ಈ ಸೋಶಿಯಲ್ ಮೀಡಿಯಾಗಳೆ ಹಾಗೆ, ಯಾವ ಕಾರಣಕ್ಕೆ ಯಾವ ದಿನ ಯಾವುದು ಟ್ರೋಲ್ ಗೆ ಒಳಗಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಒಳ್ಳೆಯ ಸಲಹೆಗಳನ್ನು ನೀಡಲಾಗುತ್ತದೆ. ಇಲ್ಲಿ ಆಗಿರುವುದು ಅದೆ.

ಲೆಫ್ಟ್ ರೈಟ್ ಲೆಫ್ಟ್ ಮತ್ತು ಹಿಪ್ ಹಿಪ್ ಹುರ್ರೆ ಶೋಗಳ ಮುಖೇನ ಕಿರುತರೆಯಲ್ಲಿ ಸ್ಟಾರ್ ಪಟ್ಟ ಗಳಿಸಿಕೊಂಡಿರುವ ಶ್ವೇತಾ ಸಾಳ್ವೆ ಟ್ರೋಲಿಗರ ಆಹಾರಕ್ಕೆ ಗುರಿಯಾಗಿದ್ದಾರೆ. ವೈನ್ ಹೀರುತ್ತ ಸಿಗರೇಟು ಸೇದುತ್ತ ಕುಳಿತುಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೋರ್ನ್ ಬ್ಯಾನ್, ಸೋಶಿಯಲ್ ಮೀಡಿಯಾ ರಿಯಾಕ್ಷನ್.. ಅಬ್ಬಬ್ಬಾ!

ನಿಮಗೆ 2 ವರ್ಷದ ಮಗುವಿದೆ. ಆ ಮಗುವಿನ ಮೇಲೆ ಇದು ಪರಿಣಾಮ ಬೀರುವುದಿಲ್ಲವೇ ಎಂದು ಟ್ರೋಲಿಗರು ಪ್ರಶ್ನೆ ಮಾಡಿದ್ದಾರೆ. ದಿನ ಅಂದರೆ ಹೀಗಿರಬೇಕು. ಹೌದು ನಾನು ಕುಡಿಯುತ್ತೇನೆ , ಸೇದುತ್ತೇನೆ ಇದು ನನ್ನ ಅಸಲಿತನ,, ಪ್ರಾಮಾಣಿಕತನ ಎಂದೂ ಮುಂತಾಗಿ ಬರೆದುಕೊಂಡಿದ್ದ ಕಿರುತೆರೆ ಸ್ಟಾರ್ ಈಗ ಟ್ರೋಲಿಗರಿಂದ ಆಕ್ರೋಶ ತಡೆದುಕೊಳ್ಳಬೇಕಾಗಿದೆ.

View post on Instagram
View post on Instagram