Asianet Suvarna News Asianet Suvarna News

ಇಂದು ವಿಜಯ್​-ಸ್ಪಂದನಾ ವಿವಾಹ ವಾರ್ಷಿಕೋತ್ಸವ: ಕವನದ ಮೂಲಕ ಕಣ್ಣೀರಿನ ಪೋಸ್ಟ್​

ಇಂದು ನಟ  ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ವಿವಾಹ ವಾರ್ಷಿಕೋತ್ಸವ. ಈ ಸಂದರ್ಭದಲ್ಲಿ ಪತ್ನಿಯನ್ನು ನೆನೆದು ವಿಜಯ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ನೋವಿನ ನುಡಿಗಳನ್ನು ಶೇರ್​ ಮಾಡಿಕೊಂಡಿದ್ದಾರೆ.
 

Vijaya Raghavendra Spandana wedding anniversary today suc
Author
First Published Aug 26, 2023, 3:50 PM IST

ನಟ ವಿಜಯರಾಘವೇಂದ್ರ (Vijaya Raghavendra) ಅವರ ಪತ್ನಿ ಸ್ಪಂದನಾ ಅವರು ಎಲ್ಲರನ್ನೂ ಅಗಲಿ 20 ದಿನಗಳೇ ಕಳೆದಿವೆ. ಇದೇ 6ನೇ ತಾರೀಖಿನಂದು ಇಹಲೋಕ ತ್ಯಜಿಸಿದ್ದಾರೆ ಸ್ಪಂದನಾ. ಮದುವೆ ವಾರ್ಷಿಕೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಎಲ್ಲರನ್ನೂ ಬಿಟ್ಟು ಹೋಗಿದ್ದಾರೆ. 2007 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಜಯ್​-ಸ್ಪಂದನಾ ಜೋಡಿ ಇನ್ನೇನು 16ನೇ ವಾರ್ಷಿಕೋತ್ಸವದ ಖುಷಿಯಲ್ಲಿತ್ತು. ಆದರೆ ವಿಧಿ ಬರಹದ ಮುಂದೆ ಎಲ್ಲವೂ ನಗಣ್ಯವೇ. ಸ್ಪಂದನಾ ಅವರ ನಿಧನರಾದಾಗಿನಿಂದಲೂ ಅವರನ್ನು ನೆನಪಿಸಿಕೊಂಡು ವಿಜಯ್​ ರಾಘವೇಂದ್ರ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ನೋವಿನ ನುಡಿಗಳನ್ನು ಹೇಳುತ್ತಲೇ ಇರುತ್ತಾರೆ. ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇಂದು (ಆಗಸ್ಟ್​ 26) ವಾರ್ಷಿಕೋತ್ಸವ ಆಚರಿಸಿಕೊಂಡು ಖುಷಿಯಾಗಬೇಕಿದ್ದ ವಿಜಯ್​ ಅವರಿಗೆ ಬರಸಿಡಿಲು ಬಡಿದಿದ್ದು, ಪತ್ನಿಯನ್ನು ಪುನಃ ನೆನೆದು ಭಾವುಕರಾಗಿದ್ದಾರೆ.

ಚಿಕ್ಕ ಕವನದ ಮೂಲಕ ಪತ್ನಿಯ ನೆನಪನ್ನು ಮಾಡಿಕೊಂಡಿದ್ದಾರೆ ವಿಜಯ್​ ರಾಘವೇಂದ್ರ. ಅವರು ಶೇರ್​ ಮಾಡಿಕೊಂಡ ಕವಿತೆ ಹೀಗಿದೆ: 
ಇಣುಕು ನೋಟ ಬೀರಿಹೋದೆ ಬದುಕಿನ ಅಂಗಳದಿ,
ಎಲ್ಲೆ ಮೀರಿ ಒಲವ ನೀಡಿದೆ ಎದೆಯ ಅಂತರಾಳದಲಿ, 
ಬದುಕನ್ನು ಕಟ್ಟಿ ಸರ್ವಸ್ವವಾದೆ, 
ಉಸಿರಲ್ಲಿ ಬೆರೆತು ಜೀವಂತವಾದೆ, 
ಮುದ್ದಾದ ನಗುವಿನಲ್ಲಿದ್ದ ಶಕ್ತಿ ಪರ್ವತದಷ್ಟು, 
ಮರೆಯದೆ, ತೊರೆಯದೆ ಎದೆಗೊತ್ತಿ ಪ್ರೀತಿಸುವೆ, 
ಶೌರ್ಯದಲಿ ನಾನಿನ್ನ ಬಿಗಿದಷ್ಟುವಷ್ಟು...

ಹೀಗೆ ಬರೆದು ಕೆಲವು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಸ್ಪಂದನಾ ಹಾಗೂ ಮಗನ ಜೊತೆಗಿರುವ ಕೆಲವು ಸಂತಸದ ಕ್ಷಣಗಳ ಫೋಟೋಗಳನ್ನು ಶೇರ್​ ಮಾಡಿಕೊಂಡು ವಿಜಯ್​ ರಾಘವೇಂದ್ರ ಭಾವುಕರಾಗಿದ್ದಾರೆ. 

ವಿಜಯ್-ಸ್ಪಂದನಾ ಲವ್ ಸ್ಟೋರಿಯೇ ರೋಚಕ: ಕಾಫಿ ಡೇಯಲ್ಲಿ ಶುರುವಾಯ್ತು ಲವ್ ಕಹಾನಿ..!

ಅಂದಹಾಗೆ ವಿಜಯ್​ ಮತ್ತು ಸ್ಪಂದನಾ ಅವರದ್ದು ಪ್ರೇಮ ವಿವಾಹ.  ವಿಜಯ ರಾಘವೇಂದ್ರ- ಸ್ಪಂದನಾ ಸ್ಯಾಂಡಲ್‌ವುಡ್‌ನ ಅಪರೂಪದಲ್ಲೇ ಅಪರೂಪದ ಜೊಡಿ. ಒಬ್ಬರನ್ನೊಬ್ಬರು ಅರ್ಥೈಸಿಕೊಂಡು  ಜೀವನಕ್ಕೆ ಆಸರೆಯಾಗಿ ಆದರ್ಶ ದಂಪತಿಗಳಾಗಿ ಜೀವನ ನಡೆಸಿದ್ದವರು.    ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದ ಸ್ಪಂದನಾ, ವಿಜಯ ರಾಘವೇಂದ್ರ ಜೊತೆ 26 ಆಗಸ್ಟ್‌ 2007ರಂದು ಮದುವೆ ಆಗಿದ್ದರು. ನಿವೃತ್ತ ಪೊಲೀಸ್‌ ಅಧಿಕಾರಿ ಡಿ.ಕೆ ಶಿವರಾಮ್‌ ಮಗಳಾಗಿದ್ದ ಸ್ಪಂದನಾ(Spandana)   ವಿಜಯ ರಾಘವೇಂದ್ರ ದಂಪತಿಗೆ ಶೌರ್ಯ(Shaurya) ಎಂಬ ಮಗ ಇದ್ದಾನೆ.  ಮದುವೆ ಬಳಿಕವೂ ಪ್ರೇಮಿಗಳಂತೆಯೇ ಅನೋನ್ಯವಾಗಿಯೇ ಇದ್ದರು. ಆದರೆ ವಿಧಿಯಾಟವೇ ಬೇರೆಯಾಗಿ ಹೋಯಿತು.

ಮೊದಲಿಗೆ ಸ್ಪಂದನಾ ಪರಿಚಯವಾಗಿದ್ದು ಮಲ್ಲೇಶ್ವರಂನ ಕಾಫಿ ಡೇಯಲ್ಲಿ, ಮೊದಲ ಬಾರಿ ಸ್ಪಂದನ ಅವರನ್ನ ನೋಡಿದ ವಿಜಯರಾಘವೇಂದ್ರ ಮೊದಲ ನೋಟದಲ್ಲೇ ಕಳೆದು ಹೋಗಿದ್ರು. 2007ರಲ್ಲಿ ಮತ್ತೊಮ್ಮೆ ಶೇಷಾದ್ರಿಪುರಂನ ಕಾಫಿ ಡೇಯಲ್ಲಿ(Coffee Day) ಸ್ಪಂದನಾರನ್ನ ನೋಡಿದ ವಿಜಯ ರಾಘವೇಂದ್ರ ಮೊದಲ ಬಾರಿ ಮಾತಾಡಿಸಿದ್ದಂತೆ. . ಅಲ್ಲಿಂದಲೇ ಈಬ್ಬರ ನಡುವೆ ಪ್ರೀತಿ ಶುರವಾಯ್ತು. ಎರಡನೇ ಬಾರಿ ಭೇಟಿ ವೇಳೆ ಹೇಗಾದ್ರೂ ಸರಿ, ಸ್ಪಂದನಾರನ್ನೇ ಮದುವೆಯಾಗಬೇಕು ಎಂದು ವಿಜಯ ರಾಘವೇಂದ್ರ ನಿರ್ಧರಿಸಿದ್ದರು.  ಕೆಲವೇ ದಿನಗಳಲ್ಲಿ ತಮ್ಮ ಪ್ರೀತಿಯನ್ನ ಸ್ಪಂದನಾ ಬಳಿ ವಿಜಯರಾಘವೇಂದ್ರ ಹೇಳಿಕೊಂಡಿದ್ದರು.  ವಿಜಯ ರಾಘವೇಂದ್ರ ಅವರ ಪ್ರೀತಿಗೆ ಸ್ಪಂದನಾ ಕೂಡ ಒಪ್ಪಿಗೆ ನೀಡಿದ್ದರು.  ಸ್ಪಂದನಾ ಯಾರು ಏನು ಎಂಬುವುದನ್ನೇ ತಿಳಿದುಕೊಳ್ಳದೇ ವಿಜಯ ರಾಘವೇಂದ್ರ ಅವರು ಲವ್​ ಮಾಡಿದ್ದರು. ಕೊನೆಗೆ  ಸ್ಪಂದನಾ ಪೊಲೀಸ್ ಅಧಿಕಾರಿ ಮಗಳು ಎಂದು  ಗೊತ್ತಾಗಿದ್ದೇ ನಂತರದಲ್ಲಿ.  ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿತ್ತು ಈ ಜೋಡಿ.

 

Follow Us:
Download App:
  • android
  • ios