ದಕ್ಷಿಣ ಭಾರತದ ಚಲನಚಿತ್ರಗಳಿಗೆ ಸಿನಿಮಾ ಪ್ರಶಸ್ತಿ ನೀಡುವ ಪದ್ಧತಿ ಮೊದಲಿನಿಂದಲೂ ಇದೆ. ಆದರೆ ಕಿರುಚಿತ್ರಗಳಿಗೂ ಸಿನಿಮಾ ಪ್ರಶಸ್ತಿ ರೀತಿಯಲ್ಲಿ ಅದ್ದೂರಿಯಾಗಿ ಪ್ರಶಸ್ತಿ ನೀಡಬಹುದು ಅಂತ ತೋರಿಸಿಕೊಟ್ಟಿರುವುದು ಸ್ಮೈಫಾ ಅವಾರ್ಡ್‌.

ಸ್ಮೈಫಾ ಎಂದರೆ ಸ್ಟೋನ್ಡ್ ಮಂಕಿ ಇಂಟರ್‌ನ್ಯಾಷನಲ್‌ ಫಿಲಂ ಅವಾರ್ಡ್‌ ಫಾರ್‌ ಶಾರ್ಟ್ಸ್ ಅಂತ. ಇದರ ರೂವಾರಿ ಡಾ. ಸಾಯಿ ಆಶ್ಲೇಷ್‌. ಅವರಿಗೆ ಜತೆಯಾಗಿರುವುದು ಕೃಷ್ಣ ಕ್ರಿಯೇಷನ್ಸ್‌ನ ಕೃಷ್ಣ ಸಾರ್ಥಕ್‌.

ಇತ್ತೀಚೆಗೆ 3ನೇ ಆವೃತ್ತಿಯ ಸ್ಮೈಫಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅದ್ದೂರಿಯಾಗಿ ನಡೆದ ಸಮಾರಂಭದಲ್ಲಿ ಶ್ರೀಮುರಳಿ, ಶರಣ್‌, ನಿರ್ಮಾಪಕ ಕರಿಸುಬ್ಬು, ಭರಾಟೆ ನಿರ್ದೇಶಕ ಚೇತನ್‌ ಕುಮಾರ್‌, ವಿನಯ್‌ ಭಾರದ್ವಾಜ್‌, ನಟಿಯರಾದ ರಾಧಿಕಾ ಚೇತನ್‌, ಭಾವನ ರಾವ್‌, ಹಿತಾ ಚಂದ್ರಶೇಖರ್‌, ಸಿಹಿಕಹಿ ಚಂದ್ರು, ರಮೇಶ್‌ ಪಂಡಿತ್‌, ವಿನಯ್‌ ರಾಜ್‌ಕುಮಾರ್‌, ಕೃಷಿ ತಾಪಂಡ, ನವೀನ್‌ ಶಂಕರ್‌ ಜತೆಗೆ ತಮಿಳು, ಮಲಯಾಳಂ, ತೆಲುಗು ಚಿತ್ರರಂಗದ ಪ್ರಮುಖರು ಪಾಲ್ಗೊಂಡಿದ್ದರು. ಎಲ್ಲರೂ ಸ್ಮೈಫಾ ಸ್ಥಾಪಕ ಸಾಯಿ ಆಶ್ಲೇಷ್‌ ಅವರನ್ನು ಅಭಿನಂದಿಸಿದ್ದು ಗಮನಾರ್ಹ. ಸ್ಮೈಫಾ ಅವಾರ್ಡ್‌ಗೆ 260ಕ್ಕೂ ಹೆಚ್ಚು ಕಿರುಚಿತ್ರಗಳು ಪ್ರವೇಶ ಪಡೆದಿದ್ದವು. ಅದರಲ್ಲಿ ಐದು ಭಾಷೆಯ 40 ಶ್ರೇಷ್ಠ ಪ್ರತಿಭಾವಂತರನ್ನು ಗುರುತಿಸಿ ಗೌರವಿಸಲಾಯಿತು. ಕತೆಗಾರ ಜೋಗಿ, ನಿರ್ದೇಶಕ ತರುಣ್‌ ಸುಧೀರ್‌, ಛಾಯಾಗ್ರಾಹಕ ಭುವನ್‌ ಗೌಡ, ನಿರ್ದೇಶಕ ಲೋಹಿತ್‌ ಪ್ರಶಸ್ತಿಯ ತೀರ್ಪುಗಾರರಾಗಿದ್ದರು.

ಕನ್ನಡ ವಿಭಾಗದ ಪ್ರಶಸ್ತಿ ವಿಜೇತರು

ಅತ್ಯುತ್ತಮ ನಿರ್ದೇಶಕ- ರಘುನಂದನ್‌ ಕಾನಡ್ಕ (ಕಿರುಚಿತ್ರ: ಜಿಪಿಎಸ್‌)

ಅತ್ಯುತ್ತಮ ನಟ- ಗೋಪಾಲಕೃಷ್ಣ ದೇಶಪಾಂಡೆ (ಜಿಪಿಎಸ್‌)

ಅತ್ಯುತ್ತಮ ನಟಿ- ಶ್ವೇತಾ ಶ್ರೀನಿವಾಸ್‌ (ಗಂಗಾ), ಪಾರವ್ವ (ಲಚ್ಚವ್ವ)

ಅತ್ಯುತ್ತಮ ಕಿರುಚಿತ್ರ- ಲಚ್ಚವ್ವ (ನಿರ್ದೇಶಕ: ಜೈಶಂಕರ್‌)

ವಿಮರ್ಶಕರ ಅತ್ಯುತ್ತಮ ಕಿರುಚಿತ್ರ- ಮಹಾನ್‌ ಹುತಾತ್ಮ

ಅತ್ಯುತ್ತಮ ಸಂಗೀತ ನಿರ್ದೇಶಕ- ವಿಶಾಖ್‌ ರಾಮ್‌ಪ್ರಸಾದ್‌ (ಅನಾವರಣ)

ಅತ್ಯುತ್ತಮ ಛಾಯಾಗ್ರಾಹಕ- ಅರ್ಜುನ ಶೆಟ್ಟಿ(ಆವರ್ತ), ಕಾರ್ತಿಕ್‌ ಬಿ.ಮಳ್ಳೂರ್‌(ರೈತ)

ಅತ್ಯುತ್ತಮ ಪೋಷಕ ನಟನೆ- ಸಂಧ್ಯಾ ಅರಕೆರೆ(ಗಂಗಾ)

ಅತ್ಯುತ್ತಮ ಸಂಕಲನ- ಮನು ಅನುರಾಮ್‌ (ನಗುವ ನಯನ)