ಸೂಪರ್ ಸ್ಟಾರ್ ರಜನಿಕಾಂತ್ ಅವರು ರಿಷಬ್ ಶೆಟ್ಟಿಯವರನ್ನು 'ನಟ ರಾಕ್ಷಸ' ಎಂದು ಕರೆದಿದ್ದಾರೆ. ಜೊತೆಗೆ, ಎಂಥ ನಟನೆ ಮಾಡಿದ್ದೀಯಪ್ಪ, ಎಂಥ ಸಿನಿಮಾ ನಿರ್ದೇಶನ ಮಾಡಿದ್ದೀಯಪ್ಪ' ಎಂದು ರಿಷಬ್ ಶೆಟ್ಟಿಯವರನ್ನು ಹಾಡಿ ಹೊಗಳಿದ್ದಾರೆ ರಜನಿಕಾಂತ್. ಇನ್ನು, ರಾಜಮೌಳಿಯವರು ಏನು ಹೇಳಿದ್ದಾರೆ? ನೋಡಿ..

ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ!

ರಿಷಬ್ ಶೆಟ್ಟಿ (Rishab Shetty) ನಟನೆ ನಿರ್ದೇಶನದ ಕಾಂತಾರ ಚಾಪ್ಟರ್ 1 (Kantara Chapter 1) ಸಿನಿಮಾ ವಿಶ್ವದಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಈಗ ಜಗತ್ತಿನೆಲ್ಲೆಡೆ ಸದ್ದು ಮಾಡುತ್ತಿದ್ದು, ಜಗತ್ತಿನಾದ್ಯಂತ 30 ದೇಶಗಳಲ್ಲಿ ದಿನವೊಂದಕ್ಕೆ 5000 ಕ್ಕೂ ಹೆಚ್ಚು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನಲ್ಲೇ ದಿನವೊಂದಕ್ಕೆ ಬರೋಬ್ಬರಿ 500 ಕ್ಕೂ ಹೆಚ್ಚು ಪ್ರದರ್ಶನ ಕಾಣುತ್ತಿದೆ 

ಕಾಂತಾರ ಚಾಪ್ಟರ್ 1. ಸದ್ಯ ಜಗತ್ತಿನೆಲ್ಲೆಡೆ ಕಾಂತಾರ ಸಿಕ್ಕಾಪಟ್ಟೆ ಟ್ರೆಂಡಿಂಗ್ ಕ್ರೇಜ್ ಸೃಷ್ಟಿಸಿದ್ದು, ಬಹಳಷ್ಟು ಜನ ವಿಐಪಿಗಳೂ ಕೂಡ ಕಾಂತಾರ ಸಿನಿಮಾ ನೋಡಿ ಮೆಚ್ಚಿ ಕನ್ನಡದ ಸಿನಿಮಾ ಬಗ್ಗೆ ಸೋಷಿಯಲ್ ಮೀಡಿಯಾಗಳ ಮೂಲಕ, ಮಾಧ್ಯಮಗಳ ಮೂಲ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಅವರಲ್ಲಿ ನಟ, ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಭಾರತದ ನಂಬರ್ 1 ಡೈರೆಕ್ಟರ್ ಎಸ್‌ಎಸ್‌ ರಾಜಮೌಳಿ ಸಹ ಸೇರಿದ್ದಾರೆ.

ಹಾಗಿದ್ದರೆ ಪ್ರತಿಭಾನ್ವಿತ ನಿರ್ದೇಶಕರಾದ ಎಸ್‌ಎಸ್‌ ರಾಜಮೌಳಿಯವರು ರಿಷಬ್ ಶೆಟ್ಟಿ ಕಾಂತಾರ ಬಗ್ಗೆ ಅದೇನು ಹೇಳಿದ್ದಾರೆ? ಇಲ್ಲಿದೆ ನೋಡಿ ಡೀಟೇಲ್ಸ್.. 'ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿ ನಾನು ಸ್ಪೀಚ್‌ಲೆಸ್ ಆಗಿದ್ದೀನಿ.. ನಂಗೆ ಏನು ಹೇಳ್ಬೇಕು ಅಂತ ಮಾತೇ ಬರ್ತಿಲ್ಲ. ನಮ್ಮ ಸಂಸ್ಕೃತಿ ಮತ್ತು ನೆಲೆಯ ಕಥೆಗಳನ್ನು ಹೇಳೋದ್ರಲ್ಲಿ ಕನ್ನಡ ಮತ್ತು ಮಲಯಾಳಂ ಕನ್ನಡ ಚಿತ್ರರಂಗಗಳು ಮುಂಚೂಣಿಯಲ್ಲಿವೆ. ಈ ಸಿನಿಮಾವನ್ನು ನೋಡಿದ್ರೆ ನಂಗೆ ಅನ್ಸುತ್ತೆ ರಿಷಬ್ ಶೆಟ್ಟಿಯಿಂದ ಕಲಿಯೋದು ತುಂಬಾನೇ ಇದೆ ಅಂತ..

ಇನ್ನು ರಿಷಬ್ ಶೆಟ್ಟಿಯವರಿಗೆ ಈ ಸಿನಿಮಾಗೆ 'ನ್ಯಾಷನಲ್ ಅವಾರ್ಡ್ ಬರದೇ ಇದ್ರೆ ನಂಗೆ ಆಶ್ಚರ್ಯವಾಗುತ್ತೆ.. ಖಂಡಿತ ಅವರಿಗೆ ರಾಷ್ಟ್ರ ಪ್ರಶಸ್ತಿ ಬರಲೇಬೇಕೆಂದು ಹಾಡಿ ಹೊಗಳಿದ್ದಾರೆ. ಕಳೆದ 25 ವರ್ಷಗಳಿಂದ ಸಿನಿಮಾರಂಗದಲ್ಲಿದ್ದು, ನಿರ್ದೇಶನ ಮಾಡಿರುವ ಎಲ್ಲಾ ಸಿನಿಮಾಗಳಲ್ಲಿಯೂ ಸೂಪರ್ ಹಿಟ್ ಕಂಡುಕೊಂಡಿರುವ ರಾಜಮೌಳಿಯವರ ಈ ಮಾತು ತುಂಬಾ ಮುಖ್ಯವಾದ ಹೇಳಿಕೆ ಎನ್ನಿಸುತ್ತದೆ.

ಮತ್ತೊಂದು ರಾಷ್ಟ್ರ ಪ್ರಶಸ್ತಿ?

ನ್ಯಾಷನಲ್ ಅವಾರ್ಡ್ ಪಡೆಯಬೇಕಾದರೆ ಭಾರತದ ಎಲ್ಲಾ ಭಾಷೆಗಳ ಚಿತ್ರಗಳ ಜೊತೆ ಸ್ಪರ್ಧೆ ಮಾಡಿ ಪ್ರಶಸ್ತಿ ಪಡೆಯಬೇಕಾಗುತ್ತದೆ. ಅದು ಗೊತ್ತಿದ್ದು ಕೂಡ ರಾಜಮೌಳಿಯವರು ಈ ಮಾತು ಹೇಳಿದ್ದಾರೆ ಎಂದರೆ, ರಿಷಬ್ ಶೆಟ್ಟಿಯವರ ಮೂಲಕ ಕನ್ನಡಕ್ಕೆ ಮತ್ತೊಂದು ರಾಷ್ಟ್ರ ಪ್ರಶಸ್ತಿಯನ್ನು ಖಂಡಿತವಾಗಿಯೂ 'ಕಾಂತಾರ ಚಾಪ್ಟರ್ 1' ಮೂಲಕ ನಿರೀಕ್ಷಿಸಬಹುದು.

ನಟ ರಾಕ್ಷಸ!

ಇನ್ನು ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ರಿಷಬ್ ಶೆಟ್ಟಿಯವರನ್ನು 'ನಟ ರಾಕ್ಷಸ' ಎಂದು ಕರೆದಿದ್ದಾರೆ. ಜೊತೆಗೆ, ಎಂಥ ನಟನೆ ಮಾಡಿದ್ದೀಯಪ್ಪ, ಎಂಥ ಸಿನಿಮಾ ನಿರ್ದೇಶನ ಮಾಡಿದ್ದೀಯಪ್ಪ' ಎಂದು ರಿಷಬ್ ಶೆಟ್ಟಿಯವರನ್ನು ಹಾಡಿ ಹೊಗಳಿದ್ದಾರೆ ರಜನಿಕಾಂತ್. ಅಷ್ಟೇ ಅಲ್ಲ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ 'ಕಾಂತಾರ ಚಾಪ್ಟರ್ 1' ಸಿನಿಮಾವನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.