Asianet Suvarna News Asianet Suvarna News

ಗಲ್ಲಿ ಕ್ರಿಕೆಟ್ ಆಡಿದ ದಾದಾ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ದೊಡ್ಡ ಕ್ರಿಕೆಟಿಗರೊಬ್ಬರು ಹೀಗೆ ರಸ್ತೆಯಲ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿರುವುದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

Sourav Ganguly playing gully cricket on streets of Kolkata
  • Facebook
  • Twitter
  • Whatsapp

ಕೋಲ್ಕತಾ(ಡಿ.05): ಭಾರತೀಯ ಕ್ರಿಕೆಟ್ ತಂಡ ಕಂಡ ಅತಿ ಯಶಸ್ವಿ ನಾಯಕನೆಂದೇ ಖ್ಯಾತರಾಗಿರುವ, ಸೌರವ್ ಗಂಗೂಲಿ ಇತ್ತೀಚೆಗೆ ಕೋಲ್ಕತಾ ನಗರದ ಗಲ್ಲಿಯೊಂದರಲ್ಲಿ ಕ್ರಿಕೆಟ್ ಆಡುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಅದೇ ನಗರದ ಅನಿರ್ಬನ್ ಚರಣ್ ಎಂಬ ಛಾಯಾಗ್ರಾಹಕರೊಬ್ಬರು ಡಿ. 2ರಂದು ಈ ವಿಡಿಯೊವನ್ನು ಸೆರೆಹಿಡಿದಿದ್ದು, ಅದರಲ್ಲಿ ಬೂದು ಬಣ್ಣದ ಪ್ಯಾಂಟು, ಕಪ್ಪು ಬಣ್ಣದ ಟೀ ಶರ್ಟ್ ತೊಟ್ಟ ದಾದಾ ಹುಡುಗರ ಬೌಲಿಂಗ್‌'ಗೆ ಬ್ಯಾಟ್ ಬೀಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ದೊಡ್ಡ ಕ್ರಿಕೆಟಿಗರೊಬ್ಬರು ಹೀಗೆ ರಸ್ತೆಯಲ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿರುವುದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ದಾದಾನ ದಾದಾಗಿರಿಯ ಸಣ್ಣ ಝಲಕ್ ನಿಮಗಾಗಿ....

Follow Us:
Download App:
  • android
  • ios