ಬೆಂಗಳೂರು (ಡಿ. 07): ಕಲಿಯುಗ ಕರ್ಣ ಡಾ. ಅಂಬರೀಶ್ ಮಗನಂತಿರೋ ಯಶ್-ರಾಧಿಕಾ ದಂಪತಿಯ ಮುದ್ದಿನ ಮಗಳಿಗೆ ಉಡುಗೊರೆಯಾಗಿ ತೊಟ್ಟಿಲು ನೀಡಲು ಅಂಬಿ ಬಯಸಿದ್ದರು. ತಮ್ಮ ಆಪ್ತನಿಗೆ ಖುದ್ದು ಕರೆಮಾಡಿ ತೊಟ್ಟಿಲು ತಯಾರಿಸಲು ಹೇಳಿದ್ದರು. ತೊಟ್ಟಿಲು ಸಿದ್ದವಾಗಿದೆ. ತೊಟ್ಟಿಲಿನ ವಿಶೇಷತೆ ಬಗ್ಗೆ ಇಲ್ಲಿದೆ ವರದಿ. 

ಅಂಬಿ ಕೊಟ್ಟ ಈ ತೊಟ್ಟಿಲಲ್ಲೇ ಯಶ್ ಮಗಳು ಬೆಳೆಯುತ್ತಾಳೆ; ಇಲ್ಲಿದೆ ಫೋಟೋ

ಕಟ್ಟಿಗೆಯಿಂದ ಈ ತೊಟ್ಟಿಲನ್ನು ನಿರ್ಮಾಣ ಮಾಡಲಾಗಿದೆ. ಶ್ರೀಧರ ಸಾಹುಕಾರ್ ಎನ್ನುವ ಕಲಾವಿದ ಈ ತೊಟ್ಟಿಲನ್ನು ತಯಾರಿಸಿದ ಪ್ರತಿಭಾನ್ವಿತ. ಇವರು ಧಾರವಾಡ ಜಿಲ್ಲೆಯ ಕಲಘಟಗಿಯ ನಿವಾಸಿ. ಕಲಘಟಗಿಯ ಚಿತ್ರಗಾರ ಕುಟುಂಬ ತೊಟ್ಟಿಲು ನಿರ್ಮಾಣ ಮಾಡಿಕೊಂಡು ಜೀವನ ನಡೆಸುತ್ತಿದೆ.

ಯಶ್ ಮಗಳಿಗೆ ತಲುಪಿತು ಅಂಬಿ ಗಿಫ್ಟ್!

ಈ ಹಿಂದೂಮ್ಮೆ ಧಾರವಾಡಕ್ಕೆ ಬಂದಿದ್ದ ವರನಟ ಡಾ.ರಾಜಕುಮಾರ್ ತಮ್ಮ ಮೊಮ್ಮಕ್ಕಳ ನಾಮಕರಣಕ್ಕೆಂದು ಕಟ್ಟಿಗೆಯಲ್ಲಿ ನಿರ್ಮಾಣವಾದ ತೊಟ್ಟಿಲನ್ನ ತೆಗೆದುಕೊಂಡು ಹೋಗಿದ್ದರು. ಕಟ್ಟಿಗೆಯಲ್ಲಿ ಸುಂದರವಾಗಿ ನಿರ್ಮಾಣವಾದ ತೊಟ್ಟಿಲನ್ನ ನೋಡಿ ರಾಜಕುಮಾರ್ ಬೆರಗಾಗಿದ್ದರು. 

ಕಲಾವಿದನ ಕೈಚಳಕದಲ್ಲಿ ಸಿದ್ದವಾಗಿದ್ದ ಈ ತೊಟ್ಟಿಲು ನೋಡಿ ಇಡೀ ಕನ್ನಡ ಚಿತ್ರರಂಗವೂ ಆನಂದಿಸಿತ್ತು. ಅಂಬರೀಶ ಕೂಡ ಆ ತೊಟ್ಟಿಲನ್ನು ಕಂಡು ಖುಷಿಯಾಗಿದ್ದರು. ಅಲ್ಲದೇ ಮಗನಂತಿರೋ ಯಶ್-ರಾಧಿಕಾ ದಂಪತಿಗೆ ಉಡುಗೊರೆಯಾಗಿ ತೊಟ್ಟಿಲು ನೀಡಲು ಬಯಸಿದ್ದರು. 

"

ಕಲಘಟಗಿಯಲ್ಲಿ ನಿರ್ಮಾಣವಾಗುವ ಈ ತೊಟ್ಟಿಲುಗಳಿಗೆ 600 ವರ್ಷಗಳ ಇತಿಹಾಸವಿದೆ. ಒಂದು ತೊಟ್ಟಿಲು ಮಾಡಲು ಎರಡು ತಿಂಗಳ ಕಾಲ ಸಮಯ ಬೇಕು. ತೊಟ್ಟಿಲನ್ನು ಸಾಗವಾಣಿ ಮರದ ಕಟ್ಟಿಗೆಯಿಂದ ಮಾಡಲಾಗುತ್ತಿದ್ದು, ಅದಕ್ಕೆ ಬಳಸುವ ಕಲರ್ ತುಂಬಾ ವಿಶೇಷವಾಗಿರುತ್ತದೆ. ತೊಟ್ಟಿಲಿಗೆ ಹಚ್ಚಲಾಗುವ ಬಣ್ಣವೂ ನೂರು ವರ್ಷಗಳ ಕಾಲ ಹೋಗುವುದಿಲ್ಲ. ಈ ಎಲ್ಲ ವಿಶೇಷತೆಗಳನ್ನು ಒಳಗೊಂಡಿರುವ ತೊಟ್ಟಿಲುಗಳಿಗೆ ದೇಶ-ವಿದೇಶದಿಂದಲೂ ಬಾರಿ ಬೇಡಿಕೆ ಬಂದಿದೆ.