ಮುಂಬೈ(ಫೆ.16) ಮದುವೆಯಾಗಿದ್ದರೂ ಈ ನಟಿ ಸೋನಂ ಕಪೂರ್ ಒಂದೆಲ್ಲಾ ಒಂದು ಸುದ್ದಿ ಮಾಡುತ್ತಲೇ ಇರುತ್ತಾರೆ. ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಶೇರ್ ಮಾಡಿಕೊಂಡಿರುವ ಪೋಟೋ ಚರ್ಚೆಗೆ ಗ್ರಾಸವಾಗಿದೆ.

2018 ಮೇ 8 ರಂದು ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ಮದುವೆ ಬಿಸಿನೆಸ್ ಮ್ಯಾನ್ ಆನಂದ್ ಅಹುಜಾ ಜೊತೆ ದಾಂಪತ್ಯಕ್ಕೆ ಕಾಲಿಟ್ಟಿರು.  ಸಿಖ್ ಸಂಪ್ರದಾಯದಂತೆ ಸೋನಂ ಕಪೂರ್-ಆನಂದ್ ಅಹುಜಾ ವಿವಾಹ ನೆರವೇರಿತ್ತು.

ಎದೆಯಿಂದ ಜಾರಿಬಿತ್ತು ಸೋನಂ ಕಪೂರ್ ಡ್ರೆಸ್

ಆದರೆ ಅಸಲಿ ಸುದ್ದಿ ಇದಲ್ಲ. ಎಲ್ಲದಕ್ಕೂ ಮೂಲ ತುಟಿಗೆ ತುಟಿ ಇಟ್ಟ ಚುಂಬನ. ಯುರೋಪ್ ಪ್ರವಾಸ ಮಾಡಿದ್ದ ಜೋಡಿ ಬಿಂದಾಸ್ ಆಗಿ ತಿರುಗಾಟ ಮಾಡಿತ್ತು. ಫ್ರಾನ್ಸ್ ನ ಪ್ಯಾರಿಸ್ ನಲ್ಲಿರುವ ವಿಶ್ವ ಪ್ರಸಿದ್ಧ ಐಫೆಲ್ ಟವರ್ ಮುಂದೆ ನಿಂತು ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಚುಂಬಿಸಿದ್ದರು.ಐಫೆಲ್ ಗೋಪುರದ ಮುಂಭಾಗ ಅನುಭವಿಸಿದ ರೋಮ್ಯಾಂಟಿಕ್ ಕ್ಷಣವನ್ನು ಮೊನ್ನೆಯ ಪ್ರೇಮಿಗಳ ದಿನಗಳ ಪ್ರಯುಕ್ತ ನೆನಪು ಮಾಡಿಕೊಂಡು, ಆ ಫೋಟೋನ ಸೋನಂ ಕಪೂರ್ ಶೇರ್ ಮಾಡಿದ್ದಾರೆ. ಇದಕ್ಕೆ ಅಹುಜಾ ಸಹ ಕಮೆಂಟ್ ಮಾಡಿ ಪ್ರೀತಿ ವ್ಯಕ್ತಪಡಿಸಿದ್ದಾರೆ.