್ಕಂತಹ ಕತೆಯನ್ನು ಹ್ಯಾರಿಸ್ ಬರೆದಿದ್ದರು. ಅವರ ಕತೆಗೆ ನಾನು ದೃಶ್ಯ ರೂಪ ಕೂಡಬೇಕಿತ್ತು. ಅದನ್ನು ಶ್ರದ್ಧೆಯಿಂದಲೇ ಮಾಡುತ್ತಾ ಬಂದೆ. ಅದರ ಫಲವಾಗಿ ಈ ಸಕ್ಸಸ್ ಸಿಕ್ಕಿದೆ.

ಆರಂಭದಿಂದಲೂ ಇದು ಸಕ್ಸಸ್‌ನ ಹಾದಿಯಲ್ಲಿ ಉಳಿದುಕೊಂಡಿದ್ದಕ್ಕೆ ಪ್ರಮುಖ ಕಾರಣವಾಗಿದ್ದೇನು?
ಕನ್ನಡದ ಇತರೆ ಧಾರಾವಾಹಿಗಳಿಗೂ ಇದಕ್ಕೂ ಸಾಕಷ್ಟು ವ್ಯತ್ಯಾಸ ಕಂಡಿದ್ದೇ ಅದರ ತಾರಾಗಣ ಮತ್ತು ಮೇಕಿಂಗ್‌ನಲ್ಲಿ. ಜತೆಗೆ ವಿಭಿನ್ನವಾದ ನಿರೂಪಣೆ. ನಿಮಗೆ ಗೊತ್ತಿರುವ ಹಾಗೆ ಇಲ್ಲಿರುವ ಯಾವುದ್‌ಥ್ೀ ಆರ್ಟಿಸ್ಟ್‌ಗಳು ಇಂದಿಗೂ ಬೇರೆ ಯಾವುದೇ ಧಾರಾವಾಹಿಯಲ್ಲೂ ಕಾಣಿಸಿಕೊಂಡಿಲ್ಲ. ಸಿದ್ಧಾರ್ಥ್ ಮತ್ತು ಸನ್ನಿಧಿ ಈ ಧಾರಾವಾಹಿಯ ಬ್ರಾಂಡಿಂಗ್ ಎನ್ನುವ ಹಾಗಾಗಿದೆ. ಅವರಿಬ್ಬರೂ ಮಾತ್ರವಲ್ಲ, ಇಲ್ಲಿರುವ ಎಲ್ಲ ಪಾತ್ರಗಳಲ್ಲೂ ಕಾಣಿಸಿಕೊಂಡವರು ಕಾರಣ.

ಈ ಮಟ್ಟದ ಸಕ್ಸಸ್ ನಿಮ್ಮ ಬದುಕಲ್ಲಿ ತಂದ ಬದಲಾವಣೆ ಏನು?
ಸಕ್ಸಸ್ ಎನ್ನುವುದು ಖುಷಿ ನೀಡಿದೆ. ಆದರೆ ಬದಲಾವಣೆಗೆ ಕಾರಣವಾಗಿಲ್ಲ. ಈ ಧಾರಾವಾಹಿಯ ಯಶಸ್ಸಿನ ಹಿನ್ನಿಲೆಯಲ್ಲಿ ಸಾಕಷ್ಟು ಮಂದಿ ತಮಗೊಂದು ಧಾರಾವಾಹಿ ನಿರ್ದೇಶಿಸಿ ಅಂತ ಕೇಳಿದ್ದಾರೆ. ಆದರೆ, ಈ ಧಾರಾವಾಹಿ ಮುಗಿಯುವ ತನಕ ಬೇರೆ ಯಾವುದೇ ಪ್ರಾಜೆಕ್ಟ್ ಮಾಡೋದಿಲ್ಲ ಅಂತ ಹೇಳಿದ್ದೇನೆ. ಇನ್ನು ಜವಾಬ್ದಾರಿ ಹೆಚ್ಚಾಗಿದೆ. ಜನಪ್ರಿಯತೆ ಪಡೆದ ಧಾರಾವಾಹಿ ಎನ್ನುವ ಎಚ್ಚರದಿಂದಲೇ ಪ್ರತಿ ಎಪಿಸೋಡ್ ಅನ್ನು ಚಿತ್ರೀಕರಣ ಮಾಡುತ್ತಿದ್ದೇವೆ.

(ಕೃಪೆ: ಕನ್ನಡಪ್ರಭ)

Latest Videos
Follow Us:
Download App:
  • android
  • ios