Asianet Suvarna News Asianet Suvarna News

ಸ್ಪಂದನಾ ನೆನದು ವಿಜಯ್‌ ರಾಘವೇಂದ್ರ ಕಣ್ಣೀರು, ನನ್ನ ಜೀವನವೇ ಒಂದು ಕಥೆ ಆಗಿ ಹೋಯ್ತು

ತಾವು ನಟಿಸಿರುವ ಕದ್ದಚಿತ್ರ ಸಿನೆಮಾದ ಟ್ರೈಲರ್ ಲಾಂಚ್‌ ಸಮಾರಂಭಕ್ಕೆ ಬಂದಿದ್ದ ನಟ ವಿಜಯರಾಘವೇಂದ್ರ  ಪತ್ನಿ ಸ್ಪಂದನಾ ನೆನಪಲ್ಲಿ‌ ಅಳುತ್ತಾ ಮಾತನಾಡಿ,  ನಾನು ಕಣ್ಣೀರು ಹಾಕೋದು ಇಷ್ಟ ಆಗಲ್ಲ. ಆದ್ರೆ ನನ್ನ ಜೀವನವೇ ಒಂದು ಕಥೆ ಆಗಿ ಹೋಯ್ತು ಎಂದಿದ್ದಾರೆ.

actor vijay raghavendra talk about wife Spandana on Kaddha Chitra Trailer Launch Event   gow
Author
First Published Aug 27, 2023, 1:15 PM IST

 ನಟ ವಿಜಯ್ ರಾಘವೇಂದ್ರ  ಪತ್ನಿ ಸ್ಪಂದನಾ  ಅಗಲಿಕೆಯ ನೋವಲ್ಲೂ ನಿರ್ಮಾಪಕರ ಜೊತೆ ನಿಂತಿದ್ದಾರೆ.  'ಕದ್ದ ಚಿತ್ರ' ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ರಾಘು ಆಗಮಿಸಿದ್ದರು. ಕದ್ದ ಚಿತ್ರ ವಿಜಯ್ ರಾಘವೇಂದ್ರ ನಟನೆಯ ಸಿನಿಮಾವಾಗಿದೆ. ಆಗಸ್ಟ್ 25ಕ್ಕೆ ಕದ್ದ ಚಿತ್ರ  ಸಿನಿಮಾ ರಿಲೀಸ್  ಆಗಬೇಕಿತ್ತು. ಆದರೆ ಸ್ಪಂದನಾ ಅವರ ಹಠಾತ್ ನಿಧನದಿಂದ ಚಿತ್ರತಂಡ ಬಿಡುಗಡೆ ಮುಂದೂಡಿತ್ತು.

ಹೀಗಾಗಿ ಸ್ಪಂದನಾ ನಿಧನದ ನಂತರ ಮೊದಲ ಬಾರಿಗೆ ಸಿನಿಮಾ ಪ್ರಚಾರದಲ್ಲಿ ರಾಘು ಪಾಲ್ಗೊಂಡರು. ಈ ಹಿಂದೆ ಕದ್ದಚಿತ್ರ ಚಿತ್ರದ ಪ್ರಚಾರದಲ್ಲಿ ಸ್ಪಂದನಾ ಭಾಗಿಯಾಗಿದ್ದರು. ಆಗಸ್ಟ್ 25ರಂದು ಸ್ಪಂದನಾ- ವಿಜಯ್ ರಾಘವೇಂದ್ರ 16ನೇ ವಿವಾಹ ವಾರ್ಷಿಕೋತ್ಸವ ಹೀಗಾಗಿ ಬೆಳಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸ್ಪಂದನಾ ನೆನೆದು ಭಾವನಾತ್ಮಕ ಪೋಸ್ಟ್ ಹಾಕಿದ್ದರು.

ಇಡೀ ಕುಟುಂಬವನ್ನು ತಂದೆ ಗುಂಡಿಕ್ಕಿ ಕೊಂದಾಗ ಬದುಕುಳಿದ ಏಕೈಕ ನಟ ಇವರು!

ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್ ರಾಘವೇಂದ್ರ, ಕದ್ದ ಚಿತ್ರತಂಡ ನನ್ನ‌ ಸ್ನೇಹಿತರ ಬಳಗ. ಈ‌ ಸಿನಿಮಾ ಮಾಡಿದ್ದು ತುಂಬಾ ಖುಷಿ ಆಯ್ತು. ಎಂದು ಇತ್ತೀಚಿನ ದಿನಗಳಲ್ಲಿ ಆಗಿರೋ ಘಟನೆ ಬಗ್ಗೆ ಮಾತನಾಡಿ, ಪತ್ನಿ ಸ್ಪಂದನಾ ನೆನಪಲ್ಲಿ‌ ಅಳುತ್ತಾ ಮಾತನಾಡಿದರು.

ನೀವೆಲ್ಲಾ ನಮ್ಮ ಜೊತೆ ನಿಂತಿದ್ದು, ನನ್ನ ತಾಯಿ ಸ್ಥಾನದಲ್ಲಿ‌ ಇದ್ರಿ. ಕಣ್ಣೀರು ಹಾಕಬಾರದು ಅಂತ ಬಂದಿದ್ದೆ. ಯಾಕಂದ್ರೆ ಸ್ಪಂದನಾಗೆ ನಾನು ಕಣ್ಣೀರು ಹಾಕೋದು ಇಷ್ಟ ಆಗಲ್ಲ. ಆದ್ರೆ ನನ್ನ ಜೀವನವೇ ಒಂದು ಕಥೆ ಆಗಿ ಹೋಯ್ತು. ಕದ್ದ ಚಿತ್ರದ ಮೇಲೆ ಸ್ಪಂದನಾಗೆ ತುಂಬಾ ಪ್ರೀತಿ ಇತ್ತು. ನೀವೆಲ್ಲಾ ನನಗೆ ಶಕ್ತಿ ಕೊಡ್ತಾ ಇದ್ದೀರಾ. ಇನ್ಮುಂದೆ ನನ್ನ ಮಗನ ಕೈ ಹಿಡಿದು ನಡೆಸುತ್ತೀರಾ ಅಂತ ಅಂದುಕೊಂಡಿದ್ದೇನೆ. ಇನ್ನು ತುಂಬಾ ಮಾತನಾಡೋದು ಇದೆ. ಈ ಸಂದರ್ಭದಲ್ಲಿ ನಿರ್ಮಾಪಕನ ಜೊತೆ ನಿಲ್ಲೋದು ನನ್ನ ಕರ್ತವ್ಯ. ನಿಮ್ಮೆಲ್ಲ ಪ್ರೀತಿಯನ್ನ ನಾನು ಉಳಿಸಿಕೊಳ್ಳುತ್ತೇನೆ. ನಾನು ಇನ್ನೂ ಹೆಚ್ಚಾಗಿ ಬೆಳೆಯುತ್ತೇನೆ ಎಂದು ಹೇಳಿದರು

ಕೃತಿ ಚೌರ್ಯ ಪಿಡುಗಾದ ವಿಭಿನ್ನ ಚಿತ್ರಕಥೆ ಹೊಂದಿರುವ ‘ಕದ್ದ ಚಿತ್ರ’ ಎಂಬ ಶೀರ್ಷಿಕೆಯ ಚಲನಚಿತ್ರವು ಸೆಪ್ಟೆಂಬರ್‌ನಲ್ಲಿ ರಾಜ್ಯಾದ್ಯಂತ ಬಿಡುಗಡೆಗೊಳಿಸಲು ಸಿದ್ಧತೆ ಕೈಗೊಂಡಿರುವುದಾಗಿ ಚಿತ್ರದ ನಿರ್ದೇಶಕ ಸುಹಾಸ್‌ ಕೃಷ್ಣ ತಿಳಿಸಿದರು.

ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರು ನಾಯಕ ನಟನಾಗಿ ಖ್ಯಾತ ಕಾದಂಬರಿಕಾರನ ಪಾತ್ರ ನಿರ್ವಹಿಸಿದ್ದಾರೆ. ಅವರ ಕೃತಿಯೊಂದರ ಚೌರ್ಯ ಬಳಿಕ ಕುತೂಹಲಕಾರಿ ಘಟನೆಗಳನ್ನು ಚಲನಚಿತ್ರ ಹೊಂದಿದೆ. ಇದೊಂದು ವಿಭಿನ್ನ ಕಥಾಹಂದರದ ಚಲನಚಿತ್ರವಾಗಿದೆ ಎಂದು  ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಲಿವಿನ್‌ಟುಗೆದರ್‌ ನಲ್ಲಿದ್ದ ನಿರ್ದೇಶಕನ ಮಕ್ಕಳಿಂದಲೇ ಕೊಲೆಯಾಗಿ ದುರಂತ ಅಂತ್ಯ ಕಂಡ ಸೂಪರ್‌ಸ್ಟಾರ್ ನಟಿ

ಬೆಂಗಳೂರು, ಕೇರಳದ ವೈನಾಡು ಪ್ರದೇಶದಲ್ಲಿ ಚಿತ್ರೀಕರಣಗೊಂಡಿದೆ. ರಾಜ್ಯಾದ್ಯಂತ ಸುಮಾರು 80 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಕೃಷ್ಣರಾಜ್‌ ಸಂಗೀತ ಸಂಯೋಜಿಸಿದ್ದಾರೆ ಎಂದು ಅವರು ವಿವರಿಸಿದರು. 

ನಿರ್ಮಾಪಕ ಸಂದೀಪ್‌ ಹೆಚ್‌ ಕೆ, ನಾಯಕಿ ನಮೃತಾ ಸುರೇಂದ್ರನಾಥ್‌, ಸಂಗೀತ ನಿರ್ದೇಶಕ ಕೃಷ್ಣ ರಾಜ್‌, ಕಲಾವಿದರಾದ ರಾಘು ಶಿವಮೊಗ್ಗ, ಬಾಲಾಜಿ ಮನೋಹರ್‌, ಸಂಗೀತ ನಿರ್ದೇಶಕ ಕೃಷ್ಣರಾಜ್‌, ಛಾಯಾಗ್ರಹಣ ಮತ್ತು ಎಡಿಟಿಂಗ್‌ ಮಾಡಿದ ಕ್ರೇಜಿ ಮೈಂಡ್‌, ಛಾಯಾಗ್ರಾಹಕ ಗೌತಮ್‌ ಇದ್ದರು. ಝಂಕಾರ್‌ ಮ್ಯೂಸಿಕ್‌ ಯೂಟ್ಯೂಬ್‌ನಲ್ಲಿ ಟ್ರೈಲರ್ ರಿಲೀಸ್ ಆಗಿದೆ.

Follow Us:
Download App:
  • android
  • ios