ಬೆಂಗಳೂರು (ಡಿ. 07): ರೆಬೆಲ್ ಸ್ಟಾರ್ ಅಂಬರೀಶ್ ಗೆ ಯಶ್ ಎಂದರೆ ಅಪಾರ ಪ್ರೀತಿ. ರಾಧಿಕಾ ಯಶ್ ಸೀಮಂತಕ್ಕೆ ಆಗಮಿಸಿ ದಂಪತಿಗಳಿಗೆ ಆಶಿರ್ವದಿಸಿದ್ದರು. ದುರಾದೃಷ್ಟವಶಾತ್ ಅದೇ ಅವರ ಕೊನೆ ಕಾರ್ಯಕ್ರಮವಾಯಿತು. ಯಶ್ ಮಗುವಿಗೆ ತೊಟ್ಟಿಲನ್ನು ಕೊಡಬೇಕೆಂಬುದು ಅಂಬಿ ಆಸೆಯಾಗಿತ್ತು. ಆದರೆ ವಿಧಿಯಾಟ ಬೇರೆಯದ್ದೇ ಆಗಿತ್ತು.  

ರಾಧಿಕಾ ಪಂಡಿತ್ ಸೀಮಂತದ ಫೋಟೋಗಳಿವು

ಸೀಮಂತದಲ್ಲಿ ಯಶ್-ರಾಧಿಕಾ ಕಂಡಿದ್ದು ಹೀಗೆ

ಯಶ್ ಮಗುವಿಗಾಗಿ ಸುಮಾರು 1.50 ಲಕ್ಷ ಮೌಲ್ಯದ ತೊಟ್ಟಿಲನ್ನು ಅಂಬಿ ಬುಕ್ ಮಾಡಿದ್ದರು. ಯಶ್ ಗೆ ಸರ್ಪ್ರೈಸ್ ಆಗಿ ತೊಟ್ಟಿಲು ಕೊಡಬೇಕೆಂದು ಆಸೆಪಟ್ಟಿದ್ದರು. 

ಡಿಲೆವರಿಗೆ ಹೋಗುವ ಮುನ್ನ ರಾಧಿಕಾ ಪಂಡಿತ್‌ಗೆ ಸೀಮಂತ

ಅಂಬರೀಶ್ ಬಳಸುತ್ತಿದ್ದ ಮೊಬೈಲ್ ಗೆ ಮೊನ್ನೆಯಷ್ಟೇ ತೊಟ್ಟಿಲು ರೆಡಿ ಎಂಬ ಮೆಸೇಜ್ ಬಂದಿದೆ. ಇದನ್ನ ನೋಡಿ ಸುಮಲತಾ ಯಶ್ ಗೆ ಕಾಲ್ ಮಾಡಿ ಸ್ವರ್ಗದಿಂದ ನಿನ್ನ ಮಗಳಿಗೆ ತೊಟ್ಟಿಲು ಬಂದಿದೆ.ನಿನ್ನ ಮಗಳು ಅದೃಷ್ಟ ಮಾಡಿದ್ದಾಳೆ ಎಂದು ಹೇಳಿದ್ದಾರೆ. ಯಶ್ ಮನೆಗೆ ತೊಟ್ಟಿಲನ್ನು ಕಳುಹಿಸಿಕೊಟ್ಟಿದ್ದಾರೆ.