ಸ್ಟಾರ್ ಸಿನಿಮಾಗಳ ಪಟ್ಟಿಯಲ್ಲಿ ಮೊದಲು ಬರುವ ಸಿನಿಮಾ ಯಾವುದು?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 27, Jul 2018, 3:06 PM IST
Stars Cinema ready to release
Highlights

ಎಚ್ಚರದಿಂದ ಸಿನಿಮಾ ರಿಲೀಸ್ ಮಾಡುವ ಬುದ್ಧಿವಂತಿಕೆಯನ್ನು ಅನೇಕ ನಿರ್ಮಾಪಕರು ತೋರುತ್ತಿದ್ದಾರೆ. ಇನ್ನು ಮೂರು ನಾಲ್ಕು ವಾರಗಳಲ್ಲಿ ಹಳೆಯ ಸಣ್ಣಪುಟ್ಟ ಸಿನಿಮಾಗಳು ಬಂದು ಹೋದರೆ ಒಳ್ಳೆಯದು. ಆನಂತರ ಸ್ಟಾರ್ ಸಿನಿಮಾಗಳ ಸರದಿ ಶುರುವಾಗಲಿದೆ. 

ಬೆಂಗಳೂರು (ಜು. 27): ವಾರಕ್ಕೆ ಏಳು ಎಂಟು ಒಂಬತ್ತು ಸಿನಿಮಾಗಳನ್ನು ರಿಲೀಸ್ ಮಾಡುತ್ತಾ ಬಂದಿರುವ ಚಿತ್ರರಂಗ ಸದ್ಯಕ್ಕೆ ಎರಡು ಮೂರು ಸಿನಿಮಾಗಳಿಗೆ ಇಳಿದಿದೆ. ಅಲ್ಲಿಗೆ ಹಳೆಯ ಸ್ಟಾಕ್‌ಗಳೆಲ್ಲ ಮುಗಿದವು ಅನ್ನಬಹುದು.

ಗೆಲ್ಲುತ್ತೋ ಬಿಡುತ್ತೋ ರಿಲೀಸ್ ಮಾಡ್ತೀವಿ ಅಂತ ಬಹಳ ಕಾಲದಿಂದ ಕಾಯುತ್ತಿದ್ದ ನಿರ್ಮಾಪಕರೆಲ್ಲ ತಮ್ಮ ತಮ್ಮ ಸಿನಿಮಾಗಳನ್ನು ಸಿಕ್ಕ ಸಿಕ್ಕ ಚಿತ್ರಮಂದಿರಗಳಲ್ಲಿ  ಬಿಡುಗಡೆ ಮಾಡಿಯೇ ಮಾಡಿದರು. ಒಂದೇ ವಾರಕ್ಕೆ, ಒಂದೇ ದಿನಕ್ಕೆ, ಒಂದೇ ಪ್ರದರ್ಶನಕ್ಕೆ ಸೀಮಿತವಾದ ಸಿನಿಮಾಗಳೂ ಇದ್ದವು. ಇವುಗಳನ್ನೆಲ್ಲ ನೋಡಿದವರು ಸಿನಿಮಾ ಪತ್ರಕರ್ತರು ಮಾತ್ರ ಅನ್ನುವ ತಮಾಷೆಯೂ ಗಾಂಧೀನಗರದಲ್ಲಿ ಚಾಲ್ತಿಯಲ್ಲಿತ್ತು.

ಇದೀಗ ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಎಚ್ಚರದಿಂದ ಸಿನಿಮಾ ರಿಲೀಸ್ ಮಾಡುವ ಬುದ್ಧಿವಂತಿಕೆಯನ್ನು ಅನೇಕರು ತೋರುತ್ತಿದ್ದಾರೆ. ಇನ್ನು ಮೂರು ನಾಲ್ಕು ವಾರಗಳಲ್ಲಿ ಹಳೆಯ ಸಣ್ಣಪುಟ್ಟ ಸಿನಿಮಾಗಳು ಬಂದು ಹೋದರೆ ಒಳ್ಳೆಯದು. ಆನಂತರ ಸ್ಟಾರ್ ಸಿನಿಮಾಗಳ ಸರದಿ.

ಸ್ಟಾರ್ ಸಿನಿಮಾಗಳ ಪಟ್ಟಿಯಲ್ಲಿ ಮೊದಲು ಬರುವ ಸಿನಿಮಾ ಯಾವುದು? ದಿ ವಿಲನ್, ಕುರುಕ್ಷೇತ್ರ, ಯಜಮಾನ, ನಟಸಾರ್ವಭೌಮ, ಕೆಜಿಎಫ್, ಐ ಲವ್‌ಯೂ, ಅವನೇ ಶ್ರೀಮನ್ನಾರಾಯಣ, ಆರೆಂಜ್, ಕವಚ... ಸದ್ಯಕ್ಕೆ ಪಟ್ಟಿ ಹೀಗಿದೆ. ಇವುಗಳೆಲ್ಲ ದಾಳಿಯಿಡುವ ಮೊದಲೇ ಸಣ್ಣಪುಟ್ಟ ಸಿನಿಮಾಗಳು ಬರಬೇಕು. ಅಷ್ಟರ ಹೊತ್ತಿಗೆ ಹಳೇ ಸ್ಟಾಕು ಪೂರ್ತಿ ಖಾಲಿಯಾದರೂ ಆದೀತು. 

loader