ದೇವರು ಒಂದು ಅವಕಾಶ ಕೊಟ್ಟಿದ್ದರೂ ಸ್ಪಂದನಾ ಸಾವು ಗೆದ್ದು ಬಿಡುತ್ತಿದ್ದಳು: ವಿಜಯ್ ರಾಘವೇಂದ್ರ
ಸ್ಪಂದನಾ ತುಂಬಾ ಆರೋಗ್ಯವಾಗಿದ್ದಳು. ಒಂದೇ ಒಂದು ಅವಕಾಶ ಅವಳಿಗೆ ಸಿಕ್ಕಿದ್ದರೂ, ಹೋರಾಡಿ ಸಾವನ್ನು ಗೆದ್ದಬಿಡುತ್ತಿದ್ದಳು. ಆದರೆ, ದೇವರು ಒಂದೇ ಒಂದು ಅವಕಾಶ ಕೊಡಲಿಲ್ಲ.

ಬೆಂಗಳೂರು (ಆ.31): ಸ್ಪಂದನಾ ತುಂಬಾ ಆರೋಗ್ಯವಾಗಿದ್ದಳು. ಅವಳಿಗೆ ಈ ಕ್ಷಣದವರೆಗೂ ಅವಳಿಗೆ ಏನಾಗಿದೆ ಎಂಬುದರ ಅರಿವೇ ಇಲ್ಲ. ಒಂದೇ ಒಂದು ಅವಕಾಶ ಅವಳಿಗೆ ಸಿಕ್ಕಿದ್ದರೂ, ಹೋರಾಡಿ ಸಾವನ್ನು ಗೆದ್ದಬಿಡುತ್ತಿದ್ದಳು. ಆದರೆ, ದೇವರು ಒಂದೇ ಒಂದು ಅವಕಾಶವನ್ನು ಕೂಡ ಕೊಡಲಿಲ್ಲ ಎಂದು ಸ್ಪಂದನಾಳ ಪತಿ, ನಟ ವಿಜಯ್ ರಾಘವೇಂದ್ರ ಭಾವುಕವಾಗಿ ನುಡಿದರು.
ಸ್ಪಂದನಾಳ ಸಾವಿನ ನಂತರ, ಇದೇ ಮೊದಲ ಬಾರಿಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ಸಾವಿನ ಬಗ್ಗೆ ಇದ್ದ ಹಲವು ಅನುಮಾನಗಳನ್ನು ಬಗೆಹರಿಸಿದ್ದಾರೆ. ಸ್ಪಂದನಾ ತನ್ನ ಸಹೋದರಿಯರು ಹಾಗೂ ಫ್ರೆಂಡ್ಸ್ ಜೊತೆಯಲ್ಲಿ ಬ್ಯಾಂಕಾಕ್‌ಗೆ ಹೋಗಿದ್ದರು. ನಾನು ಕೂಡ ಅಲ್ಲಿಗೆ ಹೋಗಬೇಕಿದ್ದು, ತಡವಾಗಿ ಅಲ್ಲಿಗೆ ಸೇರಿದ್ದೆನು. ಇನ್ನು ನಾವು ರೂಮಿನಲ್ಲಿ ಇದ್ದು, ಬೆಳಗ್ಗೆ ಎದ್ದು ರೂಮ್ ಚೆಕ್‌ಔಟ್ ಮಾಡಬೇಕು ಎಂದು ಅವಳನ್ನು ಎಬ್ಬಿಸುವಾಗ ಪಲ್ಸ್ ರೇಟ್ ಕಡಿಮೆ ಆಗುತ್ತಲೇ ಇತ್ತು. ಆ ಕ್ಷಣದಲ್ಲಿ ನಾನು ಏನು ಮಾಡಬೇಕು ಎಂಬುದೇ ಗೊತ್ತಾಗಲಿಲ್ಲ. ಎಲ್ಲರೂ ಬ್ಲ್ಯಾಂಕ್ ಆಗಿದ್ದೆವು. ಆ ಕ್ಷಣದಲ್ಲಿ ಕೂಡಲೇ ಆಸ್ಪತ್ರೆಗೆ ಹೋಗಿ ದಾಖಲಾದರೂ, ಅಲ್ಲಿ ನಾವು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಸ್ಪಂದನಾ ನೆನದು ವಿಜಯ್ ರಾಘವೇಂದ್ರ ಕಣ್ಣೀರು, ನನ್ನ ಜೀವನವೇ ಒಂದು ಕಥೆ ಆಗಿ ಹೋಯ್ತು
ಈ ಕ್ಷಣದವರೆಗೂ ಅವಳಿಗೆ ಏನಾಗಿದೆ ಎಂಬುದೇ ಗೊತ್ತಿಲ್ಲ: ಜೀವನದಲ್ಲಿ ಸ್ಪಂದನಾ ಬಹಳ ಆರೋಗ್ಯವಾಗಿದ್ದಳು. ಆದರೆ, ನಾನು ಅವಳ ಜೊತೆಗೇನೇ ಇದ್ದೆನು. ಈವರೆಗೂ ಸಾಮಾನ್ಯವಾಗಿ ಫ್ರೆಂಡ್ಸ್ ಜೊತೆಯಲ್ಲಿ ಹೋಗುವಂತೆ ಟ್ರಿಪ್‌ಗೆ ಹೋಗಿ ಬರುವಾಗ ಘಟನೆ ನಡೆದಿದೆ. ಮುಖ್ಯವಾಗಿ ಈ ಕ್ಷಣದವರೆಗೂ ಅವಳಿಗೆ ಏನಾಗಿದೆ ಎಂಬುದು ಗೊತ್ತೇ ಆಗಿರಲಿಲ್ಲ. ಯಾರಿಗಾದರೂ ಏನಾದರೂ ಆಗಿದ್ದಾಗ ಮರಗುವಂತೆ ನನ್ನ ಕುಟುಂಬದಲ್ಲಿ ಘಟನೆ ನಡೆದಿದೆ. ಅವಳಿಗೆ ದೇವರು ಒಂದೇ ಒಂದು ಅವಕಾಶ ಕೊಟ್ಟಿದ್ದರೂ, ಸಾವನ್ನು ಗೆದ್ದಬಿಡುತ್ತಿದ್ದಳು. ಒಂದು ಅವಕಾಶವನ್ನೂ ಕೊಡಲಿಲ್ಲ.
ನನ್ನ ಹೆಂಡ್ತಿ ಯಾವುದೇ ಡಯಟ್ ಕೂಡ ಮಾಡಿರಲಿಲ್ಲ: ಮೂರು ವರ್ಷಗಳಿಂದ ಅವಳು ನಡೆದುಕೊಂಡಬಂದ ರೀತಿಯಿಂದಲೇ ಅವಳು ಸಣ್ಣ ಆಗಿದ್ದಳು. ಅವಳು ಯಾವುದೇ ರೀತಿಯ ಡಯಟ್ ಕೂಡ ಮಾಡಿರಲಿಲ್ಲ. ಕಲ್ಟ್‌ಫಿಟ್ ಅಥವಾ ಇನ್ಯಾವುದೇ ಡಯಟ್ ಮಾಡಿರಲಿಲ್ಲ. ದೈನಿಕ ಆರೋಗ್ಯ ಶೈಲಿಯಿಂದಲೇ 3 ವರ್ಷಗಳ ನಿರಂತರ ಶ್ರಮದಿಂದ ಸಣ್ಣಗಾಗಿದ್ದಳೇ ಹೊರತು ಒಂದೆರಡು ತಿಂಗಳ ಯಾವುದೇ ಅಡ್ಡದಾರಿಯನ್ನು ಕಂಡುಕೊಂಡಿರಲಿಲ್ಲ. ಆದ್ದರಿಂದ ಎಲ್ಲರೂ ಎಷ್ಟು ಸಣ್ಣ ಆಗಿದ್ದೀಯಾ, ಮುಖದಲ್ಲಿ ಗೆಲುವು ಕಂಡುಬರುತ್ತಿದೆ ಎಂದು ಹೇಳುತ್ತಿದ್ದರು. ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ ಹೀಗಾಗಿ ಹೋಯಿತು ಎಂದು ಹೇಳಿದರು.
ಇಂದು ವಿಜಯ್-ಸ್ಪಂದನಾ ವಿವಾಹ ವಾರ್ಷಿಕೋತ್ಸವ: ಕವನದ ಮೂಲಕ ಕಣ್ಣೀರಿನ ಪೋಸ್ಟ್
ಸ್ಪಂದನಾ ನೀಡುತ್ತಿದ್ದ ಧೈರ್ಯವೇ ನನ್ನ ಮುಂದಿ ಜೀವನಕ್ಕೆ ದಾರಿದೀಪ: ನನ್ನ ಜೀವನದ ದೊಡ್ಡ ವಿಮರ್ಶಕಿ ನನ್ನ ಹೆಂಡ್ತಿ ಸ್ಪಂದನಾ ಆಗಿದ್ದಳು. ಯಾವುದನ್ನೇ ಆದರೂ ಮೊದಲೇ ಮನೆಯಲ್ಲಿ ಪ್ರಶ್ನೆ ಮಾಡಿ ಸರಿದಾರಿಗೆ ಕರೆದುಕೊಂಡು ಹೋಗುತ್ತಿದ್ದಳು. ನನ್ನ ಉಡುಗೆ, ತೊಡುಗೆಗಳಲ್ಲಿನ ಬದಲಾವಣೆಗೂ ಅವಳೇ ಕಾರಣವಾಗಿದ್ದಾಳೆ. ಯಾವುದಾದರೂ ವಿಚಾರಕ್ಕೆ ನಾನು ಎಂದಾದರೂ ಅತ್ತಾಗ ನನಗೆ ಬೈದು ಬುದ್ಧಿ ಹೇಳುತ್ತಿದ್ದಳು. ಎಷ್ಟು ಹೊತ್ತು ಅಳುತ್ತೀಯಾ ಮುಂದೆ ಹೋಗೋಣ ಎಂಬ ಭಾವನೆಯನ್ನು ನನ್ನೊಳಗೆ ಬೆಳೆಸಿದ್ದಳು. ಅವಳು ಕೊಟ್ಟ ಚೈತನ್ಯದಿಂದಲೇ ಕದ್ದ ಚಿತ್ರದ ಮೂಲಕ ನಾನು ಮುಂದೆ ಸಾಗುತ್ತಿದ್ದೇನೆ.