ಬಾಲಿವುಡ್‌ ಸ್ಟೈಲ್‌ ಐಕಾನ್‌ ಸೋನಂ ಕಪೂರ್‌ ದಿನೇ ದಿನೇ ವಿಭಿನ್ನ ಡ್ರೆಸ್ ಧರಿಸುತ್ತಿದ್ದಾರೆ. ಫ್ಯಾಷನ್‌ ಆ್ಯಂಡ್‌  ಯೂತ್ ಐಕಾನ್‌ ಆಗಿರುವ ಸೋನಂ ಟ್ರೋಲ್‌  ಆಗುವುದು ಹೊಸದೇನಲ್ಲ.  

ಸೋನಂ ಕಪೂರ್ ಡಯಟ್ ಟಿಪ್ಸ್ ಇದು!

ಆದಿತ್ಯ ರಾಯ್‌ ಕಪೂರ್‌, ದಿಶಾ ಪಟಾನಿ ಹಾಗೂ ಅನಿಲ್‌ ಕಪೂರ್‌ ಅಭಿನಯದ 'ಮಲಾಂಗ್' ವಿಶೇಷ ಪ್ರದರ್ಶನ ಅದ್ಧೂರಿಯಾಗಿ ನಡೆಯಿತು.  ಪ್ರೀಮಿಯರ್‌ ಶೋನಲ್ಲಿ ಪಾಲ್ಗೊಂಡ ಸೋನಂ ಕಪೂರ್‌ ಬ್ಲ್ಯಾಕ್‌ ಡ್ರೆಸ್‌ನಲ್ಲಿ ಕಂಗೊಳಿಸುತ್ತಿದ್ದರು.  ಸೋನಂ ಸ್ಟೈಲ್‌ ಗೇಮ್‌ ನೆಟ್ಟಿಗರ ಗಮನ ಸೆಳೆದಿದೆ. 

ಸೋನಂ ಡ್ರೆಸ್‌ ಬೆಲೆ ಎಷ್ಟು?

ಸೋನಂ ಸಾಮಾನ್ಯವಾಗಿ ಧರಿಸುವುದು ಡಿಸೈನರ್‌ ವೇರ್‌ಗಳನ್ನು. ಯಾರೂ ಧರಿಸಿದ ಡಿಸೈನ್ ಮಾಡಿಸಿಕೊಂಡು ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಇನ್ನು ಪ್ರೀಮಿಯರ್‌ ಶೋನಲ್ಲಿ ಧರಿಸಿದ ಡ್ರೆಸ್‌ ಬೆಲೆ ಸುಮಾರು 1,64,000 ರೂಪಾಯಿ.  ಈ ಡ್ರೆಸನ್ನು 'Half Dress'ಎಂದು ಕರೆಯಲಾಗುತ್ತದೆ. 

"

ಬಾಲಿವುಡ್‌ನ ಟಾಪ್ 10 ಶ್ರೀಮಂತ ನಟಿಯರಿವರು!

ನೋಡೋಕೆ ಡ್ರೆಸ್‌ ಸಿಂಪಲ್‌ ಆಗಿದ್ದರೂ ನೆಟ್ಟಿಗರು ಟ್ರೋಲ್‌ ಮಾಡಿದ್ದಾರೆ. ಈ ಡ್ರೆಸ್‌ ಬೆಲೆಗೆ ಒಂದು ಕಾರ್‌ ಕೊಳ್ಳಬಹುದು ಹಾಗೂ ದುಬಾರಿ ಬೆಲೆಯ ಡ್ರೆಸ್ ಆದರೂ ಯಾಕಿಷ್ಟೊಂದು ಜಾರುತ್ತಿದೆ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.