ಸಾಮಾಜಿಕ ಜಾಲತಾಣದಲ್ಲಿ ಇದ್ದರೂ ಇಲ್ಲದ ಹಾಗೆ ಇರುವವರು ರಜನಿಕಾಂತ್ ಪುತ್ರಿಯರು. ಕೆಲ ತಿಂಗಳ ಹಿಂದೆ ಎರಡನೇ ಮದುವೆಯಾದ ಸೌಂದರ್ಯ ತನ್ನ ಮೊದಲ ಮಗನೊಂದಿಗೆ ಸ್ಮಿಮ್ಮಿಂಗ್ ಪೂಲ್‌ನಲ್ಲಿ ಫ್ರೀಂ ಟೈಂನಲ್ಲಿ ಕುಳಿತಿರುವ ಫೋಟೋ ಶೇರ್ ಮಾಡಿಕೊಂಡು, ‘ಬಾಲ್ಯದಲ್ಲಿ ಮಕ್ಕಳಿಗೆ ಸ್ವಿಮ್ಮಿಂಗ್ ಕಲಿಸಬೇಕು’ ಎಂದು ಬರೆದುಕೊಂಡಿದ್ದಾರೆ.

ಅಪ್ಪನಂತೆಯೇ ಮಗ; ರಜನಿ ಪುತ್ರಿ ಸಂಭ್ರಮ

ಇನ್ನು ಕೆಲ ದಿನಗಳ ಹಿಂದೆ ಪ್ರೆಸ್ ಮೀಟ್‌ವೊಂದರಲ್ಲಿ ಸೂಪರ್ ಸ್ಟಾರ್ ದೇಶದಲ್ಲಿ ಆಗುತ್ತಿರುವ ನೀರಿನ ಸಮಸ್ಯೆ ಕುರಿತು ಮಾತನಾಡಿದ್ದರು, ಆದರೆ ಮಗಳು ನೋಡಿದರೆ ನೀರಿನಲ್ಲಿ ಮೋಜು-ಮಸ್ತಿ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಫೋಟೋಗೆ ಕಾಮೆಂಟ್ ಮಾಡಿದ್ದಾರೆ. ಕಾಮೆಂಟ್‌ಗಳನ್ನು ನೋಡಿ ತಕ್ಷಣವೇ ರಿಯಾಕ್ಟ್ ಮಾಡಿದ ಸೌಂದರ್ಯ ಫೋಟೋ ಡಿಲೀಟ್ ಮಾಡಿದ್ದಾರೆ.

ಆ ನಂತರ ' ಒಳ್ಳೆಯ ಮನಸ್ಸಿನಿಂದ ಹಾಗೂ ಒಳ್ಳೆಯ ಉದ್ದೇಶದಿಂದ ಹಾಕಿದ ಫೋಟೋವನ್ನು ಡಿಲೀಟ್ ಮಾಡಿದ್ದೇನೆ. #TravelDiaries ದೇಶದಲ್ಲಾಗುತ್ತಿರುವ ನೀರಿನ ತೊಂದರೆ #WaterScarcity ಗಮನದಲ್ಲಿಟ್ಟುಕೊಂಡಿದ್ದೇನೆ. ಈ ಪೋಟೋ ಹಿಂದೊಂದು ಕಾಲದಲ್ಲಿ ಪ್ರವಾಸಕ್ಕೆ ಹೋದಾಗ ಚಿತ್ರಿಕರಿಸಿದ್ದು ಹಾಗೂ ಮಕ್ಕಳಿಗೆ ಚಿಕ್ಕ ವಯಸ್ಸಲ್ಲಿ ಸ್ವಿಮ್ಮಿಂಗ್‌ ಕಳಿಸಬೇಕು ಎಂಬುದು ಅದರ ಉದ್ದೇಶವಷ್ಟೇ #LetsSaveWater' ಎಂದು ಬರೆದು ಕ್ಷಮೆ ಕೇಳಿದ್ದಾರೆ.