ಅವಹೇಳನಕಾರಿ ಸಂಭಾಷಣೆ ಹಿನ್ನಲೆಯಲ್ಲಿ ವಿಜಯ್ ಕುಮಾರ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ಬಗ್ಗೆ ವಿಚಾರಣೆ ನಡೆಸಿದ್ದ 40ನೇ ಸಿವಿಲ್ ನ್ಯಾಯಾಲಯ ಚಿತ್ರ ಪ್ರದರ್ಶನಕ್ಕೆ ತಡೆ ನೀಡಬೇಕೆಂದು ಆದೇಶಿಸಿತ್ತು.
ಬೆಂಗಳೂರು(ಡಿ.23): ವಕೀಲರ ವಿರುದ್ಧ ಅವಹೇಳನಕಾರಿ ಸಂಭಾಷಣೆಗೆ ಕತ್ತರಿ ಹಾಕುವುದಾಗಿ ಅಂಜನಿಪುತ್ರ ಚಿತ್ರದ ವಿತರಕರಾದ ಜಾಕ್ ಮಂಜು ಸುವರ್ಣ ನ್ಯೂಸ್'ಗೆ ತಿಳಿಸಿದ್ದಾರೆ. ಸಿನಿಮಾ ವಿವಾದದ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಂಡ ಅವರು ಶೀಘ್ರದಲ್ಲಿಯೇ ವಿವಾದಾತ್ಮಕ ಸಂಭಾಷಣೆಗೆ ಕತ್ತರಿ ಹಾಕುವುದಾಗಿ ಭರವಸೆ ನೀಡಿದರು.
ಅವಹೇಳನಕಾರಿ ಸಂಭಾಷಣೆ ಹಿನ್ನಲೆಯಲ್ಲಿ ವಿಜಯ್ ಕುಮಾರ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ಬಗ್ಗೆ ವಿಚಾರಣೆ ನಡೆಸಿದ್ದ 40ನೇ ಸಿವಿಲ್ ನ್ಯಾಯಾಲಯ ಚಿತ್ರ ಪ್ರದರ್ಶನಕ್ಕೆ ತಡೆ ನೀಡಬೇಕೆಂದು ಆದೇಶಿಸಿತ್ತು. ಚಲನಚಿತ್ರ ನಿರ್ಮಾಪಕ, ನಿರ್ದೇಶಕರಿಗೂ ನೋಟಿಸ್ ನೀಡಲಾಗಿತ್ತು.
