ಕೌನ್ ಬನೇಗಾ ಕರೋಡ್ ಪತಿಯಲ್ಲಿ ಭಾಗಿಯಾದ ಸೋನಾಕ್ಷಿ ಸಿನ್ಹಾ | ರಾಮಾಯಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ಕೊಡಲಾಗದೇ ಪೇಚಿಗೆ ಸಿಲುಕಿದರು | ಟ್ರೋಲ್ ಮಾಡಿದವರಿಗೆ ಸಖತ್ ಕ್ಲಾಸ್ 

ಕೌನ್ ಬನೇಗಾ ಕರೋಡ್ ಪತಿಯಲ್ಲಿ ಕೇಳಿದ ರಾಮಾಯಣದ ಪ್ರಶ್ನೆಯೊಂದಕ್ಕೆ ಸೋನಾಕ್ಷಿ ಸಿನ್ಹಾ ತಡಬಡಾಯಿಸಿ ಟ್ರೋಲ್ ಗೆ ಒಳಗಾಗಿದ್ದರು. ಇದಕ್ಕೆ ಸೋನಾಕ್ಷಿ ಖಡಕ್ ಉತ್ತರ ನೀಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರ ಗೊತ್ತಿದ್ರೂ ಏಳು ಕೋಟಿ ಜಸ್ಟ್‌ ಮಿಸ್‌!

ಡಿಯರ್ ಟ್ರೋಲ್ಸ್, ನನಗೆ ಪೈಥಾಗೋರಸ್ ಪ್ರಮೇಯ ಮರೆತು ಹೋಗಿದೆ. ಮರ್ಚೆಂಟ್ ಆಫ್ ವೇನಿಸ್, ಪೀರಿಯಾಡಿಕ್ ಟೇಬಲ್, ಮೊಘಲ್ ಸಾಮ್ರಾಜ್ಯದ ಬಗ್ಗೆ ಎಲ್ಲಾ ಮರೆತು ಹೋಗಿದೆ. ನಿಮಗೆ ಮಾಡಲು ಕೆಲಸ ಇಲ್ಲದಿದ್ದರೆ, ಸಮಯ ಇದ್ದರೆ ಇದನ್ನೂ ಮೆಮೆ ಮಾಡಿ. I love Memes ಎಂದು ಉತ್ತರ ಕೊಟ್ಟಿದ್ದಾರೆ. 

Scroll to load tweet…

ಕೌನ್ ಬನೇಗಾ ಕರೋಡ್ ಪತಿ ಹಾಟ್ ಸೀಟ್ ನಲ್ಲಿ ಕುಳಿತ ರಾಜಸ್ಥಾನ ಮೂಲದ ಸ್ಪರ್ಧಿಗೆ ಸಪೋರ್ಟ್ ಮಾಡಲು ದಬಾಂಗ್ ಗರ್ಲ್ ಸೋನಾಕ್ಷಿ ಸಿನ್ಹಾ ಭಾಗಿಯಾಗಿದ್ದರು. ಹಿಂದೂಗಳ ಮಹಾಕಾವ್ಯ ರಾಮಾಯಣಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರ ನೀಡಲು ತಡಬಡಾಯಿಸಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕಟು ವಿಮರ್ಶೆಗೆ ಒಳಗಾಗಿದ್ದರು.

ಕೋಟ್ಯಧಿಪತಿಯಲ್ಲಿ ರಾಮಾಯಣದ ಬಗ್ಗೆ ಉತ್ತರ ಗೊತ್ತಿಲ್ಲದೇ ಒದ್ದಾಡಿದ ಸೋನಾಕ್ಷಿ

ರಾಮಾಯಣದ ಪ್ರಕಾರ ಹನುಮಂತ ಯಾರಿಗಾಗಿ ಸಂಜೀವಿನಿ ಪರ್ವತದಿಂದ ಗಿಡಮೂಲಿಕೆ ತರಲು ಹೋಗಿದ್ದನು? 

A. ಸುಗ್ರೀವ 
B. ಲಕ್ಷ್ಮಣ 
c. ಸೀತಾ 
D. ರಾಮ 

ಎಂದು ಕೇಳಲಾಗಿತ್ತು. ಸೋನಾಕ್ಷಿ ಗೊಂದಲಕ್ಕೀಡಾದರು. ಲೈಫ್ ಲೈನ್ ಬಳಸಿಕೊಂಡರು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದ್ದಾರೆ. ನೆಟ್ಟಿಗರು #YoSonakshiSoDumb' ಎಂದು ಹ್ಯಾಶ್ ಟ್ಯಾಗ್ ಹುಟ್ಟುಹಾಕಿ ಕಾಲೆಳೆಯುತ್ತಿದ್ದಾರೆ. ಟ್ವಿಟರ್ ನಲ್ಲಿ #YoSonakshiSoDumb ಟ್ರೆಂಡಿಗ್ ನಲ್ಲಿದೆ. ನೆಟ್ಟಿಗರು ಬಿಡಿ ಇಂತದ್ದೊಂದು ಸುಲಭವಾದ ಪ್ರಶ್ನೆಗೆ ಲೈಫ್ ಲೈನ್ ಬಳಸಿದ್ದಕ್ಕೆ ಸ್ವತಃ ಅಮಿತಾಬ್ ಕೂಡಾ ತಮಾಷೆ ಮಾಡಿದರು.