ಅನಿಲ್​ ಕಪೂರ್​ ಪುತ್ರಿ ನಟಿ ಸೋನಂ ಕಪೂರ್​ ಸದಾ ಏಕೆ ಸದಾ ದೇಹ ಪ್ರದರ್ಶನ ಮಾಡ್ತಾರೆ ಎನ್ನುವುದಕ್ಕೆ, ಆಕೆಯ ಅಭಿಮಾನಿಯೊಬ್ಬ ಉತ್ತರ ಕಂಡುಕೊಂಡಿದ್ದು, ಇದನ್ನು ಕೇಳಿ ನೆಟ್ಟಿಗರು ಹುಬ್ಬೇರಿಸ್ತಿದ್ದಾರೆ. ಏನದು ನೋಡು!

ಚಿತ್ರ ನಟಿಯರು ಅದರಲ್ಲಿಯೂ ಹೆಚ್ಚಾಗಿ ಬಾಲಿವುಡ್‌ ನಟಿಯರು ಇಂದು ಪೈಪೋಟಿಗೆ ಬಿದ್ದವರಂತೆ ದೇಹ ಪ್ರದರ್ಶನ ಮಾಡುವುದು ಮಾಮೂಲಾಗಿದೆ. ಈ ಪೈಪೋಟಿ ಎಷ್ಟರ ಮಟ್ಟಿಗೆ ಇದೆ ಎಂದರೆ, ಇದೀಗ ನಟಿಯರು ಅರೆಬೆರೆ ಬೆತ್ತಲಾಗಿದ್ದು ಸಾಕಾಗಲ್ಲ ಎಂದು ಪೂರ್ಣ ಬೆತ್ತಲಾಗಿದ್ದೂ ನಡೆದಿದೆ. ಚಿತ್ರಕ್ಕೆ ಒಪ್ಪುವಂತಿದ್ದರೆ ನಾನು ರೆಡಿ ಎನ್ನುವ ಮಾತು ಬಹುತೇಕ ನಟಿಯರಿಂದ ಕೇಳಬಹುದು. ಇನ್ನು ಕೆಲವು ನಟಿಯರು ಬಳಕುವ ಬಳ್ಳಿಯಂತೆ ಇರಲು ಇನ್ನಿಲ್ಲದ ಸರ್ಕಸ್‌ ಮಾಡಿದ್ರೂ, ದೇಹದ ಭಾಗಕ್ಕೆ ಸರ್ಜರಿ ಮಾಡಿಕೊಂಡು ಅದರ ಧಾರಾಳ ಪ್ರದರ್ಶನ ಮಾಡುವುದೂ ನಡೆದಿದೆ. ಇಂಥ ನಟಿಯರು ಟ್ರೋಲ್‌ ಆಗುವುದರಿಂದಲೇ ಸಕತ್‌ ಪ್ರಚಾರದಲ್ಲಿ ಇರುವ ಕಾರಣ, ಇವರನ್ನು ನೋಡಿ ಇನ್ನುಳಿದ ನಟಿಯರು ಇವರ ಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಅಂಥವರಲ್ಲಿ ಒಬ್ಬರು ನಟಿ ಸೋನಂ ಕಪೂರ್​. ಅನಿಲ್​ ಕಪೂರ್​ ಮಗಳಾಗಿರುವ ಸೋನಂ, ಎದೆಯನ್ನು ಏಕೆ ಪ್ರದರ್ಶನ ಮಾಡ್ತಾರೆ ಎಂದು ಆಕೆಯ ಅಭಿಮಾನಿಯೊಬ್ಬರು ಹೇಳಿರೋ ಮಾತು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗ್ತಿದೆ.

ಈಚೆಗೆ ಅವರು, ಕಾರ್ಯಕ್ರಮವೊಂದಕ್ಕೆ ಆಗಮಿಸಿದಾಗ, ಅವರ ಧಾರಾಳ ಎದೆ ಪ್ರದರ್ಶನ ಹಲವರನ್ನು ಮುಜುಗರ ತರಿಸಿತ್ತು. ಇದರ ಫೋಟೋ ವೈರಲ್​ ಆಗುತ್ತಲೇ ಸೋನಮ್‌ ಕಪೂರ್‌ ತಮ್ಮ ಎದೆಯನ್ನು ಯಾಕೆ ತೋರಿಸುತ್ತಾರೆ ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಎತ್ತಿದ್ದಾರೆ! ಬಹಳ ವರ್ಷಗಳ ಹಿಂದೆ ತಮ್ಮ ಎದೆ ಪ್ರದರ್ಶನ ಮಾಡಿ ಸೋನಮ್​ ಕಪೂರ್‌ ಶೇರ್‌ ಮಾಡಿಕೊಂಡಿದ್ದ ಫೋಟೋಗಳೊಂದಿಗೆ ಈಕೆಯ ಈಗಿನ ಫೋಟೋ ವೈರಲ್‌ (/viral) ಆಗುತ್ತಿದ್ದು, ವ್ಯತ್ಯಾಸ ನೋಡಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಅಷ್ಟಕ್ಕೂ ಆಗಿರುವುದು ಏನೆಂದರೆ ಸೋನಮ್​ ಕಪೂರ್‌ ಕೆಲ ವರ್ಷಗಳ ಹಿಂದೆ ತೆಗೆಸಿಕೊಂಡಿರುವ ಫೋಟೋದಲ್ಲಿ ಈಕೆಯ ಎದೆ ಭಾಗ ಈಗಿನಷ್ಟು ದೊಡ್ಡದು ಇರಲಿಲ್ಲ. ಸಾಮಾನ್ಯವಾಗಿದ್ದ ಎದೆ ಈಗ ಹೀಗೇಕೆ ಎಂದು ಪ್ರಶ್ನೆ ಆಕೆಯ ಅಭಿಮಾನಿಗಳ ತಲೆ ಕೆಡಿಸುತ್ತಿದೆ. ಇದರೊಂದಿಗೆ ಇತ್ತೀಚೆಗೆ ಸೋನಮ್‌ ತಮ್ಮ ಬೃಹತ್‌ ಎದೆಯನ್ನು ಪದೇ ಪದೇ ಕಾಣಿಸುತ್ತಿರುವುದು ಯಾಕೆ ಅಂತ ಕೇಳ್ತಿದ್ದಾರೆ ಅಭಿಮಾನಿಗಳು. ಇಷ್ಟಕ್ಕೇ ಸುಮ್ಮನಾಗದ ಅವರು, ಈ ಪ್ರಶ್ನೆಗಳಿಗೆ ಉತ್ತರವನ್ನೂ ಕಂಡುಕೊಂಡಿದ್ದಾರೆ.

ಚಿಕ್ಕದಾಗಿದ್ದ ಸ್ತನಗಳನ್ನು ಸೋನಮ್‌ ಕಪೂರ್‌ ಶಸ್ತ್ರಚಿಕಿತ್ಸೆಯ ಮೂಲಕ ಬೃಹದಾಕಾರವಾಗಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹಲವು ನಟಿಯರು ಕೂಡ ಈ ಪ್ರಕ್ರಿಯೆಗೆ ಒಳಗಾಗಿದ್ದು, ಸೋನಮ್‌ ಕಪೂರ್‌ ಕೂಡ ತಮ್ಮ ಅಂದವನ್ನು ವೃದ್ಧಿಸಿಕೊಳ್ಳಲು ಆಪರೇಷನ್‌ ಮಾಡಿಸಿಕೊಂಡಿದ್ದಾರೆ. ಅದಾದ ಮೇಲೆ ಸ್ತನ (Breast) ತೋರಿಸುವುದು ಹೆಚ್ಚಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ಸೋನಮ್‌ ಕಪೂರ್‌ ಎದೆಯನ್ನಾಗಿ ಅಷ್ಟು ತೋರಿಸುತ್ತಾಳೆ ಎಂಬ ಪ್ರಶ್ನೆಗೆ ದೆಹಲಿಯ ಸಾಫ್ಟ್‌ವೇರ್‌ಎಂಜಿನಿಯರ್‌ ಪ್ರಿನ್ಸ್‌ ಕೌಶಿಕ್‌ ಅವರು ’ಎದೆ’ಗಾರಿಕೆ ಉತ್ತರ ಕೊಟ್ಟಿದ್ದು, ಇದೀಗ ವೈರಲ್‌ ಆಗುತ್ತಿದೆ.

ಅಷ್ಟಕ್ಕೂ ಪ್ರಿನ್ಸ್‌ ಕೌಶಿಕ್‌ ಹೇಳಿದ್ದೇನೆಂರೆ, ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿದೆ. ಸೋನಮ್​ ಕಪೂರ್ ಅವರಿಗೆ ಏನು ಬೇಕೋ ಅದನ್ನು ಧರಿಸುತ್ತಾರೆ. ಏಕೆಂದರೆ ಅವರು ಅದನ್ನು ಬಯಸುತ್ತಾರೆ. ಅದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ. ಈ ರೀತಿಯ ಡ್ರೆಸ್‌ ಹಾಕಿಕೊಂಡ ಸೋನಮ್​ ಕಪೂರ್‌ ಯಾವುದೇ ತಪ್ಪು ಮಾಡಲಿಲ್ಲ. ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಷನ್ (Hruthik Roshan) ಅವರಂತಹ ನಟರು ಚಲನಚಿತ್ರಗಳಲ್ಲಿ ತಮ್ಮ ದೇಹವನ್ನು ಏಕೆ ಪ್ರದರ್ಶಿಸುತ್ತಾರೆ ಹೇಳಿ ನೋಡೋಣ, ಅವರ ದೇಹವು ಪ್ರದರ್ಶಿಸಲು ಯೋಗ್ಯವಾಗಿದೆ ಎಂದು ಭಾವಿಸಿ ಅದನ್ನು ತೋರಿಸುತ್ತಾರೆ. ಹಾಗಿದ್ದ ಮೇಲೆ ಉತ್ತಮ ಮೈಕಟ್ಟು ಹೊಂದಿರುವ ನಟಿ ಏಕೆ ಎದೆ ತೋರಿಸಬಾರದು? ದೇಹವನ್ನು ಪ್ರದರ್ಶಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಎನಿಸುತ್ತದೆ. ಅವುಗಳನ್ನು ಚೆನ್ನಾಗಿ ಇಟ್ಟುಕೊಳ್ಳಲು ನೀವು ಶ್ರಮಿಸಿದ್ದೇ ಹೌದಾದರೆ ದೇಹ ಪ್ರದರ್ಶಿಸುವಲ್ಲಿ ತಪ್ಪಿಲ್ಲ ಎಂದಿದ್ದಾರೆ. ಇದಕ್ಕೆ ಈಗ ಪರ-ವಿರೋಧ ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ.